ETV Bharat / bharat

ಮಹಿಳೆಯರು - ವಿಶೇಷ ಚೇತನರಿಗೆ ಉದ್ಯೋಗವಾಕಾಶ ಕಲ್ಪಿಸಲು ಈ ಸರ್ಕಾರದ ಪ್ಲಾನ್

author img

By

Published : Sep 10, 2021, 11:28 AM IST

Updated : Sep 10, 2021, 11:47 AM IST

ದೂರದ ಪ್ರದೇಶಗಳಲ್ಲಿರುವ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಫಲಾನುಭವಿಗಳು ಪಡಿತರ ಪಡೆಯಲು ಮೈಲಿಗಟ್ಟಲೆ ಪ್ರಯಾಣಿಸಬೇಕಾಗುತ್ತದೆ. ಆ ಅಂತರವನ್ನು ನಿವಾರಿಸಲು ಮತ್ತು ಪಡಿತರವನ್ನು ಜನರ ಬಳಿಗೆ ತರಲು ಸರ್ಕಾರ ಈ ಯೋಜನೆ ಹಾಕಿಕೊಂಡಿದೆ.

special-preference-for-women-in-awarding-fp-shop-license-in-tripura
ಮಹಿಳೆಯರು ಮತ್ತು ವಿಶೇಷ ಚೇತರಿಗೆ ಉದ್ಯೋಗವಾಕಾಶ ಕಲ್ಪಿಸಲು ತ್ರಿಪುರಾ ಸರ್ಕಾರ ಪ್ಲಾನ್

ಅಗರ್ತಲಾ(ತ್ರಿಪುರಾ): ಮಹಿಳೆಯರಿಗೆ ಹಾಗೂ ವಿಶೇಷ ಚೇತನರಿಗೆ ಪುರುಷರಷ್ಟೇ ಆದಾಯದ ಅವಕಾಶಗಳನ್ನು ಸೃಷ್ಟಿಸುವ ಪ್ರಯತ್ನದಲ್ಲಿ, ತ್ರಿಪುರಾ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿನೂತನ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಮಹಿಳೆಯರು ಮತ್ತು ವಿಶೇಷ ಚೇತನರಿಗೆ ಆದ್ಯತೆ ಮೇರೆಗೆ ಹೊಸ ಪರವಾನಗಿಗಳನ್ನು ನೀಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಹೊಸದಾಗಿ 408 ನ್ಯಾಯಬೆಲೆ ಅಂಗಡಿಗಳನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಲಿದೆ.

ಈ ಮೂಲಕ ಲಕ್ಷಾಂತರ ಮಂದಿಗೆ ಪಡಿತರವನ್ನು ಸುಲಭವಾಗಿ ಒದಗಿಸಲು ಸಾಧ್ಯವಾಗುವುದು ಮಾತ್ರವಲ್ಲದೇ, ಮಹಿಳೆಯರಿಗೆ ಹಾಗೂ ವಿಶೇಷ ಚೇತನರಿಗೆ ಆದಾಯದ ಮೂಲವೂ ಸಿಗಲಿದೆ. ಇದರಿಂದ ಅವರೂ ಕೂಡಾ ಯಾರಿಗೂ ಹೊರೆಯಾಗದೇ ಬದುಕುತ್ತಾರೆ ಎಂಬ ಚಿಂತನೆ ಸರ್ಕಾರದ್ದಾಗಿದೆ.

ಈಗ ಸದ್ಯಕ್ಕೆ ದೂರದ ಪ್ರದೇಶಗಳಲ್ಲಿರುವ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಫಲಾನುಭವಿಗಳು ಪಡಿತರ ಪಡೆಯಲು ಮೈಲಿಗಟ್ಟಲೆ ಪ್ರಯಾಣಿಸಬೇಕಾಗುತ್ತದೆ. ಆ ಅಂತರವನ್ನು ನಿವಾರಿಸಲು ಮತ್ತು ಪಡಿತರವನ್ನು ಜನರ ಬಳಿಗೆ ತರಲು ಸರ್ಕಾರ ಈ ಯೋಜನೆ ಹಾಕಿಕೊಂಡಿದೆ.

408 ಹೊಸ ಪಡಿತರ ಅಂಗಡಿಗಳನ್ನು ಪ್ರತಿ 400 ಜನರಿಗೆ ಒಂದರಂತೆ ರಚಿಸಲಾಗುತ್ತದೆ. ಸಾಮಾನ್ಯ ವ್ಯಕ್ತಿಗಳಿಗೆ ಅಲ್ಲದೇ, ವಿಶೇಷ ಚೇತನರಿಗೆ ಆದ್ಯತೆ ನೀಡಲು ಹೊಸ ನಿಬಂಧನೆಗಳನ್ನು ಅಳವಡಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: 2019ರ ಚುನಾವಣೆ ವೇಳೆ ಪ್ರಧಾನಿ ಟ್ವಿಟರ್ ಬಳಸಿಕೊಂಡಿದ್ದು ಹೇಗೆ ಗೊತ್ತಾ?: ಇಲ್ಲಿದೆ ಅಧ್ಯಯನ ವರದಿ

Last Updated : Sep 10, 2021, 11:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.