ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಇಂದು ಭಾರೀ ಹಿಮಮಳೆ ಬೀಳುವ ಸಾಧ್ಯತೆಯಿದ್ದು, ಗುರುವಾರದಿಂದ ಸುಧಾರಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೊಜಿಲಾ ಪಾಸ್, ಪಿರ್ ಕಿ ಗಾಲಿ, ಬನ್ನಿಹಾಲ್ ಸೆಕ್ಟರ್, ಪಹಲ್ಗಮ್, ಸೋನಮಾರ್ಗ್ ಮತ್ತು ಗುಲ್ಮಾರ್ಗಮ್ನ ರಾತ್ರಿ ವೇಳೆ ಹಿಮಪಾತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಶ್ರೀನಗರ-ಲೇಹ್ ಹೆದ್ದಾರಿ ಮತ್ತು ಮೊಘಲ್ ರಸ್ತೆಯನ್ನು ಮುಚ್ಚಲಾಗಿದೆ. ಇನ್ನು ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಪ್ರಯಾಣ ಮಾಡುವುದನ್ನು ತಪ್ಪಿಸಲು ಅಧಿಕಾರಿಗಳು ಪ್ರಯಾಣಿಕರಿಗೆ ಸೂಚಿಸಿದ್ದಾರೆ.
"ಕಳೆದ 24 ಗಂಟೆಗಳ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಪ್ರದೇಶಗಳಲ್ಲಿ ಹಿಮಪಾತ ಸಂಭವಿಸಿದೆ. ನಾಳೆ ಮಧ್ಯಾಹ್ನದವರೆಗೆ ಇದೇ ರೀತಿ ಹವಾಮಾನ ಪರಿಸ್ಥಿತಿಗಳು ಮುಂದುವರಿಯಲಿವೆ. ಬಳಿಕ ಸುಧಾರಿಸುವ ಸಾಧ್ಯತೆಯಿದೆ" ಎಂದು ಎಂಇಟಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಓದಿ: ಹಿಮಪಾತದಿಂದಾಗಿ ನೂರಾರು ಮೇಕೆ-ಕುರಿಗಳು ಬಲಿ
ಶ್ರೀನಗರದಲ್ಲಿ ಕನಿಷ್ಠ ತಾಪಮಾನ 2.2 ಡಿಗ್ರಿ ಸೆಲ್ಸಿಯಸ್, ಪಹಲ್ಗಮ್ 0.4 ಮತ್ತು ಗುಲ್ಮಾರ್ಗಮ್ನಲ್ಲಿ -2.0 ದಾಖಲಾಗಿದೆ. ಲಡಾದ ಲೇಹ್ ಪಟ್ಟಣವು -2, ಕಾರ್ಗಿಲ್ -4.8 ಮತ್ತು ಡ್ರಾಸ್ -3.7 ಕಡಿಮೆ ತಾಪಮಾನ ದಾಖಲಿಸಿದೆ. ಇನ್ನು ಜಮ್ಮು ನಗರದಲ್ಲಿ 13.6 ಡಿಗ್ರಿ ಸೆಲ್ಸಿಯಸ್, ಕತ್ರ 12.5, ಬಟೋಟೆ 5.1, ಬನ್ನಿಹಾಲ್ 4.4 ಮತ್ತು ಭದರ್ವಾ 4.2 ತಾಪಮಾನ ದಾಖಲಾಗಿದೆ.