ETV Bharat / bharat

ನಾಲ್ಕು ಕೈ-ಕಾಲುಗಳಿದ್ದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ; ನುಡಿದಂತೆ ನಡೆದ ಸೋನುಸೂದ್​ಗೆ ಮೆಚ್ಚುಗೆ - ಹೇಳಿದಂತೆ ನಡೆದುಕೊಂಡ ಸೋನುಸೂದ್​

ಹುಟ್ಟಿನಿಂದಲೇ ಮಗುವಿಗೆ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳಿದ್ದವು. ಈ ಮಗು ಸೋನು ಸೂದ್​ ಕಣ್ಣಿಗೆ ಬಿದ್ದಿದೆ. ಬಾಲಕಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಶಸ್ತ್ರಚಿಕಿತ್ಸೆ ಮಾಡಿಸುವುದಾಗಿ ಅಂದೇ ನಟ ಸೋನು ಸೂದ್ ಘೋಷಿಸಿದ್ದರು.

ಹೇಳಿದಂತೆ ನಡೆದುಕೊಂಡ ಸೋನುಸೂದ್
ಹೇಳಿದಂತೆ ನಡೆದುಕೊಂಡ ಸೋನುಸೂದ್
author img

By

Published : Jun 9, 2022, 8:34 PM IST

ಸೂರತ್(ಗುಜರಾತ್‌): ಗುಜರಾತ್‌ನ ವಿಶಿಷ್ಟ ಮಗು ಅಂತಿಮವಾಗಿ ಸಾಮಾನ್ಯ ಜೀವನ ನಡೆಸಲು ಮುಂದಾಗಿದೆ. ಈ ಮೂಲಕ ಬಾಲಿವುಡ್ ನಟ ಸೋನು ಸೂದ್ ಅವರಿಗೆ ಎಲ್ಲೆಡೆಯಿಂದ ಧನ್ಯವಾದ ಸಮರ್ಪಣೆ ಆಗುತ್ತಿದೆ.

ಹುಟ್ಟಿನಿಂದಲೇ ಮಗುವಿಗೆ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳಿದ್ದವು. ಈ ಮಗು ಸೋನು ಸೂದ್​ ಕಣ್ಣಿಗೆ ಬಿದ್ದಿದೆ. ಬಾಲಕಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಿಸುವುದಾಗಿ ಅಂದೇ ನಟ ಸೋನು ಸೂದ್ ಘೋಷಿಸಿದ್ದರು. ಅಂತೆಯೇ ಹೇಳಿದಂತೆ ನಡೆದುಕೊಂಡಿದ್ದಾರೆ.

ಇದನ್ನೂ ಓದಿ: ಹುಟ್ಟಿನಿಂದಲೇ ಈ ಮಗುವಿಗೆ 4 ಕೈ - 4 ಕಾಲು: ಶಸ್ತ್ರಚಿಕಿತ್ಸೆಗಾಗಿ ಬಡ ಪೋಷಕರ ಪರದಾಟ

ನವಡಾ ಜಿಲ್ಲೆಯ ಸೋರ್ ಪಂಚಾಯತ್‌ನ ವರ್ಸಲಿಗಂಜ್ ಬ್ಲಾಕ್‌ನಲ್ಲಿ ಈ ಮಗು ವಾಸಿಸುತ್ತಿತ್ತು. ಇನ್ನು ಬಾಲಕಿಗೆ ಸೂರತ್‌ನ ಕಿರಣ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕಿರಣ್ ಆಸ್ಪತ್ರೆಯ ನುರಿತ ವೈದ್ಯರು ಹಲವಾರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ವೈದ್ಯರ ಕಠಿಣ ಪರಿಶ್ರಮ ಮತ್ತು ಸೋನು ಸೂದ್ ಅವರ ನೆರವಿನಿಂದ ಎರಡೂವರೆ ವರ್ಷದ ಬಾಲಕಿ ಸಹಜ ಜೀವನ ನಡೆಸಲು ಸಾಧ್ಯವಾಗಿದೆ.

ಇದನ್ನೂ ಓದಿ: ಉತ್ತರ ಕರ್ನಾಟಕದ ಸಂಜೀವಿನಿ ಕಿಮ್ಸ್​ಗೆ ಬೇಕಿದೆ ಅನುದಾನದ 'ಟಾನಿಕ್'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.