ETV Bharat / bharat

ಸೆಪ್ಟೆಂಬರ್​​ನಲ್ಲಿ ಸ್ಪುಟ್ನಿಕ್ ವಿ ಲಸಿಕೆ ಭಾರತದಲ್ಲಿ ಪೂರ್ಣ ಬಳಕೆಗೆ ಸಿದ್ಧ : ಆರ್​​ಡಿಐಎಫ್ - COVID-19 cases in India

ಲಸಿಕೆ ಉತ್ಪಾದನೆ ಸಂಬಂಧ ಉಭಯ ರಾಷ್ಟ್ರಗಳ ತಜ್ಞರ ನಡುವೆ ತಂತ್ರಜ್ಞಾನ ವಿನಿಮಯ ಹಂತದಲ್ಲಿದೆ. ಜೊತೆಗೆ ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ಲೈಟ್ ಲಸಿಕೆಯ ವಿತರಣೆಯನ್ನು ಇನ್ನಷ್ಟು ವೇಗಗೊಳಿಸಲು ಆರ್​​​ಡಿಐಎಫ್ ಚಿಂತಿಸುತ್ತಿದೆ..

sputnik-v-vaccine
ಸ್ಪುಟ್ನಿಕ್ ವಿ ಲಸಿಕೆ
author img

By

Published : Jul 31, 2021, 7:52 PM IST

ನವದೆಹಲಿ : ರಷ್ಯಾದ ಕೊರೊನಾ ವೈರಸ್ ಲಸಿಕೆ ಸ್ಪುಟ್ನಿಕ್ ವಿ ಸೆಪ್ಟೆಂಬರ್ ವೇಳೆಗೆ ಭಾರತದಲ್ಲಿ ಸಂಪೂರ್ಣ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ರಷ್ಯಾದ ನೇರ ಹೂಡಿಕೆ ನಿಧಿ (ಆರ್​​ಡಿಐಎಫ್​) ತಿಳಿಸಿದೆ.

ಸೆಪ್ಟೆಂಬರ್‌ನಲ್ಲಿ ಉತ್ಪಾದನೆಯು ಸಂಪೂರ್ಣವಾಗಿ ಬಳಕೆಗೆ ಬರುವ ನಿರೀಕ್ಷೆಯಿದೆ ಮತ್ತು ಭಾರತದ ಅತಿದೊಡ್ಡ ಲಸಿಕೆ ಉತ್ಪಾದಕರಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಗ್ಲಾಂಡ್ ಫಾರ್ಮಾ, ಹೆಟೆರೊ ಬಯೋಫಾರ್ಮಾ, ಪ್ಯಾನೇಸಿಯ ಬಯೋಟೆಕ್‌ನಂತಹ ಕಂಪನಿಗಳೊಂದಿಗೆ ಭಾರತವು ಸ್ಪುಟ್ನಿಕ್ ವಿ ಲಸಿಕೆಯ ಪ್ರಮುಖ ಉತ್ಪಾದನಾ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ ಎಂದು ಆರ್​​​ಡಿಐಎಫ್ ತಿಳಿಸಿದೆ.

ಈ ನಡುವೆ ಭಾರತದಲ್ಲಿ 2ನೇ ಬ್ಯಾಚ್​​​ನ ಲಸಿಕೆ ತಯಾರಿಕೆಯಲ್ಲಿ ವಿಳಂಬವಾಗಿದೆ ಎಂಬ ಕುರಿತು ಕಂಪನಿ ಪ್ರತಿಕ್ರಿಯಿಸಿದ್ದು, ಈ ರೀತಿ ಯಾವುದೇ ವಿಳಂಬ ಉಂಟಾಗಿಲ್ಲ. ಕಂಪನಿಯ ಗುರಿಯಂತೆಯೇ ಲಸಿಕೆ ತಯಾರಾಗುತ್ತಿದೆ ಎಂದು ಮಾಹಿತಿ ನೀಡಿದೆ.

ಲಸಿಕೆ ಉತ್ಪಾದನೆ ಸಂಬಂಧ ಉಭಯ ರಾಷ್ಟ್ರಗಳ ತಜ್ಞರ ನಡುವೆ ತಂತ್ರಜ್ಞಾನ ವಿನಿಮಯ ಹಂತದಲ್ಲಿದೆ. ಜೊತೆಗೆ ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ಲೈಟ್ ಲಸಿಕೆಯ ವಿತರಣೆಯನ್ನು ಇನ್ನಷ್ಟು ವೇಗಗೊಳಿಸಲು ಆರ್​​​ಡಿಐಎಫ್ ಚಿಂತಿಸುತ್ತಿದೆ ಎಂದು ತಿಳಿಸಿದೆ.

ರಷ್ಯಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾದ ಹಿನ್ನೆಲೆ ಸ್ಪುಟ್ನಿಕ್ ವಿ ಲಸಿಕೆ ವಿತರಣೆಯಲ್ಲಿ ವಿಳಂಬವಾಗಿದೆ ಎಂದು ಭಾರತದಲ್ಲಿ ಲಸಿಕೆ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿರುವ ಡಾ.ರೆಡ್ಡಿ ತಿಳಿಸಿದ್ದಾರೆ.

ಓದಿ: ಎರಡೂ ಡೋಸ್‌ ಪಡೆದವರಲ್ಲೂ ಕೋವಿಡ್‌ ಡೆಲ್ಟಾ ರೂಪಾಂತರಿ ಅತಿ ಸುಲಭವಾಗಿ ಹರಡುತ್ತೆ.. ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.