ETV Bharat / bharat

ತಿರುಪತಿಯಲ್ಲಿ ಅಪಹರಣಗೊಂಡಿದ್ದ ಛತ್ತೀಸ್‌ಗಡದ ಬಾಲಕನನ್ನು ರಕ್ಷಿಸಿದ ಪೊಲೀಸರು - ಆರು ವರ್ಷದ ಬಾಲಕ ತಿರುಪತಿಯಲ್ಲಿ ಅಪಹರಣ

ಫೆಬ್ರವರಿ 27 ರಂದು ತಿರುಪತಿಯಲ್ಲಿ ಅಪಹರಣಕ್ಕೊಳಗಾಗಿದ್ದ ಆರು ವರ್ಷದ ಶಿವಮ್​ ಸಾಹು ಎಂಬ ಬಾಲಕನನ್ನು ವಿಜಯವಾಡದಲ್ಲಿ ಪೊಲೀಸರು ರಕ್ಷಿಸಿದ್ದಾರೆ. ಬಾಲಕನನ್ನು ವ್ಯಕ್ತಿಯೋರ್ವನು ಅಲಿಪಿರಿ ಲಿಂಕ್ ಬಸ್ ನಿಲ್ದಾಣದಿಂದ ಅಪಹರಣ ಮಾಡಿದ್ದನು.

ಛತ್ತೀಸ್‌ಗಡ ಬಾಲಕ
Chhattisgarh boy
author img

By

Published : Mar 14, 2021, 10:36 AM IST

Updated : Mar 14, 2021, 10:47 AM IST

ವಿಜಯವಾಡ: ತಿರುಪತಿಯ ಬಸ್ ನಿಲ್ದಾಣದಿಂದ ಅಪಹರಣಕ್ಕೊಳಗಾಗಿದ್ದ ಛತ್ತೀಸ್‌ಗಡದ ಆರು ವರ್ಷದ ಬಾಲಕ ಶಿವಮ್​ ಸಾಹುನನ್ನು ಆಂಧ್ರಪ್ರದೇಶ ಪೊಲೀಸರು ರಕ್ಷಿಸಿದ್ದಾರೆ.

ಫೆಬ್ರವರಿ 27 ರಂದು ಛತ್ತೀಸ್‌ಗಡ ಮೂಲದ ಕುಟುಂಬವೊಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಗೆ ತೆರಳಿತ್ತು. ಈ ವೇಳೆ ಅಲಿಪಿರಿ ಲಿಂಕ್ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವನು ಬಾಲಕನನ್ನು ಅಪಹರಿಸಿದ್ದನು. ಈ ಸಂಬಂಧ ಪೋಷಕರು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ತನಿಖೆ ಕೈಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅಪಹರಣಕಾರನನ್ನು ಆಂಧ್ರಪ್ರದೇಶದ ಚಿತ್ತೋರ್ ಜಿಲ್ಲೆಯ ನಿವಾಸಿ ಶಿವಪ್ಪ ಎಂದು ಗುರುತಿಸಿದ್ದು, ಈತ ಬಾಲಕನನ್ನು ವಿಜಯವಾಡದಲ್ಲಿ ಬಿಟ್ಟು ಪರಾರಿಯಾಗಿದ್ದನು.

ಓದಿ: ಮತ್ತೆ ದೇಶದಲ್ಲಿ ಕೋವಿಡ್​ ಸಾವು-ನೋವು ಹೆಚ್ಚಳ.. 2.97 ಕೋಟಿ ಜನರಿಗೆ ವ್ಯಾಕ್ಸಿನ್​​

ವಿಜಯವಾಡ ಪೊಲೀಸರು ಬಾಲಕನನ್ನು ಪತ್ತೆ ಹಚ್ಚಿ ಕೂಡಲೇ ತಿರುಪತಿ ನಗರ ಪೊಲೀಸರಿಗೆ ಒಪ್ಪಿಸಿದ್ದರು. ಇವರು ಬಾಲಕನನ್ನು ಮಕ್ಕಳ ಸಹಾಯವಾಣಿ ಕೇಂದ್ರದಲ್ಲಿ ಬಿಟ್ಟಿದ್ದಾರೆ. ಸದ್ಯ ಪೋಷಕರು ಬಾಲಕನೊಂದಿಗೆ ವಿಡಿಯೋ ಕಾಲ್​ ಮೂಲಕ ಮಾತನಾಡಿದ್ದು, ಇನ್ನೆರಡು ಮೂರು ದಿನಗಳಲ್ಲಿ ಬಾಲಕ ಮನೆ ಸೇರಲಿದ್ದಾನೆ.

Last Updated : Mar 14, 2021, 10:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.