ETV Bharat / bharat

ನೀಟ್​ ಭಯಕ್ಕೆ ವಿದ್ಯಾರ್ಥಿ ಆತ್ಮಹತ್ಯೆ: ತಮಿಳುನಾಡಿನಲ್ಲಿ NEETನಿಂದ ವಿನಾಯಿತಿ ನೀಡುವ ಮಸೂದೆ ಪಾಸ್​​ - ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ

ಕಳೆದ ಭಾನುವಾರ ನೀಟ್ ಪರೀಕ್ಷೆ ಆರಂಭಗೊಳ್ಳುವುದಕ್ಕೂ ಕೆಲವು ಗಂಟೆಗಳ ಮುಂಚಿತವಾಗಿ ತಮಿಳುನಾಡಿನಲ್ಲಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೇ ವಿಚಾರವಾಗಿ ತಮಿಳುನಾಡಿನ ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆದಿದ್ದು, ಇದೀಗ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

MK Stalin
MK Stalin
author img

By

Published : Sep 13, 2021, 5:13 PM IST

ಚೆನ್ನೈ(ತಮಿಳುನಾಡು): NEET(ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ) ಭಯದಿಂದ ಕಳೆದ ಭಾನುವಾರ ತಮಿಳುನಾಡಿನಲ್ಲಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಚಾರ ಸದನದಲ್ಲಿ ಪ್ರತಿಧ್ವನಿಸುತ್ತಿದ್ದಂತೆ ಸಿಎಂ ಸ್ಟಾಲಿನ್​ ನೇತೃತ್ವದ ಸರ್ಕಾರ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ.

ಬಿಲ್​ ಮಂಡನೆ ಮಾಡಿದ ಸಿಎಂ ಸ್ಟಾಲಿನ್​​

ದೇಶದಲ್ಲಿ ವೈದ್ಯಕೀಯ ಕೋರ್ಸ್​ಗಳಿಗೆ ಪ್ರವೇಶ ಪಡೆದುಕೊಳ್ಳಬೇಕಾದರೆ ವಿದ್ಯಾರ್ಥಿಗಳು ನೀಟ್​ ಪರೀಕ್ಷೆ ಬರೆಯಬೇಕಾಗಿರುವುದು ಕಡ್ಡಾಯ. ಆದರೆ ತಮಿಳುನಾಡಿನಲ್ಲಿ ಇದೀಗ ಮಹತ್ವದ ಮಸೂದೆ ಪಾಸ್​ ಆಗಿದೆ. ಇನ್ಮುಂದೆ ತಮಿಳುನಾಡಿನ ವಿದ್ಯಾರ್ಥಿಗಳು ಎಂಬಿಬಿಎಸ್​​/ಬಿಡಿಎಸ್​ನಂತಹ ವೈದ್ಯಕೀಯ​​ ಕೋರ್ಸ್​ಗಳಿಗೆ ಪ್ರವೇಶ ಪಡೆದುಕೊಳ್ಳಬೇಕಾದರೆ 12ನೇ ತರಗತಿ ಅಂಕ ಆಧರಿಸಿ ಪ್ರವೇಶ ಪಡೆದುಕೊಳ್ಳಬಹುದು.

  • Tamil Nadu Assembly passes a Bill to scrap NEET; enables admissions to MBBS/BDS based on class 12th marks. AIADMK supported the Bill and BJP staged a walkout.

    (File pic) pic.twitter.com/KS6NRVRJkN

    — ANI (@ANI) September 13, 2021 " class="align-text-top noRightClick twitterSection" data=" ">

ಇದನ್ನೂ ಓದಿ: ವಿಶ್ವಕಪ್​ ಬಳಿಕ ನಿಗದಿತ ಓವರ್​ಗೆ ರೋಹಿತ್​ ಕ್ಯಾಪ್ಟನ್​ ವದಂತಿ: ಬಿಸಿಸಿಐ ಸ್ಪಷ್ಟನೆ ಹೀಗಿದೆ..

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಈ ಮಸೂದೆ ಮಂಡನೆ ಮಾಡಿದ್ದು, ಇದಕ್ಕೆ ಎಐಎಡಿಎಂಕೆ ಬೆಂಬಲ ಸೂಚಿಸಿದ್ದು, ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಗದ್ದಲದ ನಡುವೆ ತಮಿಳುನಾಡಿನ ಅಧಿವೇಶನದಲ್ಲಿ ಬಿಲ್​ ಪಾಸ್​ ಆಗಿದೆ.

ನೀಟ್​ ವಿಚಾರವಾಗಿ ಸದನದಲ್ಲಿ ಚರ್ಚೆ

ನೀಟ್​ ಪರೀಕ್ಷೆ ರದ್ದು ಮಾಡುವುದಾಗಿ ಡಿಎಂಕೆ ಪಕ್ಷ ಭರವಸೆ ನೀಡಿತ್ತು. ಹೀಗಾಗಿ ಯಾವುದೇ ವಿದ್ಯಾರ್ಥಿ ನೀಟ್​ ಪರೀಕ್ಷೆಗೆ ತಯಾರಾಗಿರಲಿಲ್ಲ ಎಂದು ಪಳನಿಸ್ವಾಮಿ ಆರೋಪ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸ್ಟಾಲಿನ್​, ಈ ಹಿಂದೆ ಜಯಲಲಿತಾ ಸಿಎಂ ಆಗಿದ್ದಾಗ ನೀಟ್ ಪರೀಕ್ಷೆ ನಡೆದಿರಲಿಲ್ಲ. ಆದರೆ ಪಳನಿಸ್ವಾಮಿ ಸಿಎಂ ಆಗುತ್ತಿದ್ದಂತೆ ತಮಿಳುನಾಡಿನಲ್ಲಿ ಮೊದಲ ಬಾರಿಗೆ ನೀಟ್​ ಪರೀಕ್ಷೆ ನಡೆದಿತ್ತು. ಇದಾದ ಬಳಿಕ ಪ್ರತಿ ವರ್ಷವೂ ರಾಜ್ಯದಲ್ಲಿ ನೀಟ್ ಪರೀಕ್ಷೆ ನಡೆದಿದೆ. ಇದೀಗ ಹೊಸದಾಗಿ ಸ್ಟಾಲಿನ್​ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮುಂಚಿತವಾಗಿ ನೀಟ್​ ಪರೀಕ್ಷೆ ರದ್ದು ಮಾಡುವುದಾಗಿ ತಿಳಿಸಿತ್ತು.

  • You (AIADMK) were in alliance with Centre, you still are. When it came to voting for CAA & farm laws, you should've imposed condition of exemption from NEET. You didn't have courage to raise voice, you ruled in silence until death of aspirants: Tamil Nadu CM MK Stalin in Assembly pic.twitter.com/roewVsTZAy

ರಾಜ್ಯದಲ್ಲಿ ಎಐಎಡಿಎಂಕೆ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲೇ ಧನುಷ್​ (ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ)​​ ಎರಡು ಸಲ ನೀಟ್ ಪರೀಕ್ಷೆ ಬರೆದಿದ್ದರು. ಆದರೆ ಎರಡು ಸಲ ಫೇಲ್​ ಆಗಿದ್ದಾರೆ ಎಂದು ತಿಳಿಸಿದರು. ಇದರ ಬೆನ್ನಲ್ಲೇ ಅಧಿವೇಶನದಲ್ಲಿ ನೀಟ್​ ತಗೆದು ಹಾಕುವ ಮಸೂದೆ ಮಂಡನೆ ಮಾಡಿದರು. ಇದಕ್ಕೆ ಎಐಎಡಿಎಂಕೆ ಪಕ್ಷದಿಂದ ಬೆಂಬಲ ವ್ಯಕ್ತವಾಗುತ್ತಿದ್ದಂತೆ ಮಸೂದೆಗೆ ಅಂಗೀಕಾರ ದೊರೆತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.