ಹೈದರಾಬಾದ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಮ್ಮು- ಕಾಶ್ಮೀರದ ವಿಷಯ ಪ್ರಸ್ತಾಪ ಮಾಡಿದ್ದ ಪಾಕ್ ಪ್ರಧಾನಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಭಾರತದ ಕಾರ್ಯದರ್ಶಿ ಸ್ನೇಹಾ ದುಬೆ ಬಗ್ಗೆ ಇದೀಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಪಾಕಿಸ್ತಾನಕ್ಕೆ ಕಟುವಾಗಿ ಉತ್ತರ ನೀಡಿ, ಭಾರತೀಯರ ಹೃದಯ ಗೆದ್ದಿರುವ ಇವರ ಬಗ್ಗೆ ಇದೀಗ ಹೆಚ್ಚಿನ ಚರ್ಚೆಯಾಗಲು ಶುರುವಾಗಿದೆ.
ಸ್ನೇಹಾ ದುಬೆ 2012ರ ಐಎಫ್ಎಸ್ ಬ್ಯಾಚ್ನ ಅಧಿಕಾರಿಯಾಗಿದ್ದು, ಸಿವಿಲ್ ಸರ್ವೀಸ್ನ ಪರೀಕ್ಷೆಯನ್ನ ಮೊದಲ ಸುತ್ತಿನಲ್ಲೇ ಪಾಸ್ ಮಾಡಿದ್ದರು. ಗೋವಾದಲ್ಲಿ ಶಾಲಾ ಶಿಕ್ಷಣ ಮುಗಿಸಿರುವ ಇವರು, ತದನಂತರ ಪುಣೆಯ ಫರ್ಗ್ಯುಸನ್ ಕಾಲೇಜ್ನಲ್ಲಿ ಕಾಲೇಜ್ ಹಂತದ ಶಿಕ್ಷಣ ತದನಂತರ MPhil ಶಿಕ್ಷಣವನ್ನ ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ.
-
“The entire UTs of J&K & Ladakh were, are and will always be an integral and inalienable part of India.”
— P C Mohan (@PCMohanMP) September 25, 2021 " class="align-text-top noRightClick twitterSection" data="
“We call upon Pakistan to immediately vacate all areas under its illegal occupation."
Young Indian diplomat, #SnehaDubey fiercely responds to Pakistan at the #UNGA. pic.twitter.com/JHqx3ikz4W
">“The entire UTs of J&K & Ladakh were, are and will always be an integral and inalienable part of India.”
— P C Mohan (@PCMohanMP) September 25, 2021
“We call upon Pakistan to immediately vacate all areas under its illegal occupation."
Young Indian diplomat, #SnehaDubey fiercely responds to Pakistan at the #UNGA. pic.twitter.com/JHqx3ikz4W“The entire UTs of J&K & Ladakh were, are and will always be an integral and inalienable part of India.”
— P C Mohan (@PCMohanMP) September 25, 2021
“We call upon Pakistan to immediately vacate all areas under its illegal occupation."
Young Indian diplomat, #SnehaDubey fiercely responds to Pakistan at the #UNGA. pic.twitter.com/JHqx3ikz4W
ಯಾರಿದು ಸ್ನೇಹಾ ದುಬೆ?
ಯುಪಿಎಸ್ಸಿ ಪರೀಕ್ಷೆ ಪಾಸ್ ಆಗಿ ಸರ್ಕಾರಿ ನೌಕರಿ ಪಡೆದ ಸ್ನೇಹಾ ದುಬೈ ತಂದೆ ವ್ಯಾಪಾರಿಯಾಗಿದ್ದು, 12 ವರ್ಷದ ಬಾಲಕಿಯಾಗಿದ್ದ ಸಂದರ್ಭದಲ್ಲೇ ಇಂಡಿಯನ್ ಫಾರಿನ್ ಸರ್ವೀಸ್ ಸೇರುವ ಆಸೆ ಕಂಡಿದ್ದರು. ಅದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆಸಿ 2011ರಲ್ಲಿ ಮೊದಲ ಪ್ರಯತ್ನದಲ್ಲೇ ಪರೀಕ್ಷೆ ಪಾಸ್ ಮಾಡಿದ್ದರು.
ICS ಪರೀಕ್ಷೆ ಪಾಸ್ ಆದ ಬಳಿಕ ಸ್ನೇಹಾ ವಿದೇಶಾಂಗ ವ್ಯವಹಾರಗಳ ಇಲಾಖೆ ಸೇರಿಕೊಂಡು ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಇದಾದ ಬಳಿಕ ಮ್ಯಾಡ್ರಿಡ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕಳುಹಿಸಲಾಗಿತ್ತು. ಇದೀಗ ವಿಶ್ವಸಂಸ್ಥೆಯಲ್ಲಿ ಅವರು ಭಾರತದ ಕಾರ್ಯದರ್ಶಿಯಾಗಿದ್ದಾರೆ.
-
Watch: India exercises its right of reply at the #UNGA @AmbTSTirumurti @MEAIndia @harshvshringla pic.twitter.com/YGcs28fYYa
— India at UN, NY (@IndiaUNNewYork) September 25, 2021 " class="align-text-top noRightClick twitterSection" data="
">Watch: India exercises its right of reply at the #UNGA @AmbTSTirumurti @MEAIndia @harshvshringla pic.twitter.com/YGcs28fYYa
— India at UN, NY (@IndiaUNNewYork) September 25, 2021Watch: India exercises its right of reply at the #UNGA @AmbTSTirumurti @MEAIndia @harshvshringla pic.twitter.com/YGcs28fYYa
— India at UN, NY (@IndiaUNNewYork) September 25, 2021
ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪಾಕ್, ಕಣಿವೆ ನಾಡಿಗೆ ನೀಡಿದ್ದ ವಿಶೇಷ ಸ್ಥಾನಮಾನದ ಬಗ್ಗೆ ಮಾತನಾಡಿದರು. ಈ ವೇಳೆ, ತಿರುಗೇಟು ನೀಡಿರುವ ಸ್ನೇಹಾ, ವಾಸ್ತವವಾಗಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವುದು ಪಾಕಿಸ್ತಾನವೇ, ಆದರೆ ಜಗತ್ತಿನ ಎದುರು ತಾನು ಬೆಂಕಿ ಶಮನ ಮಾಡುವ ಕೆಲಸ ಮಾಡುತ್ತಿದ್ದೇನೆ ಎಂದು ಬಿಂಬಿಸಿಕೊಳ್ಳುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ
ಸ್ನೇಹಾ ದುಬೆ ಭಾಷಣಕ್ಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನೇಕರು ಇವರ ಭಾಷಣಕ್ಕೆ ಫಿದಾ ಆಗಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.