ETV Bharat / bharat

ಮೈ ಬೇಬಿ ಗರ್ಲ್ ಜಾಕಿ​.. ಜೈಲಿನಿಂದಲೇ ಪತ್ರ ಬರೆದು ಜಾಕ್ವೆಲಿನ್​ಗೆ ಹೋಳಿ ಶುಭಾಶಯ ಹೇಳಿದ ಸುಕೇಶ್​ - ತಿಹಾರ್ ಜೈಲಿನಲ್ಲಿರುವ ಕಾನ್ ಮ್ಯಾನ್ ಸುಕೇಶ್ ಚಂದ್ರಶೇಖರ್

ವಂಚನೆ ಆರೋಪದಲ್ಲಿ ಜೈಲಿನಲ್ಲಿರುವ ಸುಕೇಶ್​ ಚಂದ್ರಶೇಖರ್​ ಮಾಜಿ ಪ್ರೇಯಸಿ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಪತ್ರ ಬರೆದು ಹೋಳಿ ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.

Sukesh with Actress Jacqueline
ನಟಿ ಜಾಕ್ವೆಲಿನ್​ ಜೊತೆ ಸುಕೇಶ್​
author img

By

Published : Mar 7, 2023, 4:15 PM IST

Updated : Mar 7, 2023, 4:25 PM IST

ನವದೆಹಲಿ: 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿರುವ ಕಾನ್ ಮ್ಯಾನ್ ಸುಕೇಶ್ ಚಂದ್ರಶೇಖರ್ ತಮ್ಮ ಮಾಜಿ ಪ್ರೇಯಸಿ ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಪತ್ರವೊಂದನ್ನು ಬರೆದು ಹೋಳಿ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಪತ್ರದಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿರುವ ಸುಕೇಶ್​ ಹಬ್ಬದ ಸಂದರ್ಭದಲ್ಲಿ ತಮ್ಮ ಮಾಜಿ ಪ್ರೇಯಸಿ ಜಾಕ್ವೆಲಿನ್ ಫರ್ನಾಂಡಿಸ್​​ ಅವರನ್ನು ನೆನಪಿಸಿಕೊಂಡಿದ್ದಾರೆ.

ಪತ್ರದಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರನ್ನು ಉದ್ದೇಶಿಸಿ ಮಾತ್ರವಲ್ಲದೇ ಮಾಧ್ಯಮಗಳನ್ನು ಉದ್ದೇಶಿಸಿಯೂ ಕೆಲವೊಂದು ಸಾಲುಗಳನ್ನು ಬರೆದಿದ್ದಾರೆ. ತಮ್ಮ ಪರವಾದ ಆವೃತ್ತಿಯನ್ನೂ ಬಿತ್ತರಿಸಿರುವ ಮಾಧ್ಯಮಗಳಿಗೆ ಧನ್ಯವಾದಗಳನ್ನು ಹೇಳಿರುವ ಸುಖೇಶ್​, ತಮ್ಮ ಕುಟುಂಬ, ಸ್ನೇಹಿತರು, ಬೆಂಬಲಿಗರು ಮತ್ತು ದ್ವೇಷಿಗಳು ಮತ್ತು ಕಾನೂನು ತಂಡಕ್ಕೆ ಹೋಳಿ ಹಬ್ಬದ ಶುಭಾಶಯಗಳನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.

ಪತ್ರದಲ್ಲಿ ಜಾಕ್ವೆಲಿನ್​ ಅನ್ನು 'ಅತ್ಯಂತ ಅದ್ಭುತ ವ್ಯಕ್ತಿ' ಎಂದು ಉಲ್ಲೇಖಿಸಿರುವ ಸುಕೇಶ್, ಅದ್ಭುತ ಹಾಗೂ ನನ್ನ ಎಂದೆಂದಿಗೂ ಸುಂದರಿಯಾಗಿರುವ ಜಾಕ್ವೆಲಿನ್‌ಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ಬಣ್ಣಗಳ ಹಬ್ಬದ ಈ ದಿನದಂದು, ನಿನ್ನ ಜೀವನದಲ್ಲಿ ಕಣ್ಮರೆಯಾ ಬಣ್ಣಗಳು ಶೇ ನೂರರಷ್ಟು ಮತ್ತೆ ನಿನ್ನ ಜೀವನವನ್ನು ತುಂಬಲಿ. ಈ ವರ್ಷವಿಡೀ ನಿನ್ನ ಜೀವನ ಹೊಳಪಿನಿಂದ ಕೂಡಿರಲಿ ಮೈ ಸ್ಟೈಲ್​. ಅವುಗಳನ್ನು ನಿನ್ನ ಜೀವನದಲ್ಲಿ ಮತ್ತೆ ತರುವುದು ನನ್ನ ಜವಾಬ್ದಾರಿ ಎನ್ನುವ ಆಶ್ವಾಸನೆಯನ್ನು ಕೊಡುತ್ತೇನೆ' ಎಂದು ಪತ್ರದಲ್ಲಿ ಬರೆಯಲಾಗಿದೆ.

ನಾನು ನಿನಗೋಸ್ಕರ ಯಾವ ಮಟ್ಟಕ್ಕಾದರೂ ಹೋಗಬಲ್ಲೆ ಎನ್ನುವುದು ನಿನಗೆ ಗೊತ್ತು ಬೇಬಿ ಗರ್ಲ್​. ಐ ಲವ್​ ಯೂ ಮೈ ಬೇಬಿ ನಗು ನಗುತ್ತಾ ಇರು. ನೀನು ನನಗೆಷ್ಟು ಮುಖ್ಯ ಎನ್ನುವುದು ನಿನಗೆ ಗೊತ್ತು. ಲವ್ ಯು ಮೈ ಪ್ರಿನ್ಸೆಸ್, ಮಿಸ್ ಯು ಲಾಟ್ಸ್​, ಮೈ ಬೀ. ಮೈ ಬೊಮ್ಮ, ನನ್ನ ಲವ್​' ಎಂದು ಪತ್ರದಲ್ಲಿದೆ. ಈ ಹಿಂದೆ, ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಸುಕೇಶ್​ ಪ್ರೇಮಿಗಳ ದಿನದಂದು ಜಾಕ್ವೆಲಿನ್​ಗೆ ವಿಶ್​ ಮಾಡಿದ್ದರು.

ದೆಹಲಿಯ ಪಟಿಯಾಲಾ ಕೋರ್ಟ್‌ನಲ್ಲಿ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಸುಕೇಶ್ ಚಂದ್ರಶೇಖರ್ ಅವರು ಜಾಕ್ವೆಲಿನ್ ಫರ್ನಾಂಡೀಸ್ ಹಗರಣದಲ್ಲಿ ಭಾಗಿಯಾಗಿಲ್ಲ ಮತ್ತು ಅವಳನ್ನು ರಕ್ಷಿಸಲು ತಾನು ಇಲ್ಲಿರುವ ಕಾರಣ ಅವಳು ಚಿಂತಿಸಬೇಕಾಗಿಲ್ಲ ಎಂದು ಹೇಳಿದ್ದಾರೆ. ಆದರೆ, ಜಾಕ್ವೆಲಿನ್ ಫರ್ನಾಂಡೀಸ್ ಮಾತ್ರ ಸುಕೇಶ್​ ತನ್ನ ಜೀವನವನ್ನು ನರಕವಾಗಿಸಿದ ಮತ್ತು ತನ್ನ ವೃತ್ತಿಜೀವನ ಮತ್ತು ಜೀವನೋಪಾಯವನ್ನೇ ಹಾಳುಮಾಡಿದ್ದಾನೆ ಎಂದೇ ಸಮರ್ಥಿಸಿಕೊಂಡಿದ್ದಾರೆ.

ಮಾಜಿ ರೆಲಿಗೇರ್ ಪ್ರವರ್ತಕ ಮಲ್ವಿಂದರ್ ಸಿಂಗ್ ಸಹೋದರ ಶಿವಿಂದರ್​ ಸಿಂಗ್​ ಪತ್ನಿ ಅದಿತಿ ಸಿಂಗ್​ ಅವರಿಗೆ ಸುಮಾರು 200 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪದಲ್ಲಿ ಸುಕೇಶ್ ಚಂದ್ರಶೇಖರ್ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಆತ ನನ್ನ ಭಾವನೆಗಳೊಂದಿಗೆ ಆಟವಾಡಿ, ನನ್ನ ಜೀವನವನ್ನೇ ನರಕ ಮಾಡಿದ್ದಾನೆ: ನಟಿ ಜಾಕ್ವೆಲಿನ್ ಅಳಲು

Last Updated : Mar 7, 2023, 4:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.