ETV Bharat / bharat

ನೀರೆಂದು ಭಾವಿಸಿ ಆ್ಯಸಿಡ್​ ಕುಡಿದ ವಿದ್ಯಾರ್ಥಿ : ಆಂತರಿಕ ಅಂಗಾಂಗಗಳಿಗೆ ಹಾನಿ - ನೀರೆಂದು ಆ್ಯಸಿಡ್​ ಕುಡಿದ ವಿದ್ಯಾರ್ಥಿ

ಆ್ಯಸಿಡ್ ಬಾಟಲ್ ನೀರಿನ ಬಾಟಲ್​ನಂತೆಯೇ ಕಾಣುತ್ತಿತ್ತು. ಅದನ್ನೇ ನೀರು ಎಂದು ಭಾವಿಸಿ ಚೈತನ್ಯ ಆ್ಯಸಿಡ್ ಅನ್ನು ಕುಡಿದಿದ್ದಾನೆ. ಆ್ಯಸಿಡ್​ ಸೇವಿಸಿದ ಕೂಡಲೇ ಅಸ್ವಸ್ಥನಾಗಿದ್ದ ಚೈತನ್ಯನನ್ನು ಆತನ ಸ್ನೇಹಿತರು ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ..

students-drinks-acid-mistaking-it-for-water-at-vijayawada
ನೀರೆಂದು ಭಾವಿಸಿ ಆ್ಯಸಿಡ್​ ಕುಡಿದ ವಿದ್ಯಾರ್ಥಿ: ಆಂತರಿಕ ಅಂಗಾಂಗಗಳಿಗೆ ಹಾನಿ
author img

By

Published : Apr 18, 2022, 2:19 PM IST

ವಿಜಯವಾಡ, ಆಂಧ್ರಪ್ರದೇಶ : ನೀರು ಎಂದು ಭಾವಿಸಿ ವಿದ್ಯಾರ್ಥಿಯೊಬ್ಬ ಆ್ಯಸಿಡ್ ಸೇವಿಸಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವಿಜಯವಾಡ ನಗರದ ಎಣಿಕೆಪಾಡು ಎಂಬಲ್ಲಿ ನಡೆದಿದೆ. ಕೃಷ್ಣಾ ಜಿಲ್ಲೆಯ ನಾಗಾಯಾಲಂಕಾ ಮೂಲದ ಕೋಸೂರು ಚೈತನ್ಯ ಆ್ಯಸಿಡ್​ ಕುಡಿದ ವಿದ್ಯಾರ್ಥಿ. ಈತ ವಿಜಯವಾಡದ ಲೊಯೋಲಾ ಕಾಲೇಜಿನಲ್ಲಿ ಪದವಿ ಅಂತಿಮ ವರ್ಷದ ವಾಯುಯಾನ ಕೋರ್ಸ್​ ಕಲಿಯುತ್ತಿದ್ದಾನೆ.

ನೀರೆಂದು ಭಾವಿಸಿ ಆ್ಯಸಿಡ್​ ಕುಡಿದ ವಿದ್ಯಾರ್ಥಿ : ಆಂತರಿಕ ಅಂಗಾಂಗಗಳಿಗೆ ಹಾನಿ

ಕೆಸರಪಲ್ಲಿ ಸಮೀಪದ ಬಾಡಿಗೆ ಮನೆಯಲ್ಲಿ ಗೆಳೆಯರೊಂದಿಗೆ ವಾಸವಾಗಿರುವ ಈತ ಇದೇ ತಿಂಗಳ 14ರಂದು ಎಣಿಕೆಪದವಿನಲ್ಲಿರುವ ಸ್ನೇಹಿತರ ಕೊಠಡಿಗೆ ಬಂದಿದ್ದನು. ಸಮೀಪದ ಕೂಲ್ ಡ್ರಿಂಕ್ಸ್ ಅಂಗಡಿಗೆ ಹೋಗಿ ಕುಡಿಯುವ ನೀರಿನ ಬಾಟಲ್ ಕೇಳಿದ್ದಾನೆ. ಅಂಗಡಿಯವನು ಚೈತನ್ಯನಿಗೆ ಫ್ರಿಡ್ಜ್‌ನಿಂದ ನೀರಿನ ಬಾಟಲಿಯನ್ನು ತೆಗೆದುಕೊಳ್ಳುವಂತೆ ಹೇಳಿದ್ದಾನೆ. ಚೈತನ್ಯ ಅವಸರದಲ್ಲಿ ನೀರಿನ ಬದಲು ಆ್ಯಸಿಡ್ ಸೇವಿಸಿದ್ದಾನೆ.

ಆ್ಯಸಿಡ್ ಬಾಟಲ್ ನೀರಿನ ಬಾಟಲ್​ನಂತೆಯೇ ಕಾಣುತ್ತಿತ್ತು. ಅದನ್ನೇ ನೀರು ಎಂದು ಭಾವಿಸಿ ಚೈತನ್ಯ ಆ್ಯಸಿಡ್ ಅನ್ನು ಕುಡಿದಿದ್ದಾನೆ. ಆ್ಯಸಿಡ್​ ಸೇವಿಸಿದ ಕೂಡಲೇ ಅಸ್ವಸ್ಥನಾಗಿದ್ದ ಚೈತನ್ಯನನ್ನು ಆತನ ಸ್ನೇಹಿತರು ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ಆತ ಕುಡಿದಿರುವುದು ಆ್ಯಸಿಡ್ ಎಂಬುದು ದೃಢಪಟ್ಟಿದ್ದು, ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಲಾಗಿದೆ.

ಆತನನ್ನು ವಿಜಯವಾಡದ ಸೂರ್ಯರಾವ್‌ ಪೇಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆ್ಯಸಿಡ್​ ಸೇವಿಸಿದ್ದರಿಂದ ಅವನ ಆಂತರಿಕ ಅಂಗಗಳಿಗೆ ಹಾನಿಯಾಗಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಲೊಯೊಲಾ ಕಾಲೇಜು ಆಡಳಿತ ಆಸ್ಪತ್ರೆಯ ಎಲ್ಲಾ ಶುಲ್ಕವನ್ನು ಭರಿಸಲು ಮುಂದಾಗಿದೆ.

ಸಂತ್ರಸ್ತನ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಿಐ ರವಿಸುರೇಶ್ ರೆಡ್ಡಿ ತಿಳಿಸಿದ್ದಾರೆ. ಆ್ಯಸಿಡ್ ಬಾಟಲ್ ಅನ್ನು ಯಾಕೆ ಫ್ರಿಡ್ಜ್​ನಲ್ಲಿ ಇಟ್ಟಿದ್ದರು? ಎಂಬುದರ ಕುರಿತು, ನಿರ್ಲಕ್ಷ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಳ್ಳತನಕ್ಕೆಂದೇ ಯುಪಿಯಿಂದ ಬೆಂಗಳೂರಿಗೆ ಬಂದಿದ್ದ ಖದೀಮರು ಅಂದರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.