ವಿಶಾಖಪಟ್ಟಣಂ (ಆಂಧ್ರಪ್ರದೇಶ) : ಬಾಂಗ್ಲಾದೇಶ ನೌಕಾಪಡೆಯ ಹಡಗು (BNS) ಸೋಮುದ್ರ ಅವಿಜಾನ್ ಪೂರ್ವ ನೌಕಾ ಕಮಾಂಡ್ (ENC)ಗೆ ನಾಲ್ಕು ದಿನಗಳ ಭೇಟಿಗಾಗಿ ವಿಶಾಖಪಟ್ಟಣಂಗೆ ಆಗಮಿಸಿದೆ.
![ಬಾಂಗ್ಲಾ ನೌಕಾಪಡೆಯ ಹಡಗಿಗೆ ಸ್ವಾಗತ](https://etvbharatimages.akamaized.net/etvbharat/prod-images/img-20211003-wa0005_0310newsroom_1633266461_377.jpg)
ಹಡಗನ್ನು ಇಎನ್‌ಸಿ ಮತ್ತು ಈಸ್ಟರ್ನ್ ಫ್ಲೀಟ್‌ನ ಅಧಿಕಾರಿಗಳು ಸ್ವಾಗತಿಸಿದರು. ಬಾಂಗ್ಲಾದೇಶ ನೌಕಾಪಡೆಯ ಈ ಭೇಟಿಯು ಬಾಂಗ್ಲಾದೇಶದ ವಿಮೋಚನೆಗೆ ಕಾರಣರಾದ ರಾಷ್ಟ್ರಪಿತ ಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಮತ್ತು 1971ರ ಇಂಡೋ-ಪಾಕ್ ಯುದ್ಧದ 50ನೇ ವಾರ್ಷಿಕೋತ್ಸವವನ್ನು ಆಚರಿಸುವ ಸ್ವರ್ಣೀಮ್ ವಿಜಯ್ ವರ್ಷ್ (Swarnim Vijay Varsh) ಅಂಗವಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
![ನೌಕಾಪಡೆಯ](https://etvbharatimages.akamaized.net/etvbharat/prod-images/img-20211003-wa0007_0310newsroom_1633266461_768.jpg)
ಬಿಎನ್ಎಸ್ ಸೋಮುದ್ರ ಅವಿಜಾನ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಇಎನ್‌ಸಿ ಮತ್ತು ಈಸ್ಟರ್ನ್ ಫ್ಲೀಟ್‌ನ ಪ್ರತಿನಿಧಿಗಳು ಸಾಂಪ್ರದಾಯಿಕ ಸ್ವಾಗತವನ್ನು ನೀಡಿದರು. ನೌಕಾಪಡೆಯ ಅಧಿಕಾರಿಗಳು ಸಹ ಈ ವೇಳೆ ಹಾಜರಿದ್ದರು ಎಂದು ಪ್ರಕಟಣೆ ತಿಳಿಸಿದೆ.
ವೃತ್ತಿಪರ ಸಂವಹನ, ಕ್ರಾಸ್ ಡೆಕ್ ಭೇಟಿ, ಐಎನ್ಎಸ್ ವಿಶ್ವಕರ್ಮ ಮತ್ತು ಐಎನ್ಎಸ್ ದೇಗಾ ಸೇರಿ ಎರಡು ನೌಕಾಪಡೆಗಳ ನಡುವೆ ಸರಣಿ ಚಟುವಟಿಕೆಗಳನ್ನು ನಿಗದಿಪಡಿಸಲಾಗಿದೆ.
![ಇಎನ್ ಸಿ ಮತ್ತು ಈಸ್ಟರ್ನ್ ಫ್ಲೀಟ್ ನ ಅಧಿಕಾರಿಗಳಿಂದ ಸ್ವಾಗತ](https://etvbharatimages.akamaized.net/etvbharat/prod-images/img-20211003-wa0008_0310newsroom_1633266461_221.jpg)