ETV Bharat / bharat

Success stories of IPS officers; ಪೊಲೀಸ್​ ವೃತ್ತಿಯಡೆಗಿನ ಸೆಳೆತ.. ಐಪಿಎಸ್​ ಸಾಧಕಿಯರ ಯಶೋಗಾಥೆ

ಇವರಿಗೆ ನಾಗರಿಕ ಸೇವೆಗೆ ಆಯ್ಕೆ ಮಾಡಿಕೊಂಡು ಜನರ ಸೇವೆಗೆ ಸಿದ್ಧರಾಗಲು ಅವರಿಗೆ ಪ್ರೇರೇಪಿಸಿದ ಕ್ಷಣ, ಪೊಲೀಸ್​​ ತರಬೇತಿಯಲ್ಲಿನ ಅವರ ಅನುಭವ ಕುರಿತು ಈಟಿವಿ ಭಾರತ್​ನೊಂದಿಗೆ ಅವರು ಮಾತನಾಡಿದ್ದಾರೆ.

success-stories-of-ips-officers-who-completed-her-training-as-police

author img

By ETV Bharat Karnataka Team

Published : Oct 26, 2023, 12:54 PM IST

ಹೈದರಾಬಾದ್​: ಸ್ಚಚ್ಛತಾ ಕಾರ್ಮಿಕರಿಗಾಗಿ ಹೋರಾಡಿ ಅವರ ಗೆಲುವಿನೊಂದಿಗೆ ತಮ್ಮ ಗೆಲುವು ಕಂಡವರು ವಕೀಲೆ ಇಶಾ ಸಿಂಗ್​​. ಕಂಬೈಂಡ್​​ ಡಿಫೆನ್ಸ್​ ಸರ್ವೀಸ್​ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಆರನೇ ರ್ಯಾಂಕ್​ ಪಡೆದವರು ಸಿಮ್ರಾನ್​. ಕೃತಕ ಬುದ್ಧಿಮತ್ತೆ ಮತ್ತು ಮಷಿನ್​ ಲರ್ನಿಂಗ್​ನಲ್ಲಿ ತಮ್ಮನ್ನು ಸಾಬೀತು ಪಡಿಸಿಕೊಂಡವರು ಅನುಷ್ಟಾ. ವಿವಿಧ ವೃತ್ತಿ ಹಿನ್ನೆಲೆಯಿಂದ ಬಂದ ಈ ಮಹಿಳೆಯರು ಇಂದು ತಮ್ಮ ಐಪಿಎಸ್​ ತರಬೇತಿಯನ್ನು ಮುಗಿಸಿ, ಜನರ ಸೇವೆಗೆ ಸಿದ್ಧರಾಗಿದ್ದಾರೆ. ಈ ಸಂದರ್ಭದಲ್ಲಿ ನಾಗರಿಕ ಸೇವೆಗೆ ಆಯ್ಕೆ ಮಾಡಿಕೊಂಡು ಜನರ ಸೇವೆಗೆ ಸಿದ್ಧರಾಗಲು ಅವರಿಗೆ ಪ್ರೇರೇಪಿಸಿದ ಕ್ಷಣ, ಪೊಲೀಸ್​​ ತರಬೇತಿಯಲ್ಲಿನ ಅವರ ಅನುಭವ ಕುರಿತು ಈಟಿವಿ ಭಾರತ್​ನೊಂದಿಗೆ ಅವರು ಮಾತನಾಡಿದ್ದಾರೆ..

ಕಮಾಂಡ್​ ಪರೇಡ್​ ನೇತೃತ್ವ ವಹಿಸಿದ ಅನುಷ್ಟಾ ಕಲಿಯಾ: ದೆಹಲಿಯಲ್ಲಿ ಸಂಪೂರ್ಣ ಶಿಕ್ಷಣ ಮುಗಿಸಿದ ಅನುಷ್ಟಾ ಬಿಟೆಕ್​ ಪದವೀಧರೆ. ಬಳಿಕ ಡೇಟಾ ಸೈಂಟಿಸ್ಟ್​ ಆಗಿ ಉದ್ಯೋಗ ಆರಂಭಿಸಿದರು. ಮಷಿನ್​ ಲರ್ನಿಂಗ್​ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಇದೇ ವೇಳೆ ಸ್ನಾತಕೋತ್ತರ ಪದವಿಯನ್ನು ಮನಶಾಸ್ತ್ರದಲ್ಲಿ ಪೂರೈಸಿದರು. ಈ ಸಮಯದಲ್ಲಿ ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಹೊಂದಿದ್ದ ಅವರು ನಾಗರಿಕ ಸೇವಾ ಪರೀಕ್ಷೆಯತ್ತ ಗಮನ ಹರಿಸಿದರು. ಮೊದಲ ಪ್ರಯತ್ನದಲ್ಲೇ 143ನೇ ರ್ಯಾಂಕ್​ ಪಡೆದು ಐಪಿಎಸ್​​ಗೆ ಆಯ್ಕೆಯಾದರು. ಪೊಲೀಸ್​ ಅಕಾಡೆಮಿಯಲ್ಲಿ ಒಳಾಂಗಣ ಮತ್ತು ಹೊರಾಂಗಣದಲ್ಲಿ ತರಬೇತಿ ವೇಳೆ ಕಠಿಣ ಶ್ರಮಪಟ್ಟರು. ಈ ವೇಳೆ ಅನೇಕ ದೈಹಿಕ ಮತ್ತು ಮಾನಸಿಕ ಸವಾಲನ್ನು ದಾಟಿ ಬಂದೆ ಎಂದ ಅವರು ತರಬೇತಿ ವೇಳೆ ತಿಂಗಳ ಕಾಲ ಅರಣ್ಯದ ವಾರ್​ಫೇರ್​ ತರಬೇತಿ ಬಲು ಕಷ್ಟದ ತರಬೇತಿ ಎಂದು ಮೆಲುಕು ಹಾಕಿದರು. ಪ್ರತಿನಿತ್ಯದ ತರಬೇತಿ ತ್ರಾಸದಾಯಕವಾಗಿತ್ತು. ಈ ಕಷ್ಟವನ್ನು ಜಯಿಸಿ ನಾನು ಒಟ್ಟಾರೆ ತರಬೇತಿಯಲ್ಲಿ ಅತ್ಯುತ್ತಮ ಔಟ್​ಡೋರ್​​ ಪ್ರೊಬೇಷನರ್​ ಆದೆ. ಈ ವೇಳೆ ಪ್ರತಿಷ್ಠಿತ ಐಪಿಎಸ್​ ಆಫೀಸರ್​​ಗಳ ಸ್ವರ್ಡ್​ ಆಫ್​​​ ಆನರ್(Sword of honor)​​ ಅನ್ನು ಪಡೆದೆ. ದೀಕ್ಷಿತ್​ ಪರೇಡ್​ನಲ್ಲಿ ನಾನು ಕಮಾಂಡರ್​ ಆಗಿದ್ದೇನೆ. ಎಜಿಎಂಯುಟಿ ಕೇಡರ್​ ಅಲ್ಲಿ ಕೆಲಸ ಮಾಡಲು ಸಜ್ಜಾಗಿದ್ದೇನೆ ಎನ್ನುವ ಅವರು, ಪೊಲೀಸ್​ ವೃತ್ತಿಯ ಬಗ್ಗೆ ಅನೇಕ ಮಹಿಳೆಯರಲ್ಲಿ ತಪ್ಪು ಕಲ್ಪನೆಗಳಿವೆ. ಆದರೆ, ಮಹಿಳೆ ಮಾತ್ರ ತನ್ನ ಜೊತೆಗಿನ ಮಹಿಳೆಯರ ಸಮಸ್ಯೆ ಅನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಇದೇ ಕಾರಣಕ್ಕೆ ಯುವತಿಯರಿಗೆ ನಾನು ಈ ಕ್ಷೇತ್ರದಲ್ಲಿ ಗಮನಹರಿಸುವಂತೆ ಸಲಹೆ ನೀಡುತ್ತೇನೆ ಎಂದರು.

ವಕೀಲೆ ವೃತ್ತಿಯಿಂದ ಐಪಿಎಸ್​​ ಆದ ಇಶಾ ಸಿಂಗ್: ನಾನು ಉತ್ತರ ಪ್ರದೇಶ ಮೂಲದವಳಾಗಿದ್ದರೂ ನನ್ನ ತಂದೆ ವೈಪಿ ಸಿಂಗ್​​ ಮಹಾರಾಷ್ಟ್ರ ಕೇಡರ್​ ಐಪಿಎಸ್​​ ಆಗಿದ್ದರಿಂದ ನನ್ನ ಶಿಕ್ಷಣವೆಲ್ಲಾ ಮುಂಬೈನಲ್ಲಿ ನಡೆಯಿತು. ಇಲ್ಲಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕಾನೂನು ಪದವಿ ಕಲಿತು, ಮುಂಬೈ ಹೈಕೋರ್ಟ್​ನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ್ದೆ. ಸ್ವಚ್ಛತಾ ಕೆಲಸಗಾರರು ತಮ್ಮ ಕೆಲಸದ ವೇಳೆ ಮೃತಪಟ್ಟರೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂಬ ಬೇಡಿಕೆಯ ಪ್ರಕರಣವನ್ನು ಗೆದ್ದಿದ್ದ ಗಳಿಗೆ ನನ್ನ ಜೀವಮಾನದ ಮರೆಯಲಾಗದ ಅನುಭವ. ಆದರೆ, ನನ್ನ ಮೇಲೆ ನನ್ನ ತಂದೆಯ ಪ್ರಭಾವ ಹೆಚ್ಚಿತ್ತು. ಇದೇ ಕಾರಣಕ್ಕೆ ನಾನು ವಕೀಲ ವೃತ್ತಿಗಿಂತ ಹೆಚ್ಚಾಗಿ ಐಪಿಎಸ್​ ಆದಲ್ಲಿ ಸೇವೆ ಸಲ್ಲಿಸಬಹುದು ಎಂದು ನಿರ್ಧರಿಸಿದೆ. ಅಪರಾಧಯೇತರ ಪ್ರಕರಣಗಳು ಪೊಲೀಸರ ಸಹಾಯವನ್ನು ಬೇಡುತ್ತವೆ. ಕಾನೂನಿನ ಹಿನ್ನೆಲೆ ಹೊಂದಿರುವುದು ನನಗೆ ಹೆಚ್ಚಿನ ಪ್ರಯೋಜನ ಕೂಡ ಆಗಬಹುದು ಎಂದು ನಿರ್ಧರಿಸಿದೆ. ಮೊದಲ ಪ್ರಯತ್ನದಲ್ಲೇ ಐಪಿಎಸ್​ ಆದೆ. ಪ್ರಸ್ತುತ ಸಾಂಪ್ರದಾಯಿಕ ಅಪರಾಧ ಚಟುವಟಿಕೆ ಕಡಿಮೆಯಾಗಿದ್ದು, ಸೈಬರ್​ ಕ್ರೈಂಗಳು ಹೆಚ್ಚಿವೆ. ಇದನ್ನು ಕಡಿಮೆ ಮಾಡುವುದು ನನ್ನ ಗುರಿ ಎನ್ನುತ್ತಾರೆ ಇಶಾ ಸಿಂಗ್​.

ಸೇನೆಯಿಂದ ಐಪಿಎಸ್​ - ಸಿಮ್ರಾನ್​ ಭಾರಧ್ವಾಜ್​: ನನ್ನ ಊರು ಹರಿಯಾಣ. ನನ್ನ ತಂದೆ ಸೇನೆಯಲ್ಲಿ ಲೆಫ್ಟಿನೆಂಟ್​ ಕರ್ನಲ್​ ಆಗಿದ್ದವರು. ಅವರ ಉದ್ಯೋಗದಿಂದಾಗಿ ನಾನು ವಿವಿಧ ಪ್ರದೇಶದಲ್ಲಿ ಶಿಕ್ಷಣ ಪೂರೈಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್​​ ಮುಗಿಸಿ, ದೆಹಲಿಯ ಕಮಲಾ ನೆಹರೂ ಕಾಲೇಜ್​ನಲ್ಲಿ ಜರ್ನಲಿಸಂ ಮಾಡಿದೆ. ಈ ವೇಳೆ ಕೂಡ ನನ್ನ ಗುರಿ ನಾಗರಿಕ ಸೇವೆ ಮೇಲೆ ಇತ್ತು. ಜನರ ಸೇವೆಗೆ ಉತ್ತಮ ಮಾರ್ಗವಾಗಿ ಗೋಚರಿಸಿತು. ಈ ಹಿನ್ನೆಲೆ 2021ರಲ್ಲಿ ಕಂಬೈಂಡ್​ ಡಿಫೆನ್ಸ್​ ಸರ್ವೀಸ್​(ಸಿಡಿಎಸ್​ ಪರೀಕ್ಷೆಗೆ ಕುಳಿತು ಅಖಿಲ ರಾಷ್ಟ್ರ ಮಟ್ಟದಲ್ಲಿ ಆರನೇ ರ್ಯಾಂಕ್​ ಪಡೆದೆ. ಆದರೂ ಈ ವೇಳೆ ನನ್ನ ನಾಗರೀಕ ಸೇವೆ ಪ್ರಯತ್ನ ಬಿಡಲಿಲ್ಲ. ನಾವು ಶ್ರದ್ಧೆಯಿಂದ ಅಧ್ಯಯನ ಮಾಡಿದೆ. ಯುಪಿಎಸ್​ಸಿ ಟಾಪರ್ಸ್​​​ ವಿಡಿಯೋವನ್ನು ನೋಡುತ್ತಿದ್ದೆ. ಕೋವಿಡ್​ ಲಾಕ್​ಡೌನ್​ ವೇಳೆ ಈ ಕುರಿತು ಯೋಜನೆ ರೂಪಿಸಿದೆ. ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ 172ನೇ ರ್ಯಾಂಕ್​ ಪಡೆದೆ. ಗುಜರಾತ್​ ಕೇಡರ್​ ಅಧಿಕಾರಿಯಾಗಿದ್ದು, ಅಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ಗುರಿ ಹೊಂದಿದ್ದೇನೆ. ಕರಾವಳಿ ಸೇನೆ ಮತ್ತು ನಕ್ಸಲಿಸಂನಂತಹ ಆಂತರಿಕ ಭದ್ರತೆ ಮೇಲೆ ನಾನು ಹೆಚ್ಚು ಕೇಂದ್ರಿತವಾಗಿದ್ದೇನೆ ಎಂದರು.

ಇದನ್ನೂ ಓದಿ: Success Story: ರೋಗಿಗಳ ಊಟ ಎಂದು ಜರಿದರೂ ಕಿಚಡಿಯಲ್ಲೇ ಕೋಟಿ ಕೋಟಿ ಲಾಭ ಗಳಿಸಿದ ಯುವತಿ.. ಯಾರೀ ಸಾಧಕಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.