ETV Bharat / bharat

ಬೆಳಗಿನ ತಿಂಡಿ ತಿನ್ನದಿದ್ದರೆ ಅನಾರೋಗ್ಯದ ಅಪಾಯ ಜಾಸ್ತಿ! - ಉಪವಾಸ ಮಾಡುವುದರಿಂದ ರೋಗಕಾರಕ

ಉಪವಾಸ ಮಾಡುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಎಂಬುದು ಗೊತ್ತೇ ಇದೆ. ಆದರೆ ಬೆಳಗಿನ ಉಪಹಾರ ತಪ್ಪಿಸುವುದರಿಂದ ಕೆಲ ಅನಾರೋಗ್ಯಕರ ಪರಿಣಾಮಗಳು ಎದುರಾಗಬಹುದು ಎಂದು ಸಂಶೋಧನೆಗಳು ತಿಳಿಸಿವೆ.

Study suggests skipping breakfast might harm immune system

author img

By

Published : Feb 26, 2023, 1:36 PM IST

ವಾಷಿಂಗ್ಟನ್ (ಯುಎಸ್) : ಉಪವಾಸ ಮಾಡುವುದರಿಂದ ರೋಗಕಾರಕ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿ ಕಡಿಮೆಯಾಗುತ್ತದೆ ಮತ್ತು ಇದರಿಂದ ಹೃದಯ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ ಎಂದು ಮೌಂಟ್ ಸಿನೈನಲ್ಲಿರುವ ಇಕಾನ್ ಸ್ಕೂಲ್ ಆಫ್ ಮೆಡಿಸಿನ್‌ನ ಇತ್ತೀಚಿನ ಅಧ್ಯಯನದಲ್ಲಿ ಹೇಳಲಾಗಿದೆ. ಇಲಿಗಳ ಮೇಲೆ ನಡೆಸಲಾದ ಪ್ರಯೋಗಗಳ ಮೇಲೆ ಕೇಂದ್ರೀಕರಿಸಿದ ಈ ಅಧ್ಯಯನವು, ಊಟವನ್ನು ಬಿಟ್ಟುಬಿಡುವುದರಿಂದ ದೇಹದ ಪ್ರತಿರಕ್ಷಣಾ ಕೋಶಗಳಿಗೆ ಹಾನಿಯಾಗುವ ರೀತಿಯಲ್ಲಿ ಮೆದುಳು ಪ್ರತಿಕ್ರಿಯಿಸುತ್ತದೆ ಎಂದು ಪ್ರಥಮ ಬಾರಿಗೆ ನಿರೂಪಿಸಿದೆ. ಬೆಳಗಿನ ಉಪಾಹಾರದ ಮೇಲೆ ಕೇಂದ್ರೀಕರಿಸಿದ ಸಂಶೋಧನೆಗಳನ್ನು ಇಮ್ಯುನಿಟಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ ಮತ್ತು ದೀರ್ಘಾವಧಿಯ ಉಪವಾಸವು ದೇಹದ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬುದನ್ನು ಸಂಶೋಧಕರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡಬಹುದು.

ಉಪವಾಸವು ಆರೋಗ್ಯಕರವಾಗಿದೆ ಎಂಬ ಅರಿವು ಹೆಚ್ಚುತ್ತಿದೆ ಮತ್ತು ಉಪವಾಸದಿಂದ ಉಪಯುಕ್ತ ಪ್ರಯೋಜನಗಳಿವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದಾಗ್ಯೂ ಉಪವಾಸದಿಂದ ನಮ್ಮ ದೇಹದ ಮೇಲೆ ಕೆಲ ಅನಾರೋಗ್ಯಕರ ಅಪಾಯಗಳು ಸಹ ಎದುರಾಗಬಹುದು ಎಂಬ ಎಚ್ಚರಿಕೆಯನ್ನು ನಮ್ಮ ಸಂಶೋಧನೆ ನೀಡುತ್ತದೆ ಎಂದು ಮುಖ್ಯ ಸಂಶೋಧಕ ಫಿಲಿಪ್ ಸ್ವಿರ್ಸ್ಕಿ, ಪಿಎಚ್‌ಡಿ ಹೇಳಿದರು. ಇವರು ಇಕಾನ್ ಮೌಂಟ್ ಸಿನೈನಲ್ಲಿರುವ ಕಾರ್ಡಿಯೊವಾಸ್ಕುಲರ್ ರಿಸರ್ಚ್ ಇನ್​ಸ್ಟಿಟ್ಯೂಟ್​ನ ನಿರ್ದೇಶಕರಾಗಿದ್ದಾರೆ. ಇದು ಉಪವಾಸಕ್ಕೆ ಸಂಬಂಧಿಸಿದ ಕೆಲವು ಮೂಲಭೂತ ಜೀವಶಾಸ್ತ್ರವನ್ನು ಪರಿಶೀಲಿಸುವ ಯಾಂತ್ರಿಕ ಅಧ್ಯಯನವಾಗಿದೆ. ನರ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಮಧ್ಯೆ ಸಂಬಂಧವಿದೆ ಎಂದು ಅಧ್ಯಯನವು ತೋರಿಸುತ್ತದೆ ಎಂದು ಅವರು ಹೇಳುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಕೆಲವು ಗಂಟೆಗಳ ಕಡಿಮೆ ಉಪವಾಸದಿಂದ 24 ಗಂಟೆಗಳ ತೀವ್ರ ಉಪವಾಸದವರೆಗೆ ಇದು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಉದ್ದೇಶವನ್ನು ಸಂಶೋಧಕರು ಹೊಂದಿದ್ದಾರೆ. ಅವರು ಇಲಿಗಳ ಎರಡು ಗುಂಪುಗಳ ಮೇಲೆ ಸಂಶೋಧನೆ ನಡೆಸಿದ್ದಾರೆ. ಒಂದು ಗುಂಪಿನ ಇಲಿಗಳಿಗೆ ಬೆಳಗ್ಗೆ ಎದ್ದ ತಕ್ಷಣ ಆಹಾರ ನೀಡಲಾಯಿತು (ಈ ಉಪಹಾರವು ಅವುಗಳ ದಿನದ ದೊಡ್ಡ ಊಟವಾಗಿತ್ತು) ಮತ್ತು ಇನ್ನೊಂದು ಗುಂಪಿನ ಇಲಿಗಳಿಗೆ ಬೆಳಗಿನ ಉಪಹಾರ ನೀಡಲಿಲ್ಲ. ಬೆಳಗ್ಗೆ ಇಲಿಗಳು ಎಚ್ಚರವಾದಾಗ (ಬೇಸ್‌ಲೈನ್), ನಂತರ ನಾಲ್ಕು ಗಂಟೆಗಳ ನಂತರ ಮತ್ತು ಎಂಟು ಗಂಟೆಗಳ ನಂತರ ಮತ್ತೊಮ್ಮೆ ಎರಡೂ ಗುಂಪಿನ ಇಲಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಯಿತು.

ರಕ್ತದ ಮಾದರಿಗಳನ್ನು ಪರೀಕ್ಷಿಸಿದಾಗ, ಉಪವಾಸವಿದ್ದ ಇಲಿಗಳ ಗುಂಪಿನಲ್ಲಿ ಒಂದು ವಿಶಿಷ್ಟ ವ್ಯತ್ಯಾಸವನ್ನು ಸಂಶೋಧಕರು ಗಮನಿಸಿದರು. ನಿರ್ದಿಷ್ಟವಾಗಿ, ಸಂಶೋಧಕರು ಈ ಇಲಿಗಳ ಗುಂಪಿನಲ್ಲಿ ಮೊನೊಸೈಟ್​ಗಳ ಸಂಖ್ಯೆಯಲ್ಲಿ ವ್ಯತ್ಯಾಸವನ್ನು ಕಂಡರು. ಮೊನೊಸೈಟ್​ಗಳು ಅಸ್ಥಿ ಮಜ್ಜೆಯಲ್ಲಿ ಇರುವ ಬಿಳಿ ರಕ್ತ ಕಣಗಳಾಗಿವೆ ಮತ್ತು ದೇಹದಲ್ಲೆಲ್ಲ ಪ್ರಯಾಣಿಸುತ್ತವೆ. ಇವು ಹೃದ್ರೋಗ, ಕ್ಯಾನ್ಸರ್ ಸೇರಿದಂತೆ ಸೋಂಕಿನ ವಿರುದ್ಧ ಹೋರಾಡುವಲ್ಲಿ ಅನೇಕ ನಿರ್ಣಾಯಕ ಪಾತ್ರ ವಹಿಸುತ್ತವೆ.

ಆರಂಭದಲ್ಲಿ ಎಲ್ಲಾ ಇಲಿಗಳು ಒಂದೇ ಪ್ರಮಾಣದ ಮೊನೊಸೈಟ್​ಗಳನ್ನು ಹೊಂದಿದ್ದವು. ಆದರೆ ನಾಲ್ಕು ಗಂಟೆಗಳ ನಂತರ ಉಪವಾಸ ಗುಂಪಿನ ಇಲಿಗಳಲ್ಲಿನ ಮೊನೊಸೈಟ್​ಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಯಿತು. ಈ ಜೀವಕೋಶಗಳಲ್ಲಿ 90 ಪ್ರತಿಶತವು ರಕ್ತಪ್ರವಾಹದಿಂದ ಕಣ್ಮರೆಯಾಯಿತು ಎಂದು ಸಂಶೋಧಕರು ಕಂಡುಕೊಂಡರು ಮತ್ತು ಎಂಟು ಗಂಟೆಗಳಲ್ಲಿ ಸಂಖ್ಯೆಯು ಮತ್ತಷ್ಟು ಕುಸಿಯಿತು. ಏತನ್ಮಧ್ಯೆ, ಉಪವಾಸ ಮಾಡದ ಇಲಿಗಳಲ್ಲಿನ ಮೊನೊಸೈಟ್​ಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ.

ಉಪವಾಸವಿದ್ದ ಇಲಿಗಳಲ್ಲಿ ಮೊನೊಸೈಟ್​ಗಳು ತಮ್ಮನ್ನು ತಾವು ಸಂರಕ್ಷಿಸಿಕೊಳ್ಳಲು ಅಸ್ಥಿ ಮಜ್ಜೆಗೆ ಹಿಂತಿರುಗುತ್ತವೆ ಎಂದು ಸಂಶೋಧಕರು ಕಂಡುಹಿಡಿದರು. ಅದೇ ಸಮಯದಲ್ಲಿ ಅಸ್ಥಿ ಮಜ್ಜೆಯಲ್ಲಿ ಹೊಸ ಕೋಶಗಳ ಉತ್ಪಾದನೆಯು ಕಡಿಮೆಯಾಯಿತು. ಸಾಮಾನ್ಯವಾಗಿ ಕಡಿಮೆ ಜೀವಿತಾವಧಿಯನ್ನು ಹೊಂದಿರುವ ಅಸ್ಥಿ ಮಜ್ಜೆಯಲ್ಲಿನ ಮೊನೊಸೈಟ್​ಗಳ ಸಂಖ್ಯೆ ಗಮನಾರ್ಹವಾಗಿ ಬದಲಾಯಿತು. ಅಸ್ಥಿ ಮಜ್ಜೆಯಲ್ಲಿಯೇ ಉಳಿಯುವ ಪರಿಣಾಮದಿಂದ ಅವು ಹೆಚ್ಚು ಕಾಲ ಬದುಕಿದವು ಮತ್ತು ರಕ್ತದಲ್ಲಿ ಉಳಿದಿರುವ ಮೊನೊಸೈಟ್‌ಗಳಿಗಿಂತ ವಿಭಿನ್ನವಾಗಿ ವಯಸ್ಕವಾದವು.

ಇದನ್ನೂ ಓದಿ: ಮಹಿಳೆಯರಲ್ಲಿ ಮೈಗ್ರೇನ್​ ಸಮಸ್ಯೆಗೆ ಕಡಿಮೆ ಈಸ್ಟ್ರೋಜನ್​ ಮಟ್ಟದ ಜೊತೆ ಸಿಜಿಆರ್​ಪಿ ಮಟ್ಟವೂ ಕಾರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.