ETV Bharat / bharat

ಕಾಶ್ಮೀರದ ರಿಯಲ್​ 'ವೀರ್​ ಜಾರಾ' ಬಗ್ಗೆ ಗೊತ್ತೇ? ಇಲ್ಲಿದೆ ವಿಶೇಷ ವರದಿ - Hamza Farooq

ತೆರೆ ಮೇಲೆ ಕಾಣುವ ಎಷ್ಟೋ ಸನ್ನಿವೇಶಗಳು ಅನೇಕರ ನಿಜ ಜೀವನದಲ್ಲೂ ನಡೆಯುತ್ತದೆ ಎಂಬುದಕ್ಕೆ ಕಾಶ್ಮೀರ - ಲಾಹೋರ್​ನ ಈ ದಂಪತಿಯೇ ಸಾಕ್ಷಿ. ಕಾಶ್ಮೀರದ ರಿಯಲ್​ 'ವೀರ್​ ಜಾರಾ' ಬಗ್ಗೆ ಇಲ್ಲಿದೆ ಈಟಿವಿ ಭಾರತದಿಂದ ವಿಶೇಷ ವರದಿ.

Meet 'Veer Zaraa' of Kashmir
ಕಾಶ್ಮೀರದ ರಿಯಲ್​ 'ವೀರ್​ ಜಾರಾ'
author img

By

Published : Apr 10, 2021, 1:33 PM IST

Updated : Apr 10, 2021, 2:29 PM IST

ಶ್ರೀನಗರ (ಜಮ್ಮು - ಕಾಶ್ಮೀರ): 2014ರಲ್ಲಿ ತೆರೆಕಂಡ ಬಾಲಿವುಡ್​ನ ಶಾರೂಖ್​ ಖಾನ್​ - ಪ್ರೀತಿ ಜಿಂಟಾ ಅಭಿನಯದ 'ವೀರ್​ ಜಾರಾ' ಸಿನಿಮಾ ಇನ್ನೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಕಾಲ್ಪನಿಕ ಪಾತ್ರಗಳನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಇಂತಹದೇ ಘಟನೆ ಜಮ್ಮು- ಕಾಶ್ಮೀರದ ದಂಪತಿಯ ನಿಜ ಜೀವನದಲ್ಲಿ ನಡೆದಿದೆ.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ನಿವಾಸಿ ಹಮ್ಜಾ ಫಾರೂಕ್ ಮತ್ತು ಪಾಕಿಸ್ತಾನದ ಲಾಹೋರ್ ಯುವತಿ ಮಹ್ನೂರ್ 2014 ರಲ್ಲಿ ವಿವಾಹವಾಗಿದ್ದರು. ಮದುವೆಯ ನಂತರ ಭಾರತೀಯ ಪೌರತ್ವ ಪಡೆಯಲು ಮಹ್ನೂರ್ ಎಂಟು ವರ್ಷ ಕಾಯಬೇಕಾಯಿತು. ಈ ಸಮಯದಲ್ಲಿ ಮಹ್ನೂರ್ ಅವರು ನೋರಿ ವೀಸಾ ಪಡೆದು ಪತಿಯೊಂದಿಗೆ ಶ್ರೀನಗರದಲ್ಲಿ ವಾಸಿಸುತ್ತಿದ್ದರು. ವೀಸಾ ಅವಧಿ ವಿಸ್ತರಿಸಲು ಮಹ್ನೂರ್ ಪ್ರತಿ ವರ್ಷ ಪಾಕಿಸ್ತಾನಕ್ಕೆ ತೆರಳಿ ಮೂರು ತಿಂಗಳು ಕಾಯಬೇಕಿತ್ತು.

ಕಾಶ್ಮೀರದ ರಿಯಲ್​ 'ವೀರ್​ ಜಾರಾ' ಕಥೆ

ನೋರಿ ವೀಸಾ, ಇದು ತಾತ್ಕಾಲಿಕ ವೀಸಾ ಆಗಿದ್ದು, ಪಾಕಿಸ್ತಾನದಿಂದ ಭಾರತಕ್ಕೆ ಮದುವೆಯಾಗಿ ಬಂದ ಮಹಿಳೆಯರಿಗೆ ಮಾತ್ರ ಭಾರತಕ್ಕೆ ಮರಳಲು ಯಾವುದೇ ನಿರ್ಬಂಧ ಇಲ್ಲ (NORI- No Obligation to Return to India ) ಎಂದು ನೀಡಲಾಗುತ್ತದೆ.

ಒಂದು ವರ್ಷದ ಬಳಿಕ ಭೇಟಿ

2020ರ ಮಾರ್ಚ್ 2 ರಂದು ಮಹ್ನೂರ್ ಎಂದಿನಂತೆ ತನ್ನ ತವರೂರು ಲಾಹೋರ್​ಗೆ ತೆರಳಿದ್ದರು. ಆದರೆ, ಈ ಬಾರಿ ಕೋವಿಡ್​ ಸಾಂಕ್ರಾಮಿಕ ಹಾಗೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಬಿಕ್ಕಟ್ಟಿನಿಂದಾಗಿ ಅವರಿಗೆ ಭಾರತಕ್ಕೆ ಮರಳಲು ಅವಕಾಶವಿರಲಿಲ್ಲ. ಹೀಗಾಗಿ ಈ ದಂಪತಿ ಒಂದು ವರ್ಷದ ಬಳಿಕ ದುಬೈನಲ್ಲಿ ಭೇಟಿಯಾಗಬೇಕಾಯಿತು.

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ಹಮ್ಜಾ ಫಾರೂಕ್ ಅವರ ತಂಗಿ ಸಾದಿಯಾ ಫಾರೂಕ್, "ನನ್ನ ಅತ್ತಿಗೆ ಮತ್ತು ಅಣ್ಣ ಕಳೆದ ಮಾರ್ಚ್ ತಿಂಗಳಲ್ಲಿ ಒಂದು ವರ್ಷದ ನಂತರ ದುಬೈನಲ್ಲಿ ಭೇಟಿಯಾಗಬೇಕಾಯಿತು. ಕೊರೊನಾದಿಂದಾಗಿ ದುಬೈ ಪಾಕಿಸ್ತಾನ ಪ್ರಜೆಗಳ ಪ್ರವೇಶ ನಿಷೇಧಿಸಿದ್ದರಿಂದ ನನ್ನ ಅತ್ತಿಗೆ ಮೊದಲು ಟರ್ಕಿಗೆ ಭೇಟಿ ನೀಡಿ, ಬಳಿಕ ದುಬೈಗೆ ತೆರಳಿದರು. ನಮ್ಮ ಕುಟುಂಬದ ಸದಸ್ಯರು ಕೆಲವರು ದುಬೈನಲ್ಲಿದ್ದಾರೆ. ಕೆಲವರು ಪಾಕಿಸ್ತಾನದಲ್ಲಿ ಹೀಗೆ ಬೇರೆ ಬೇರೆ ಕಡೆ ಇದ್ದಾರೆ. ನಮ್ಮ ಸಂಬಂಧಿಕರ ಸಹಾಯದಿಂದ ಅಣ್ಣ - ಅತ್ತಿಗೆ ದುಬೈನಲ್ಲಿ ಭೇಟಿಯಾಗುವಂತಾಯಿತು. ಇದೀಗ ಅವರಿಬ್ಬರು ಸಂತೋಷದಿಂದ ಇದ್ದಾರೆ" ಎಂದು ಹೇಳಿದರು.

ಇದೀಗ ಹಮ್ಜಾ ಮತ್ತು ಮಹ್ನೂರ್ ಕುಟುಂಬಸ್ಥರು ಇವರಿಬ್ಬರನ್ನು ಪ್ರೀತಿಯಿಂದ 'ವೀರ್​ ಜಾರಾ' ಎಂದು ಕರೆಯಲು ಆರಂಭಿಸಿದ್ದಾರೆ.

"ಪಾಕಿಸ್ತಾನದ ವಿಶ್ವವಿದ್ಯಾಲಯದಿಂದ ವಿದ್ಯಾಭ್ಯಾಸ ಪಡೆದ ಕಾರಣ ನನ್ನ ಅತ್ತಿಗೆಗೆ ಇಲ್ಲಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಅವರು 'ಪಾಕ್ ಫುಡ್ ಎಕ್ಸ್‌ಪ್ರೆಸ್' ಎಂಬ ಹೋಮ್ ಡೆಲಿವರಿ ರೆಸ್ಟೋರೆಂಟ್ ತೆರೆದರು. ವ್ಯವಹಾರ ಉತ್ತಮವಾಗಿಯೇ ನಡೆಯುತ್ತಿತ್ತು. ಆದರೆ, ಕೋವಿಡ್​ ಬಂದು ಎಲ್ಲವನ್ನೂ ಹಾಳುಮಾಡಿತು" ಎಂದು ಸಾದಿಯಾ ಫಾರೂಕ್ ತಿಳಿಸಿದರು.

ನಿರೀಕ್ಷೆಗಳು ಚೂರುಚೂರು

ದುಬೈನಿಂದ ದೂರವಾಣಿ ಮೂಲಕ ಈಟಿವಿ ಭಾರತದ ಜೊತೆ ಮಾತನಾಡಿದ ಹಮ್ಜಾ ಫಾರೂಕ್, "ಒಂದು ವರ್ಷದ ಬಳಿಕ ನನ್ನ ಪತ್ನಿಯನ್ನು ಭೇಟಿಯಾದ ಅನುಭವವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಏಪ್ರಿಲ್​ನಿಂದ ಉಭಯ ದೇಶಗಳ ನಡುವೆ ಇರುವ ಪ್ರಯಾಣದ ನಿಷೇಧ ತೆಗೆದುಹಾಕಲಾಗುವುದು ಎಂದು ನಾನು ಭಾವಿಸಿದ್ದೆ. ಆದರೆ, ಮತ್ತೆ ಕೋವಿಡ್​ ಕೇಸ್​ಗಳು ಉಲ್ಬಣಿಸಿದ್ದು, ನನ್ನ ನಿರೀಕ್ಷೆಗಳು ಚೂರು ಚೂರಾಗಿವೆ. ದೇಶದ ಇತರ ರಾಜ್ಯಗಳ ನಿವಾಸಿಗಳಿಗೆ ನೋರಿ ವೀಸಾ ಮೂಲಕ ಪ್ರಯಾಣಿಸಲು ಅವಕಾಶ ನೀಡಲಾಗುತ್ತಿದೆ. ಆದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ನಿರ್ಬಂಧ ಹೇರಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Last Updated : Apr 10, 2021, 2:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.