ಚೆನ್ನೈ(ತಮಿಳುನಾಡು): ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಎ.ಗೋಪಣ್ಣ ಅವರು ಬರೆದಿರುವ ಜವಾಹರಲಾಲ್ ನೆಹರು ಅವರ ‘ಮಾಮಾನಿತರ ನೆಹರು’ ಎಂಬ ಪುಸ್ತಕ ಬಿಡುಗಡೆ ಸಮಾರಂಭ ಭಾನುವಾರ ಚೆನ್ನೈನ ಕಲೈವಾನರ್ ಆರಂಗಂನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಟಿಎನ್‌ಸಿಸಿ ಅಧ್ಯಕ್ಷ ಕೆ.ಎಸ್.ಅಳಗಿರಿ ಮತ್ತಿತರರು ಭಾಗವಹಿಸಿದ್ದರು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಮಾರಂಭದಲ್ಲಿ ಪಾಲ್ಗೊಂಡು ವಿಶೇಷ ಭಾಷಣ ಮಾಡಿದರು.
'ನೆಹರೂ ಅವರು ನಿಜವಾದ ಪ್ರಜಾಪ್ರಭುತ್ವವಾದಿ. ಅವರು ಸಂಸದೀಯ ಪ್ರಜಾಪ್ರಭುತ್ವದ ಪ್ರತೀಕ. ಆದ್ದರಿಂದಲೇ ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳು ಅವರನ್ನು ಶ್ಲಾಘಿಸುತ್ತವೆ. ಸಾರ್ವಜನಿಕ ವಲಯದ ಉದ್ಯಮಗಳು ಮುಚ್ಚುತ್ತಿರುವ ಸಂದರ್ಭದಲ್ಲಿ ನಮಗೆ ನೆಹರು ಅವರು ನೆನಪಾಗುತ್ತಾರೆ. ನನಗೆ ಈ ಪುಸ್ತಕ ಬಿಡುಗಡೆ ಮಾಡಲು ಬಹಳ ಹೆಮ್ಮೆಯಿದೆ' ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈ ಸಂದರ್ಭದಲ್ಲಿ ತಿಳಿಸಿದರು.
'ಭವಿಷ್ಯ ಭಾರತದ ಕೈಪಿಡಿ': ಈ ಪುಸ್ತಕವು ಜವಾಹರಲಾಲ್ ನೆಹರು ಅವರ ಇತಿಹಾಸ, ಕಾಂಗ್ರೆಸ್ ಪಕ್ಷದ ಇತಿಹಾಸ ಮಾತ್ರವಲ್ಲ, ಇದು ಭಾರತದ ಇತಿಹಾಸ. ಬೇರೆ ರೀತಿಯಲ್ಲಿ ಹೇಳುವುದಾದರೆ, ಭವಿಷ್ಯದ ಭಾರತ ಹೇಗೆ ಕೆಲಸ ಮಾಡಬೇಕು ಎಂಬುದರ ಕೈಪಿಡಿಯಾಗಿದೆ. ಗೋಪಣ್ಣ 2006 ರಿಂದ 2016 ವರೆಗೆ ಮಾಜಿ ಪ್ರಧಾನಿ ನೆಹರು ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ 2018ರಲ್ಲಿ ಇಂಗ್ಲಿಷ್‌ನಲ್ಲಿ ಈ ಪುಸ್ತಕ ಪ್ರಕಟಿಸಿದ್ದರು. ಈಗ ಆದೇ ಪುಸ್ತಕ ಈಗ ತಮಿಳಿನಲ್ಲಿ ಪ್ರಕಟವಾಗಿದೆ ಎಂದು ಸಿಎಂ ಹೇಳಿದರು.
ಗೋಡ್ಸೆ ವಂಶಸ್ಥರಿಗೆ ಕಹಿ ಅನುಭವ: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಚುನಾವಣಾ ರಾಜಕೀಯ ಅಥವಾ ಪಕ್ಷ ರಾಜಕಾರಣದ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಸಿದ್ಧಾಂತದ ರಾಜಕಾರಣ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಕೆಲವು ಜನರು ಅವರನ್ನು ಬಲವಾಗಿ ವಿರೋಧಿಸುತ್ತಾರೆ. ಅವರ ಮಾತುಕತೆ ಕೆಲವೊಮ್ಮೆ ನೆಹರೂ ಅವರಂತೆಯೇ ಇರುತ್ತದೆ. ನೆಹರು ವಾರಸುದಾರರು ಹಾಗೆ ಮಾತನಾಡದಿದ್ದರೆ ಆಶ್ಚರ್ಯವಾಗುತ್ತದೆ. ಮಹಾತ್ಮ ಗಾಂಧಿ ಮತ್ತು ನೆಹರೂ ಅವರ ವಾರಸುದಾರರ ಮಾತುಗಳಿಂದ ಗೋಡ್ಸೆ ವಂಶಸ್ಥರು ಕಹಿ ಅನುಭವಿಸುತ್ತಾರೆ ಎಂದು ಸ್ಟಾಲಿನ್ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕರ್ನಾಟಕ ಆಕ್ರಮಿತ ಮಹಾರಾಷ್ಟ್ರದ ಭಾಗವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲಿ: ಉದ್ದವ್ ಠಾಕ್ರೆ ಒತ್ತಾಯ