ತಿರುಪತಿ(ಆಂಧ್ರಪ್ರದೇಶ): ವಿಶ್ವದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿರುವ ತಿರುಪತಿಯ ತಿಮ್ಮಪ್ಪನ ಸನ್ನಿಧಿಗೆ ಆಗಮಿಸಿದ್ದ ಶ್ರೀಲಂಕಾದ ಪ್ರಧಾನಿ ಮಹಿಂದ ರಾಜಪಕ್ಸೆ ವೆಂಕಟೇಶ್ವರನ ದರ್ಶನ ಪಡೆದುಕೊಂಡರು.
ಪತ್ನಿ ಶಿರಂತಿ ಅವರೊಂದಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ಪ್ರಧಾನಿ ಇಂದು ಬೆಳಗ್ಗೆ ವೆಂಕಟೇಶ್ವರನ ದರ್ಶನ ಪಡೆದುಕೊಂಡರು. ಈ ವೇಳೆ ದೇವಸ್ಥಾನದ ಮುಖ್ಯ ಅರ್ಚಕರು ಲಂಕಾ ಪ್ರಧಾನಿ ಹಾಗೂ ಅವರ ಪತ್ನಿಗೆ ಸನ್ಮಾನಿಸಿದರು. ಜೊತೆಗೆ ದೇವಸ್ಥಾನದ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿರಿ: ಎಲ್ಲ ಮಾದರಿ ಕ್ರಿಕೆಟ್ಗೆ ವಿದಾಯ ಘೋಷಿಸಿದ ಸ್ಪಿನ್ನ ಮಾಂತ್ರಿಕ ಹರ್ಭಜನ್ ಸಿಂಗ್
ಶ್ರೀಲಂಕಾ ಪ್ರಧಾನಿಗೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಸಾಥ್ ನೀಡಿದರು.