ETV Bharat / bharat

ಸುಲ್ಲಿ ಡೀಲ್ಸ್, ಬುಲ್ಲಿ ಬಾಯ್‌ ಆ್ಯಪ್‌ಗಳ ಮಾಸ್ಟರ್‌ಮೈಂಡ್‌ಗಳಿಗೆ ದೆಹಲಿ ಕೋರ್ಟ್‌ ಜಾಮೀನು

author img

By

Published : Mar 29, 2022, 9:29 AM IST

ಸುಲ್ಲಿ ಡೀಲ್ಸ್ ಮತ್ತು ಬುಲ್ಲಿ ಬಾಯ್ ಅಪ್ಲಿಕೇಶನ್‌ಗಳ ಮಾಸ್ಟರ್‌ಮೈಂಡ್‌ಗಳಿಗೆ ದೆಹಲಿಯ ಸ್ಥಳೀಯ ನ್ಯಾಯಾಲಯ ನಿನ್ನೆ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯವು ಮಾನವೀಯ ಆಧಾರದ ಮೇಲೆ ಜಾಮೀನು ನೀಡಿದೆ ಎಂದು ಡಿಸಿಪಿ ಕೆಪಿಎಸ್‌ ಮಲ್ಹೋತ್ರ ಮಾಹಿತಿ ನೀಡಿದ್ದಾರೆ.

Sulli Deals Bulli Bai app creators granted bail
ಸುಲ್ಲಿ ಡೀಲ್ಸ್, ಬುಲ್ಲಿ ಬಾಯ್‌ ಆ್ಯಪ್‌ಗಳ ಮಾಸ್ಟರ್‌ಮೈಂಡ್‌ಗಳಿಗೆ ದೆಹಲಿ ಕೋರ್ಟ್‌ ಜಾಮೀನು

ನವದೆಹಲಿ: ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡಿ ಜೈಲು ಸೇರಿದ್ದ ಸುಲ್ಲಿ ಡೀಲ್ಸ್ ಮತ್ತು ಬುಲ್ಲಿ ಬಾಯ್ ಅಪ್ಲಿಕೇಶನ್‌ಗಳ ಮಾಸ್ಟರ್‌ಮೈಂಡ್‌ಗಳಿಗೆ ದೆಹಲಿಯ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಿಸಿಪಿ ಕೆಪಿಎಸ್‌ ಮಲ್ಹೋತ್ರ ಮಾಹಿತಿ ನೀಡಿದ್ದು, ಸುಲ್ಲಿ ಡೀಲ್ ಆ್ಯಪ್ ಸೃಷ್ಟಿಕರ್ತ ಆರೋಪಿ ಔಮ್ಕಾರೇಶ್ವರ್ ಠಾಕೂರ್, ಬುಲ್ಲಿ ಬಾಯ್ ಆ್ಯಪ್‌ನ ನೀರಜ್ ಬಿಷ್ಣೋಯ್‌ಗೆ ಜಾಮೀನು ನೀಡಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಫಲಿತಾಂಶಗಳು ಹಾಗೂ ಮಧ್ಯವರ್ತಿಗಳಿಂದ ಉತ್ತರ ಪಡೆಯುವುದು ಇನ್ನೂ ಬಾಕಿ ಇದೆ ಎಂದು ಹೇಳಿದ್ದಾರೆ.

ನ್ಯಾಯಾಲಯವು ಮಾನವೀಯತೆ ಆಧಾರದ ಮೇಲೆ ಜಾಮೀನು ನೀಡಿದೆ ಮಲ್ಹೋತ್ರ ಮಾಹಿತಿ ನೀಡಿದ್ದಾರೆ. ಮಧ್ಯಪ್ರದೇಶದ ಇಂದೋರ್ ನಿವಾಸಿ 25 ವರ್ಷದ ಠಾಕೂರ್ ಅವರನ್ನು ಜನವರಿ 8 ರಂದು ದೆಹಲಿ ಪೊಲೀಸರು ಬಂಧಿಸಿದ್ದರು. 2021ರ ಜುಲೈ 2021 ರಲ್ಲಿ ಅಪ್ಲಿಕೇಶನ್‌ನಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಹರಾಜು ಹಾಕುವ ಮೂಲಕ ವಿವಾದ ಸೃಷ್ಟಿಸಿದ್ದರು.

ದೆಹಲಿ ಪೊಲೀಸರ ಸೈಬರ್ ಕ್ರೈಂ ಘಟಕವು ಜುಲೈ 8 ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354-A (ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಕಿರುಕುಳಕ್ಕೆ ಶಿಕ್ಷೆ) ಅಡಿ ಎಫ್‌ಐಆರ್ ದಾಖಲಿಸಿತ್ತು. ದೆಹಲಿ ಮೂಲದ ಬುಲ್ಲಿ ಬಾಯ್ 2022ರ ಜನವರಿಯಲ್ಲಿ ಬೆಳಕಿಗೆ ಬಂದಿದ್ದು, ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ತನ್ನನ್ನು ಗುರಿಯಾಗಿಸಿಕೊಂಡಿದ್ದಾರೆಂದು ಮಹಿಳಾ ಪತ್ರಕರ್ತೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.

ಅಪ್ಲಿಕೇಶನ್ ಅನ್ನು ಗಿತುಬ್‌ನಲ್ಲಿ ಹೋಸ್ಟ್ ಮಾಡಲಾಗಿದೆ. ಬುಲ್ಲಿ ಬಾಯ್ ಆ್ಯಪ್‌ನಲ್ಲೂ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಪ್ರಸಿದ್ಧ ವ್ಯಕ್ತಿಗಳು ಸೇರಿದಂತೆ ಹಲವಾರು ಮಹಿಳೆಯರ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದ ಆರೋಪ ಇತ್ತು. ನೂರಾರು ಮುಸ್ಲಿಂ ಮಹಿಳೆಯರನ್ನು ಹರಾಜಿಗೆ ಪಟ್ಟಿಮಾಡಿತ್ತು ಎನ್ನಲಾಗಿದೆ. ಇದರ ಸೃಷ್ಟಿಕರ್ತ ನೀರಜ್ ಬಿಷ್ಣೋಯ್ ಅವರನ್ನು ಜನವರಿ 6 ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಇದೀಗ ಎರಡೂ ಆ್ಯಪ್‌ಗಳನ್ನು ನಿರ್ಮಿಸಿದ್ದವರಿಗೆ ಜಾಮೀನು ದೊರೆತಿದೆ.

ಇದನ್ನೂ ಓದಿ: ಸುಲ್ಲಿ ಡೀಲ್​ ಆ್ಯಪ್​ನಲ್ಲಿ ಮುಸ್ಲಿಂ ಹುಡುಗಿಯರೇ ಟಾರ್ಗೆಟ್​.. ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡ್ತಿದ್ದವರ ಹರಾಜು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.