ETV Bharat / bharat

ಭಾರತದ ಅನುಮತಿಯಿಲ್ಲದೇ ಲಕ್ಷದ್ವೀಪ ಕಡಲಲ್ಲಿ ಸಂಚರಿಸಿದ ಅಮೆರಿಕದ ಯುದ್ಧ ನೌಕೆ! - ಭಾರತ-ಚೀನಾ ಸಂಬಂಧ

ಅಮೆರಿಕದ ಗೈಡೆಡ್​ ಕ್ಷಿಪಣಿ ವಿನಾಶಕ ಯುಎಸ್ಎಸ್ ಜಾನ್ ಪಾಲ್ ಜೋನ್ಸ್ ನೌಕೆ, ಅರೇಬಿಯನ್ ಸಮುದ್ರದಲ್ಲಿನ ಲಕ್ಷದ್ವೀಪ ಸಮೂಹದ ಪಶ್ಚಿಮಕ್ಕೆ 130 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಭಾರತದ ತೀರಕ್ಕೆ ಸೇರಿದ್ದ ವ್ಯಾಪ್ತಿಯಲ್ಲಿ ಓಡಾಡಿದೆ ಎಂಬ ಸುದ್ದಿ ಹಬ್ಬಿದೆ. ಇದು ಭಾರತದ ಕರಾವಳಿಯಿಂದ 200 ನಾಟಿಕಲ್ ಮೈಲುಗಳಷ್ಟು ವಿಸ್ತರಿಸಿರುವ ಭಾರತದ ವಿಶೇಷ ಆರ್ಥಿಕ ವಲಯದ ಭಾಗವೆಂದು ಪರಿಗಣಿಸಲಾಗಿದೆ.

ಅಮೆರಿಕ ನೌಕೆ
author img

By

Published : Apr 10, 2021, 4:53 AM IST

ನವದೆಹಲಿ: ಭಾರತೀಯ ಅಧಿಕಾರಿಗಳಿಗೆ ಪೂರ್ವಭಾವಿ ಮುನ್ಸೂಚನೆ ನೀಡದೆ, ಬುಧವಾರ ಅಮೆರಿಕದ ಗೈಡೆಡ್​ ಕ್ಷಿಪಣಿ ವಿನಾಶಕ ಯುಎಸ್ಎಸ್ ಜಾನ್ ಪಾಲ್ ಜೋನ್ಸ್ ನೌಕೆ, ಅರೇಬಿಯನ್ ಸಮುದ್ರದಲ್ಲಿನ ಲಕ್ಷದ್ವೀಪ ದ್ವೀಪ ಸಮೂಹದ ಪಶ್ಚಿಮಕ್ಕೆ 130 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಭಾರತದ ತೀರಕ್ಕೆ ಸೇರಿದ್ದ ವ್ಯಾಪ್ತಿಯಲ್ಲಿ ಓಡಾಡಿದೆ ಎಂಬ ಸುದ್ದಿ ಹಬ್ಬಿದೆ. ಇಂಡೋ-ಅಮೆರಿಕ ಸಂಬಂಧ ಬಗ್ಗೆ ಇದು ಹಲವು ಊಹಾಪೋಹಗಳಿಗೆ ನಾಂದಿ ಹಾಡಿದೆ.

ಈ ಹಡಗು ಅದೇ ದಿನ ಮಾಲ್ಡೀವಿಯನ್ ಕಾನೂನು ಉಲ್ಲಂಘಿಸಿದೆ. ಅಮೆರಿಕದ ಈ ನಡವಳಿಕೆಯು ಸ್ನೇಹಪರ ರಾಷ್ಟ್ರಗಳೊಂದಿಗಿನ ಸಂಬಂಧದ ಕುರಿತು ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಮೆರಿಕ ಭಾರತವನ್ನು ತನ್ನ ‘ಕಾರ್ಯತಂತ್ರದ ಪಾಲುದಾರ’ ಎಂದು ಪರಿಗಣಿಸಿದೆ. ಹೀಗಿದ್ದರೂ ದೇಶದ ಕಡಲ ತೀರದಲ್ಲಿ ಪೂರ್ವಾನುಮತಿ ಇಲ್ಲದ ನೌಕೆಯ ಓಡಾಟ ಹಲವು ಪ್ರಶ್ನೆಗಳಿಗೆ ಎಡೆಮಾಡಿ ಕೊಟ್ಟಿದೆ.

ಅಮೆರಿಕದ ನೌಕೆ ಓಡಾಡಿದ ಈ ಪ್ರದೇಶವು ಲಕ್ಷದ್ವೀಪ ದ್ವೀಪಗಳ ಸಮೀಪವಿದೆ. ಭಾರತದ ಕರಾವಳಿಯಿಂದ 200 ನಾಟಿಕಲ್ ಮೈಲುಗಳಷ್ಟು ವಿಸ್ತರಿಸಿರುವ ಭಾರತದ ವಿಶೇಷ ಆರ್ಥಿಕ ವಲಯದ (ಇಇಝ್ಯಡ್) ಭಾಗವೆಂದು ಪರಿಗಣಿಸಲಾಗಿದೆ.

ಯುಎಸ್‌ಎಸ್ ಪೌಲ್ ಜಾನ್ಸ್ (ಡಿಡಿಜಿ 53) ನೌಕೆಯು ತನ್ನ ನೌಕಾಸಂಚಾರದ ಹಕ್ಕು ಹಾಗೂ ಸ್ವಾತಂತ್ರ್ಯವನ್ನು (ಎಫ್‌ಎನ್‌ಓಪಿ) ಲಕ್ಷದ್ವೀಪ ದ್ವೀಪಸ್ತೋಮದಿಂದ 130 ನಾಟಿಕಲ್ ಮೈಲು ಪಶ್ಚಿಮದಲ್ಲಿ ಇರುವ ಭಾರತದ ವಿಶೇಷ ಆರ್ಥಿಕ ವಲಯ ಪ್ರದೇಶದಲ್ಲಿ, ಭಾರತದ ಪೂರ್ವಭಾವಿ ಸಮ್ಮತಿ ಕೋರದೆಯೇ ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಚಲಾಯಿಸಿದೆ ಎಂದು ಪ್ರಕಟಣೆ ಹೊರಡಿಸಿ ಹೇಳಿದೆ.

ನ್ಯಾವಿಗೇಷನ್ ಕಾರ್ಯಾಚರಣೆಯ ಸ್ವಾತಂತ್ರ್ಯ (ಎಫ್​ಒಎನ್​ಒಪಿ) ಬಗ್ಗೆ ಭಾರತ ಅತಿಯಾದ ಕಡಲ ಹಕ್ಕುಗಳನ್ನು ಪ್ರಶ್ನಿಸುವ ಮೂಲಕ ಅಂತಾರಾಷ್ಟ್ರೀಯ ಕಾನೂನಿನಲ್ಲಿ ಗುರುತಿಸಲ್ಪಟ್ಟ ಸಮುದ್ರದ ಹಕ್ಕು, ಸ್ವಾತಂತ್ರ್ಯ ಮತ್ತು ಕಾನೂನುಬದ್ಧ ಬಳಕೆಗಳನ್ನು ಎತ್ತಿಹಿಡಿದಿದೆ. ಈ ಘಟನೆಯು ಯಾವುದೇ ತಪ್ಪು ತಿಳುವಳಿಕೆಗೆ ಅಸ್ಪದವಾಗಬಾರದು ಎಂದಿದೆ.

ಬೇರೆ ರಾಷ್ಟ್ರಗಳು ವಿಶೇಷ ಆರ್ಥಿಕ ವಲಯದ ಪ್ರದೇಶದಲ್ಲಿ ಸೇನಾ ಕವಾಯತು ಅಥವಾ ಮಿಲಿಟರಿ ಕೌಶಲ್ಯ ಪ್ರದರ್ಶನವನ್ನು ನಡೆಸಲು ಭಾರತ, ತನ್ನ ಪೂರ್ವಭಾವಿ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಆದರೆ, ಈ ನಿಲುವು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿಲ್ಲ ಎಂದು ಹೇಳಿದೆ.

ಭಾರತ-ಫೆಸಿಫಿಕ್ ಸಾಗರಪ್ರಾಂತದಲ್ಲಿ ಅಮೆರಿಕ ಪಡೆಗಳು ದೈನಂದಿನ ಆಧಾರದಲ್ಲಿ ಕಾರ್ಯನಿರ್ವಹಿಸುತ್ತವೆ. ಎಲ್ಲಾ ಕಾರ್ಯಾಚರಣೆಗಳು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ವಿನ್ಯಾಸಗೊಂಡಿದೆ ಹಾಗೂ ಅಂತಾರಾಷ್ಟ್ರೀಯ ಕಾನೂನು ಎಲ್ಲೆಲ್ಲಿ ಅನುಮತಿ ನೀಡುವುದೋ ಅಲ್ಲೆಲ್ಲಾ ಅಮೆರಿಕವು ಹಾರಾಟ ನಡೆಸಲಿದೆ, ನೌಕಾಯಾನ ನಡೆಸಲಿದೆ ಹಾಗೂ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.