ಮುಂಬೈ (ಮಹಾರಾಷ್ಟ್ರ) : ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎನ್‌ಆರ್ ಬೋರ್ಕರ್ ಅವರ ಕೊಠಡಿಯಲ್ಲಿ ಇಂದು ಬೆಳಗ್ಗೆ ಹಾವೊಂದು ಪತ್ತೆಯಾಗಿದೆ. 4.5 ರಿಂದ 5 ಅಡಿ ಉದ್ದದ ಮತ್ತು ವಿಷಕಾರಿಯಲ್ಲದ ಹಾವು ಇದಾಗಿದೆ.
ಇದು ಪತ್ತೆಯಾದ ವೇಳೆ ನ್ಯಾಯಾಧೀಶರು ಕೊಠಡಿಯಲ್ಲಿ ಇರಲಿಲ್ಲ. ತಕ್ಷಣವೇ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಲಾಯ್ತು. ಪೊಲೀಸರು ಎನ್‌ಜಿಒವೊಂದರ ಉರಗ ರಕ್ಷಕನನ್ನು ಕರೆ ತಂದಿದ್ದಾರೆ. ಸ್ಥಳಕ್ಕೆ ಬಂದ ಉರಗ ರಕ್ಷಕ ಹಾವನ್ನು ಹಿಡಿದು, ಸೂಕ್ತ ಸ್ಥಳದಲ್ಲಿ ಅದನ್ನು ಬಿಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣಗಳ ಉಲ್ಬಣದಿಂದಾಗಿ ಬಾಂಬೆ ಹೈಕೋರ್ಟ್ ವರ್ಚುವಲ್ ಆಗಿ ವಿಚಾರಣೆಯನ್ನು ನಡೆಸುತ್ತಿದೆ. ಅದೇ ಕಾರಣದಿಂದಾಗಿ ಹೈಕೋರ್ಟ್‌ನಲ್ಲಿ ಜನಸಂದಣಿ ಕಡಿಮೆಯಾಗಿದೆ.
ಜಾಹಿರಾತು:-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ