ETV Bharat / bharat

ಸನ್ನಿ ಲಿಯೋನ್​​​ 'ಮಧುಬನ್​' ಹಾಡಿಗೆ ಪುರೋಹಿತರ ವಿರೋಧ..!

author img

By

Published : Dec 25, 2021, 8:07 AM IST

ಬಾಲಿವುಡ್​​ ಬ್ಯೂಟಿ ಕ್ವೀನ್​ ಸನ್ನಿ ಲಿಯೋನ್​​ ಆಲ್ಬಮ್​ ಸಾಂಗ್ 'ಮಧುಬನ್​' ಬಿಡುಗಡೆಯಾಗಿದೆ. ಆದ್ರೆ ಈ ವಿಡಿಯೋವನ್ನು ಯೂಟ್ಯೂಬ್​​ನಿಂದ ತೆಗೆದು ಹಾಕುವಂತೆ ಕೆಲವು ಪುರೋಹಿತರು ಆಗ್ರಹಿಸಿದ್ದಾರೆ. ಈ ಹಾಡು ಹಿಂದೂಗಳ ಭಾವನೆಗೆ ದಕ್ಕೆ ತರುತ್ತದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಮಧುಬನ್​​​ ವಿಡಿಯೋ ಸಾಂಗ್
ಸನ್ನಿ ಲಿಯೋನ್

ಹೈದರಾಬಾದ್​: ಹಾಟ್ ಬ್ಯೂಟಿ ಸನ್ನಿ ಲಿಯೋನ್​ ಮಧುಬನ್​​​ ವಿಡಿಯೋ ಸಾಂಗ್​ ಯೂಟ್ಯೂಬ್​ನಲ್ಲಿ ಧೂಳೆಬ್ಬಿಸುತ್ತಿದೆ. ಆದ್ರೆ ಉತ್ತರ ಪ್ರದೇಶ ಮಥುರಾಗೆ ಸೇರಿದ ಕೆಲ ಪುರೋಹಿತರು ಈ ಹಾಡನ್ನು ನಿಷೇಧ ಮಾಡುವಂತೆ ಒತ್ತಾಯಿಸಿದ್ದಾರೆ.

ಸನ್ನಿ ಮಧುಬನ್​ ಹಾಡು 1960ರಲ್ಲಿ ಬಿಡುಗಡೆಯಾದ ಹಿಂದಿ 'ಕೋಹಿನೂರು' ಸಿನಿಮಾದ ಹಾಡು. ಈ ಹಾಡನ್ನು ದಿಗ್ಗಜ ಸಿಂಗರ್​ ಮಹಮ್ಮದ್​​ ರಫಿ ಹಾಡಿದ್ದಾರೆ. ಸದ್ಯ ಈ ಹಾಡನ್ನ ರಿಮಿಕ್ಸ್​ ಮಾಡಿ ಆಲ್ಬಮ್​ ಸಾಂಗ್​​ ತಯಾರಿಸಿ ಬಿಡುಗಡೆ ಮಾಡಲಾಗಿದೆ.

ಈ ಹಾಡು ರಾಧಾ ಮತ್ತು ಕೃಷ್ಣನ ನಡುವಿನ ಪ್ರೀತಿಯನ್ನು ವಿವರಿಸುವ ಸಾಹಿತ್ಯವನ್ನು ಹೊಂದಿದೆ. ಇಂತಹ ಹಾಡಿಗೆ ಸನ್ನಿ ಸ್ಟೆಪ್ ಹಾಕಿರುವುದು ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದೆ ಎಂದು ಹಲವು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸರ್ಕಾರ ಈ ವಿಡಿಯೋವನ್ನು ನಿಷೇಧಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಬೃಂದಾವನ ಸಂತ ನವಲ ಗಿರಿ ಮಹಾರಾಜ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.