ರಾಂಚಿ(ಜಾರ್ಖಂಡ್): ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದರೂ ಅವರನ್ನು ದೇವರಂತೆ ಪೂಜಿಸುವ ಕೆಲ ಅಭಿಮಾನಿಗಳಿದ್ದಾರೆ. ಅವರಲ್ಲಿ ಒಬ್ಬರು ಸುಬೋಧ್ ಕುಶ್ವಾಹಾ. ಮಹೇಂದ್ರ ಸಿಂಗ್ ಧೋನಿಯ ಅಪ್ಪಟ ಅಭಿಮಾನಿ ಸುಬೋಧ್ ತಮ್ಮ ಕೋಣೆಯಲ್ಲಿ ದೇವರ ಚಿತ್ರದೊಂದಿಗೆ ಮಹೇಂದ್ರ ಸಿಂಗ್ ಧೋನಿ ಫೋಟೋ ಸಹ ಇಟ್ಟುಕೊಂಡಿರುವುದು ವಿಶೇಷ.
ಧೋನಿಯ ಅಪ್ಪಟ ಅಭಿಮಾನಿ ಸುಬೋಧ್ ಬಿಹಾರದ ಹಾಜಿಪುರ ನಿವಾಸಿ. ಮಹೇಂದ್ರ ಸಿಂಗ್ ಧೋನಿ ಮೇಲಿನ ಪ್ರೀತಿ ಅವರನ್ನು ರಾಂಚಿಗೆ ಬರುವಂತೆ ಮಾಡಿತು. 8 ವರ್ಷಗಳ ಹಿಂದೆ ಸುಬೋಧ್ ರಾಂಚಿಗೆ ಬಂದು ಹರ್ಮುದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಅವರ ಮನೆಯ ಬಳಿ ಬಾಡಿಗೆ ಕೊಠಡಿಯಲ್ಲಿ ವಾಸಿಸಲು ಪ್ರಾರಂಭಿಸಿದ್ದು, ತಮ್ಮ ದೇವರ ದರ್ಶನ ಪಡೆಯಲು ಪ್ರಯತ್ನಿಸಿದರು.
ಮಹೇಂದ್ರ ಸಿಂಗ್ ಧೋನಿಯನ್ನು ನೋಡಿದ ನಂತರವೇ ಕ್ರಿಕೆಟ್ ಆಡಲು ಸುಬೋಧ್ ಪ್ರಾರಂಭಿಸಿದರಂತೆ. ಸುಬೋಧ್ ಒಬ್ಬ ಅತ್ಯುತ್ತಮ ಕ್ರಿಕೆಟಿಗ ಮತ್ತು ಅನೇಕ ರಾಜ್ಯ ಮಟ್ಟದ ಪಂದ್ಯಾವಳಿಗಳನ್ನೂ ಆಡಿದ್ದಾರೆ. ಅವರು ಭಾರತ ತಂಡದ ಸದಸ್ಯ ಇಶಾನ್ ಕಿಶನ್ ಅವರೊಂದಿಗೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಭಾರತ ತಂಡದಲ್ಲೂ ಕ್ರಿಕೆಟ್ ಆಡಬೇಕು ಎಂಬುದು ಅವರ ಕನಸಾಗಿತ್ತು. ಆದರೆ, ಅವರ ಕನಸು ನನಸಾಗಲು ಸಾಧ್ಯವಾಗಲಿಲ್ಲ. ಈಗ ಸುಬೋಧ್ ಮಾಹಿ ಹೆಸರಿನಲ್ಲಿ ತಮ್ಮದೇ ಆದ ಕ್ರಿಕೆಟ್ ತರಬೇತಿ ಕೇಂದ್ರವನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ.
ಓದಿ: ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬ.. 41 ಅಡಿ ಎತ್ತರದ ಕಟೌಟ್ ನಿರ್ಮಿಸಿದ ಅಭಿಮಾನಿಗಳು
ಬಹಳ ಸಮಯದಿಂದ ಮಹೇಂದ್ರ ಸಿಂಗ್ ಧೋನಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದೆ. ಆದ್ರೆ ನನ್ನ ಕನಸು 2021 ರಲ್ಲಿ ನೆರವೇರಿತು. ಅಂದಿನಿಂದ ಈ ಪ್ರವೃತ್ತಿ ಮುಂದುವರೆದಿದೆ. ಇದಾದ ಬಳಿಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಭೇಟಿಯಾಗುವ ಅವಕಾಶ ಹಲವು ಬಾರಿ ದೊರೆಯಿತು ಎಂದು ಸುಬೋಧ್ ಸಂತಸ ವ್ಯಕ್ತಪಡಿಸಿದ್ದಾರೆ.
ಧೋನಿ ಕೂಡ ಸುಬೋಧ್ ಬಗ್ಗೆ ತಿಳಿದುಕೊಳ್ಳಲು ಮತ್ತು ಗುರುತಿಸಲು ಪ್ರಾರಂಭಿಸಿದರು. ದುಬೈನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಸುಬೋಧ್ಗೆ ಮಹೇಂದ್ರ ಸಿಂಗ್ ಧೋನಿ ಜೆರ್ಸಿಯನ್ನು ರಾಂಚಿಗೆ ಕಳುಹಿಸಿದಾಗ ಇಬ್ಬರ ನಡುವಿನ ಪ್ರೀತಿ- ಅಭಿಮಾನ ಗಾಢವಾಯಿತು. ಆ ನಂತರ ಮಹೇಂದ್ರ ಸಿಂಗ್ ಧೋನಿ ಮೇಲಿನ ಸುಬೋಧ್ ಅಭಿಮಾನ ಮತ್ತಷ್ಟು ಹೆಚ್ಚಾಯಿತು. ಪ್ರತಿ ವರ್ಷ ಜುಲೈ 7 ರಂದು, ಮಹೇಂದ್ರ ಸಿಂಗ್ ಧೋನಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಸುಬೋಧ್ ತಮ್ಮ ಜನ್ಮದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.
ಕಣ್ಣು ತೆರೆದ ತಕ್ಷಣ ತಮ್ಮ ದೇವರನ್ನು ನೋಡುವ ಆಸೆಯಾಗುತ್ತದೆ ಎನ್ನುತ್ತಾರೆ ಸುಬೋಧ್. ಅದಕ್ಕಾಗಿಯೇ ಅವರು ಇಡೀ ಕೋಣೆಯನ್ನು ಮಹೇಂದ್ರ ಸಿಂಗ್ ಧೋನಿ ಅವರ ಚಿತ್ರಗಳಿಂದ ಅಲಂಕರಿಸಿದ್ದಾರೆ. ಸುಬೋಧ್ ಅವರ ಜೂನಿಯರ್ ಕ್ರಿಕೆಟಿಗ ಕೂಡ ಮಹೇಂದ್ರ ಸಿಂಗ್ ಧೋನಿಯ ಅಪ್ಪಟ ಅಭಿಮಾನಿಯಾಗಿದ್ದಾರೆ.