ETV Bharat / bharat

ಡ್ರೈ ಫ್ರೂಟ್ಸ್​ ನೆನೆಸಿ ತಿನ್ನಿ.. ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ - ಡ್ರೈ ಫ್ರೂಟ್ಸ್​ ಮತ್ತು ಖಾದ್ಯ ಬೀಜಗಳು

ಹದಿಹರೆಯದವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿಯನ್ನು ತಿನ್ನಬೇಕೆಂದು ಮನೆಯಲ್ಲಿನ ಹಿರಿಯರು ಸಲಹೆ ನೀಡುತ್ತಾರೆ. ಏಕೆಂದರೆ ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಜ್ಞಾಪಕ ಶಕ್ತಿ ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್, ವಿಟಮಿನ್ ಇ, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ರಂಜಕವು ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ತರುತ್ತದೆ.

ಡ್ರೈ ಫ್ರೂಟ್ಸ್​ ನೆನೆಸಿ ತಿನ್ನಿ.. ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ
Soaked almonds and other dry fruits along with seeds beneficial for health
author img

By

Published : Oct 10, 2022, 2:04 PM IST

ಹೈದರಾಬಾದ್: ನೆನೆಸಿದ ಬಾದಾಮಿ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಆದರೆ ಹೆಚ್ಚಿನ ಜನರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ನೆನೆಸಿದ ಬಾದಾಮಿ ಮಾತ್ರವಲ್ಲದೆ ಇತರ ಕೆಲ ಡ್ರೈ ಫ್ರೂಟ್ಸ್​ ಮತ್ತು ಖಾದ್ಯ ಬೀಜಗಳು ಸಹ ಆರೋಗ್ಯಕ್ಕೆ ಬಹಳ ಉತ್ತಮ ಎಂಬುದು ಕೂಡ ಅನೇಕರಿಗೆ ತಿಳಿದಿಲ್ಲ. ಈ ಡ್ರೈ ಫ್ರೂಟ್ಸ್​ ಮತ್ತು ಖಾದ್ಯ ಬೀಜಗಳನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿದ ನಂತರ ಸೇವಿಸಿದರೆ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.

ಹದಿಹರೆಯದವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿಯನ್ನು ತಿನ್ನಬೇಕೆಂದು ಮನೆಯಲ್ಲಿನ ಹಿರಿಯರು ಸಲಹೆ ನೀಡುತ್ತಾರೆ. ಏಕೆಂದರೆ ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಜ್ಞಾಪಕ ಶಕ್ತಿ ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್, ವಿಟಮಿನ್ ಇ, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ರಂಜಕವು ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ತರುತ್ತದೆ. ಅದೇ ಸಮಯದಲ್ಲಿ, ಡ್ರೈ ಫ್ರೂಟ್ಸ್​ ಮತ್ತು ಬೀಜಗಳಲ್ಲಿ ಇನ್ನೂ ಕೆಲವು ವಿಧಗಳಿವೆ ಎಂದು ಅನೇಕ ಜನರಿಗೆ ತಿಳಿದಿಲ್ಲ. ಅವನ್ನು ಕೂಡ ನೆನೆಸಿ ಮತ್ತು ತಿಂದರೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.

ಮುಂಬೈ ಮೂಲದ ಪೌಷ್ಟಿಕ ತಜ್ಞೆ ಮತ್ತು ಆಹಾರ ತಜ್ಞೆ ರುಚೆಲ್ ಜಾರ್ಜ್ ಹೇಳುವ ಪ್ರಕಾರ- ಮಕ್ಕಳಿಗೆ ಮಾತ್ರವಲ್ಲದೆ ವಯಸ್ಕರು ಕೂಡ ನೆನೆಸಿದ ಬಾದಾಮಿ ಮತ್ತು ಇತರ ಕೆಲ ಡ್ರೈ ಫ್ರೂಟ್ಸ್​ ಮತ್ತು ಬೀಜಗಳನ್ನು ರಾತ್ರಿ ಅಥವಾ ಬೆಳಗ್ಗೆ ಮೊದಲ ಆಹಾರವಾಗಿ ಸೇವಿಸುವುದು ಸೂಕ್ತವಾಗಿದೆ ಎಂದು ಸಲಹೆ ನೀಡುತ್ತಾರೆ.

ಯಾವ ಡ್ರೈ ಫ್ರೂಟ್ಸ್​ ನೆನೆಸಿ ತಿನ್ನಲು ಪ್ರಯೋಜನಕಾರಿ ಎಂದು ತಿಳಿಯುವ ಮೊದಲು, ನೆನೆಸುವುದರಿಂದ ಯಾವೆಲ್ಲ ಡ್ರೈ ಫ್ರೂಟ್​ಗಳು ಪೌಷ್ಟಿಕವಾಗಿ ಮತ್ತಷ್ಟು ಉತ್ತಮವಾಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಒಣ ಹಣ್ಣುಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತವೆ. ಆದರೆ ಕೆಲ ಡ್ರೈ ಫ್ರೂಟ್​ಗಳ ಸಿಪ್ಪೆಯು ಜೀರ್ಣಕ್ರಿಯೆ ಸಮಸ್ಯೆಗಳನ್ನು ಉಂಟುಮಾಡುವ ಕೆಲ ಅಂಶಗಳನ್ನು ಹೊಂದಿರುತ್ತವೆ ಎನ್ನುತ್ತಾರೆ ಪೌಷ್ಟಿಕತಜ್ಞೆ ರುಚೆಲ್ ಜಾರ್ಜ್.

ನ್ಯೂಟ್ರಿಷನಲ್ ಇನ್ಹಿಬಿಟರ್​ಗಳು, ಟಾಕ್ಸಿನ್​ಗಳು, ಎಂಜೈಮ್ ಇನ್ಹಿಬಿಟರ್​ಗಳು, ಫೈಟಿಕ್ ಆಸಿಡ್, ಟ್ಯಾನಿನ್​ಗಳು, ಆಕ್ಸಲೇಟ್ಸ್​ ಇತ್ಯಾದಿಗಳು ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ವಿಶೇಷವಾಗಿ ಬಿ ಜೀವಸತ್ವಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತವೆ. ಆದರೆ ಅವುಗಳನ್ನು ಕೆಲವು ಗಂಟೆಗಳ ಕಾಲ ನೆನೆಸಿದಾಗ, ಅವುಗಳ ಕಿಣ್ವದ ಪ್ರತಿಬಂಧಕ ಪರಿಣಾಮಗಳನ್ನು ತಟಸ್ಥಗೊಳಿಸಲಾಗುತ್ತದೆ ಮತ್ತು ಟ್ಯಾನಿನ್‌ಗಳಂತಹ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ತಡೆಯುವ ವಸ್ತುಗಳು ಒಡೆಯುತ್ತವೆ. ಈ ಕಾರಣದಿಂದಾಗಿ, ಪೋಷಕಾಂಶಗಳು ದೇಹದಿಂದ ಸುಲಭವಾಗಿ ಹೀರಲ್ಪಡುತ್ತವೆ.

ಬಾದಾಮಿ ಮಾತ್ರವಲ್ಲದೆ ನೆನೆಸಿದ ಅಂಜೂರ, ವಾಲ್‌ನಟ್ಸ್, ಕಡಲೆಕಾಯಿ, ಒಣದ್ರಾಕ್ಷಿ ಮತ್ತು ಪಿಸ್ತಾಗಳನ್ನು ತಿನ್ನುವುದು ಪ್ರಯೋಜನಕಾರಿ ಎಂದು ರುಚೆಲ್ ಜಾರ್ಜ್ ಹೇಳುತ್ತಾರೆ. ಆದರೆ ಒಣದ್ರಾಕ್ಷಿಗಳನ್ನು ನೀರಿನಲ್ಲಿ ದೀರ್ಘಕಾಲ ನೆನೆಸಿಡಬಾರದು. ಇವುಗಳಲ್ಲದೆ ಕೆಲವು ಬೀಜಗಳಾದ ಸೂರ್ಯಕಾಂತಿ, ಕೊತ್ತಂಬರಿ ಅಥವಾ ಕುಂಬಳಕಾಯಿ ಬೀಜಗಳು, ಸಬ್ಜಾ, ಅಗಸೆಬೀಜ ಮತ್ತು ಗಸಗಸೆಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಸೇವಿಸುವುದು ಆರೋಗ್ಯಕರ. ಡ್ರೈ ಫ್ರೂಟ್ಸ್​ ಮತ್ತು ಬೀಜಗಳು ಪ್ರೋಟೀನ್, ಫೈಬರ್, ವಿಟಮಿನ್​ಗಳು, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಒಮೆಗಾ 3 ಮತ್ತು 6 ಮತ್ತು ಇತರ ಅನೇಕ ಪೋಷಕಾಂಶಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ. ಆದ್ದರಿಂದ, ಅವುಗಳನ್ನು ಬೆಳಗ್ಗೆ ಮೊದಲ ಆಹಾರವಾಗಿ ಸೇವಿಸುವುದರಿಂದ ದೇಹದ ಸಾಕಷ್ಟು ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುತ್ತದೆ.

ಆಯುರ್ವೇದದ ಪ್ರಕಾರ ಸಾಮಾನ್ಯ ಸ್ಥಿತಿಯಲ್ಲಿ ಒಣ ಹಣ್ಣುಗಳನ್ನು ತಿನ್ನುವುದಕ್ಕಿಂತ ನೆನೆಸಿದ ಒಣ ಹಣ್ಣುಗಳನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಒಣ ಹಣ್ಣುಗಳನ್ನು ಬೇಸಿಗೆಯಲ್ಲಿ ಮತ್ತು ಚಳಿಗಾಲದಲ್ಲಿ ಸಾಮಾನ್ಯ ಸ್ಥಿತಿಯಲ್ಲಿ ತಿನ್ನಬೇಕು ಎಂದು ಹೇಳಲಾಗಿದೆ. ಭೋಪಾಲ್‌ನ ಆಯುರ್ವೇದ ವೈದ್ಯ ಡಾ.ರಾಜೇಶ್ ಶರ್ಮಾ ಅವರ ಪ್ರಕಾರ- ಆಯುರ್ವೇದದಲ್ಲಿ ಹೆಚ್ಚಿನ ಒಣ ಹಣ್ಣುಗಳ ಪರಿಣಾಮವನ್ನು ಮಾನವ ದೇಹಕ್ಕೆ ಬಿಸಿ ಎಂದು ಪರಿಗಣಿಸಲಾಗುತ್ತದೆ. ಆದರೆ ಅವುಗಳನ್ನು ಕನಿಷ್ಠ 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿದಾಗ, ಅವುಗಳ ಪರಿಣಾಮವು ಹೆಚ್ಚಿನ ಪ್ರಮಾಣದಲ್ಲಿ ಸಾಮಾನ್ಯವಾಗುತ್ತದೆ. ಆಯುರ್ವೇದದಲ್ಲಿ, ಸರಿಯಾದ ಋತುವಿನಲ್ಲಿ ಡ್ರೈ ಫ್ರೂಟ್ಸ್ ಸೇವನೆಯಿಂದ ದೇಹಕ್ಕೆ ಅನೇಕ ಪ್ರಯೋಜನಗಳನ್ನು ಉಲ್ಲೇಖಿಸಲಾಗಿದೆ. ಉದಾಹರಣೆಗೆ ದಿನವಿಡೀ ಶಕ್ತಿಯನ್ನು ಕಾಪಾಡಿಕೊಳ್ಳುವುದು, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ತೂಕ ನಿರ್ವಹಣೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಮತ್ತು ಕರುಳನ್ನು ಆರೋಗ್ಯವಾಗಿಡುವುದು.

ಇದನ್ನೂ ಓದಿ: ನೀವು ಧೂಮಪಾನ ವ್ಯಸನಿಗಳೇ?.. ಇಲ್ಲಿದೆ ನೋಡಿ ಆಯುರ್ವೇದಿಕ್​ ಸಿಗರೇಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.