ನುಹ್ (ಹರಿಯಾಣ): ಹರಿಯಾಣದ ನುಹ್ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಬ್ರಿಜ್ ಮಂಡಲ್ ಯಾತ್ರೆಯ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ವಾಹನಗಳ ಮೇಲೆ ಕಲ್ಲು ತೂರಾಟ, ಗುಂಡು ಹಾರಿಸಿದ ಸದ್ದು ಕೇಳಿದೆ. ಈ ಘರ್ಷಣೆಯಲ್ಲಿ ಒಟ್ಟು 20 ಮಂದಿ ಗಾಯಗೊಂಡಿರುವ ಬಗ್ಗೆ ಎಂದು ವರದಿಯಾಗಿದೆ. ಗಾಯಗೊಂಡವರಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಸೇರಿದ್ದಾರೆ.
ಮಾಹಿತಿಯ ಪ್ರಕಾರ, ಅಲ್ ಆಫಿಯಾ ಜನರಲ್ ಆಸ್ಪತ್ರೆ ಮಂಡಿಖೇಡಾದಲ್ಲಿ ಮೂವರು, ಪುನ್ಹಾನಾದಲ್ಲಿ ಒಬ್ಬರು, ನುಹ್ ಸಿಎಚ್‌ಸಿಯಲ್ಲಿ 8 ಜನ, ತೌಡು ಸಿಎಚ್‌ಸಿಯಲ್ಲಿ ಮೂವರು, ನಲ್ಹಾರ್‌ನ ಸರ್ಕಾರಿ ಶಹೀದ್ ಹಸನ್ ಖಾನ್ ಮೇವಾಟಿ ವೈದ್ಯಕೀಯ ಕಾಲೇಜಿನಲ್ಲಿ ಐವರನ್ನು ದಾಖಲಿಸಲಾಗಿದೆ.
-
#WATCH | Clashes erupt between two groups in Haryana's Nuh
— ANI (@ANI) July 31, 2023 " class="align-text-top noRightClick twitterSection" data="
Further details awaited pic.twitter.com/huZVBzjK4d
">#WATCH | Clashes erupt between two groups in Haryana's Nuh
— ANI (@ANI) July 31, 2023
Further details awaited pic.twitter.com/huZVBzjK4d#WATCH | Clashes erupt between two groups in Haryana's Nuh
— ANI (@ANI) July 31, 2023
Further details awaited pic.twitter.com/huZVBzjK4d
ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯನ್ನು ಪ್ರತಿವರ್ಷ ಆಯೋಜಿಸಲಾಗುತ್ತದೆ. ಎಂದಿನಂತೆ ಈ ವರ್ಷವೂ ಈ ಯಾತ್ರೆಯು ನುಹ್ ಜಿಲ್ಲೆಯ ಹಲವು ಪ್ರದೇಶಗಳ ಮೂಲಕ ನಲ್ಹಾಡ್ ಶಿವ ದೇವಾಲಯಕ್ಕೆ ಹೋಗುತ್ತಿತ್ತು. ಯಾತ್ರೆಯ ವೇಳೆ ಗುರುಗ್ರಾಮದಿಂದ ನೂರಾರು ವಾಹನಗಳಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಶಿವನಿಗೆ ಜಲಾಭಿಷೇಕ ಮಾಡಲು ನಲ್ಹಾಡ್ ಶಿವ ದೇವಸ್ಥಾನಕ್ಕೆ ತೆರಳುತ್ತಿದ್ದರು.
ಗುರುಗ್ರಾಮ ವಿಶ್ವ ಹಿಂದೂ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಯಶ್ವಂತ್ ಶೇಖಾವತ್ ಮಾತನಾಡಿ, ಯಾತ್ರೆಯು ಶಿವ ದೇವಾಲಯ ನಲ್ಹಾಡ್ ಅನ್ನು ತಲುಪಿದ ತಕ್ಷಣ, ಕಿಡಿಗೇಡಿಗಳು ಯಾತ್ರೆಯ ವೇಲೆ ಕಲ್ಲು ತೂರಾಟ ಆರಂಭಿಸಿದರು. ಈ ಕಲ್ಲು ತೂರಾಟದಿಂದಾಗಿ ಯಾತ್ರೆಯಲ್ಲಿ ಭಾಗಿಯಾಗಿದ್ದ ಹಲವು ವಾಹನಗಳ ಗಾಜುಗಳು ಒಡೆದಿವೆ. ಕೆಲವು ವಾಹನಗಳಿಗೆ ಬೆಂಕಿ ಹಚ್ಚಿ ವಿಧ್ವಂಸಕ ಕೃತ್ಯಗಳನ್ನೂ ನಡೆಸಲಾಗಿದೆ ಎಂದರು.
ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭಯಭೀತರಾದ ಕಾರಣ ಆ ಭಾಗದ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿದೆ. ಯಾತ್ರೆಯು ಒಂದು ಗಂಟೆ ಸುಮಾರಿಗೆ ನುಹ್ ಅವರ ತಿರಂಗಾ ಪಾರ್ಕ್ ಬಳಿ ತಲುಪಿದಾಗ ಅಲ್ಲಿದ್ದ ಕೆಲವರೊಂದಿಗೆ ವಾಗ್ವಾದ ನಡೆದಿದೆ. ಜಗಳದ ನಡುವೆಯೇ ಕಲ್ಲು ತೂರಾಟ ಆರಂಭವಾಯಿತು. ಈ ಕಲ್ಲು ತೂರಾಟದಲ್ಲಿ ಹಲವು ವಾಹನಗಳ ಗಾಜು ಒಡೆದಿವೆ.
ಎಸ್‌ಎಂಎಸ್, ಇಂಟರ್ನೆಟ್ ಸೇವೆ ಸ್ಥಗಿತ: ಘಟನೆ ಹಿನ್ನೆಲೆ ಈ ಪ್ರದೇಶದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಎಸ್‌ಎಂಎಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ನಲ್ಹಾಡ್ನಲ್ಲಿ ನಡೆದ ಗಲಾಟೆಯ ನಂತರ, ಬದ್ಕಲಿ ಚೌಕ್ ಮತ್ತು ಪಿಂಗವಾನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಘರ್ಷಣೆಗಳು ನಡೆದಿರುವ ಬಗ್ಗೆ ವರದಿಯಾಗಿವೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ಬೇರೆ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಗಳು ಆಗಮಿಸಿವೆ. ಜೊತೆಗೆ ಈ ಭಾಗದಲ್ಲಿರುವ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ : 45 ಅಂಧ ವಿದ್ಯಾರ್ಥಿಗಳನ್ನು ರಕ್ಷಿಸಿದ ಅಸ್ಸೋಂ ರೈಫಲ್ಸ್