ETV Bharat / bharat

ವಿಧಾನಸೌಧವೇ ಕೋರ್ಟ್, ಸ್ಪೀಕರೇ ಜಡ್ಜ್:​ ಆರು ಪೊಲೀಸರಿಗೆ ಒಂದು ದಿನದ ಜೈಲು ಶಿಕ್ಷೆ!

author img

By

Published : Mar 3, 2023, 7:52 PM IST

ಉತ್ತರ ಪ್ರದೇಶದ ವಿಧಾನಸಭೆಯ ಕಲಾಪದಲ್ಲಿ ಶುಕ್ರವಾರ ವಿಶೇಷ ಹಕ್ಕು ಉಲ್ಲಂಘನೆ ಪ್ರಕರಣದ ವಿಚಾರಣೆ ನಡೆದಿದೆ. ಈ ವೇಳೆ ಸದನವನ್ನು ನ್ಯಾಯಾಲಯವನ್ನಾಗಿ ಪರಿವರ್ತಿಸಿ, ಆರು ಜನ ಪೊಲೀಸರಿಗೆ ಶಿಕ್ಷೆ ಪ್ರಕಟಿಸಲಾಗಿದೆ.

six-policemen-were-sentenced-to-jail-for-one-day-in-up-assembly
ಆರು ಜನರಿಗೆ ಪೊಲೀಸರಿಗೆ ಒಂದು ದಿನದ ಜೈಲು ಶಿಕ್ಷೆ

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ವಿಧಾನಸೌಧವು ಅಪರೂಪ ಮತ್ತು ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಎರಡು ದಶಕಗಳ ಹಿಂದಿನ ಹಕ್ಕುಚ್ಯುತಿ ಉಲ್ಲಂಘನೆ ಪ್ರಕರಣದಲ್ಲಿ ಆರು ಜನರು ಪೊಲೀಸರಿಗೆ ಒಂದು ದಿನದ ಜೈಲು ಶಿಕ್ಷೆಯನ್ನು ವಿಧಾನಸಭೆ ವಿಧಿಸಿದೆ. ವಿಧಾನಸೌಧದ ಕೊಠಡಿಯಲ್ಲಿ ಮಧ್ಯರಾತ್ರಿಯವರೆಗೂ ಶಿಕ್ಷೆ ಅನುಭವಿಸುವಂತೆ ಸ್ಪೀಕರ್ ತೀರ್ಪು ನೀಡಿದ್ದಾರೆ.

ಪ್ರಕರಣದ ವಿವರಣೆ: ಸುಮಾರು ಎರಡು ದಶಕಗಳಷ್ಟು ಹಳೆಯದಾದ ಪ್ರಕರಣದಲ್ಲಿ ಆಗಿನ ಬಿಜೆಪಿ ಶಾಸಕ ಸಲೀಲ್ ವಿಷ್ಣೋಯ್ ವಿಶೇಷ ಹಕ್ಕು ಉಲ್ಲಂಘನೆ ನೋಟಿಸ್‌ ನೀಡಿದ್ದರು. 2004ರ ಸೆಪ್ಟೆಂಬರ್ 15ರಂದು ಕಾನ್ಪುರದಲ್ಲಿ ವಿದ್ಯುತ್ ಕಡಿತದ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗೆ ದೂರು ನೀಡಲು ವಿಷ್ಣೋಯಿ ನೇತೃತ್ವದ ನಿಯೋಗ ತೆರಳಿತ್ತು. ಆಗ ಪೊಲೀಸ್ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದರು. ಈ ಸಂಬಂಧ ಹಕ್ಕುಚ್ಯುತಿ ಉಲ್ಲಂಘನೆ ನೋಟಿಸ್​ ಕೊಟ್ಟಿದ್ದರು.

ನ್ಯಾಯಾಲಯವಾಗಿ ಸದನ ಪರಿವರ್ತನೆ: ಈ ಪ್ರಕರಣದ ಕುರಿತ ವಿಚಾರಣೆಗಾಗಿ ಸದನದ ವಿಶೇಷಾಧಿಕಾರ ಸಮಿತಿಯನ್ನು ನೇಮಿಸಲಾಗಿತ್ತು. ಸೋಮವಾರ ಸಭೆ ಸೇರಿದ್ದ ಸದನದ ವಿಶೇಷಾಧಿಕಾರ ಸಮಿತಿಯ ಶಿಫಾರಸಿನ ಮೇರೆಗೆ ಆರೋಪಿ ಪೊಲೀಸರಿಗೆ​ ಸಮನ್ಸ್ ಜಾರಿ ಮಾಡಲಾಗಿತ್ತು. ನಂತರದಲ್ಲಿ ಸಮಿತಿಯು ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಿಕ್ಷೆಯಾಗಿ ಜೈಲು ಶಿಕ್ಷೆಗೆ ಶಿಫಾರಸು ಕೂಡ ಮಾಡಿತ್ತು. ಇದರ ತೀರ್ಪು ಪ್ರಕಟಣೆಗಾಗಿ ಶುಕ್ರವಾರ ವಿಧಾನಸಭೆಯನ್ನು ನ್ಯಾಯಾಲಯವಾಗಿ ಪರಿವರ್ತಿಸಲಾಯಿತು.

ವಿಧಾನಸೌಧದ ಕೊಠಡಿ ಒಳಗೆ ಶಿಕ್ಷೆ: ಈ ಸಂದರ್ಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಅವರು, ಆರು ಜನ ಪೊಲೀಸರಿಗೆ ಒಂದು ದಿನದ ಜೈಲುವಾಸ (ಮಧ್ಯರಾತ್ರಿ 12 ರವರೆಗೆ) ನಿರ್ಣಯವನ್ನು ಮಂಡಿಸಿದರು. ನಂತರ ಸ್ಪೀಕರ್ ಸತೀಶ್ ಮಹಾನಾ ತೀರ್ಪು ಪ್ರಕಟಿಸಿದರು. ಈ ಶಿಕ್ಷೆಯನ್ನು ಪೊಲೀಸರು ಮಧ್ಯರಾತ್ರಿಯವರೆಗೂ ವಿಧಾನಸೌಧದ ಒಂದು ಕೊಠಡಿ ಒಳಗೆ ಅನುಭವಿಸಬೇಕು. ಅಗತ್ಯವಾದ ಆಹಾರ ಮತ್ತು ಇತರ ಸೌಕರ್ಯ ವ್ಯವಸ್ಥೆ ಮಾಡಲಾಗುವುದು ಎಂದು ಸ್ಪೀಕರ್ ಮಹಾನಾ ತಿಳಿಸಿದರು.

ಶಿಕ್ಷೆಗೆ ಗುರಿಯಾದ ಪೊಲೀಸರು: ವಿಧಾನಸಭೆಯಿಂದ ಒಂದು ದಿನದ ಜೈಲು ಶಿಕ್ಷೆಗೆ ಗುರಿಯಾದವರಲ್ಲಿ ಓರ್ವ ಪೊಲೀಸ್​ ಅಧಿಕಾರಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಇವರುಗಳು ಮಾಹಿತಿ ಹೀಗಿದೆ.. ಆಗಿನ ಕಾನ್ಪುರ್ ನಗರದಲ್ಲಿನ ಬಾಬುಪುರದ ಸರ್ಕಲ್ ಆಫೀಸರ್ ಆಗಿದ್ದ ಅಬ್ದುಲ್ ಸಮದ್ (ಈಗ ನಿವೃತ್ತರಾಗಿದ್ದಾರೆ), ಕಿದ್ವಾಯಿ ನಗರದ ಎಸ್​ಹೆಚ್​ಒ ಶ್ರೀಕಾಂತ್ ಶುಕ್ಲಾ, ಸಬ್​ ಇನ್ಸ್​​ಪೆಕ್ಟರ್​ ತ್ರಿಲೋಕಿ ಸಿಂಗ್ ಹಾಗೂ ಕಾನ್ಸ್​ಟೇಬಲ್‌ಗಳಾದ ಚೋಟೆ ಸಿಂಗ್, ವಿನೋದ್ ಮಿಶ್ರಾ ಮತ್ತು ಮೆಹರ್ಬನ್ ಸಿಂಗ್ ಶಿಕ್ಷೆಗೆ ಒಳಗಾಗಿದ್ದಾರೆ. ಇದೇ ವೇಳೆ ಅಂದು ಶಾಸಕರ ಜೊತೆಗೆ ನಡೆದ ಘಟನೆಯ ಬಗ್ಗೆ ಪೊಲೀಸರು ವಿಷಾದ ವ್ಯಕ್ತಪಡಿಸಿದ್ದಾರೆ.

58 ವರ್ಷಗಳ ನಂತರ ಮರುಕಳುಹಿಸಿದ ಪ್ರಸಂಗ: ಉತ್ತರ ಪ್ರದೇಶದಲ್ಲಿ ಸದ್ಯ ಬಜೆಟ್ ಅಧಿವೇಶನ ನಡೆಯುತ್ತಿದೆ. ವಿಧಾನಸಭೆಯ ಕಲಾಪದ ಸಂದರ್ಭದಲ್ಲಿ ಶುಕ್ರವಾರ ಈ ವಿಶೇಷ ಹಕ್ಕು ಉಲ್ಲಂಘನೆ ಪ್ರಕರಣದ ವಿಚಾರಣೆ ನಡೆಯಿತು. ಈ ಹಿಂದೆ 1964ರಲ್ಲಿ ಸದನವು ನ್ಯಾಯಾಲಯವಾಗಿ ವಿಚಾರಣೆ ನಡೆಸಿತ್ತು. ಇದೀಗ 58 ವರ್ಷಗಳ ನಂತರ ಸಚಿವ ಸುರೇಶ್ ಕುಮಾರ್ ಖನ್ನಾ ಮಂಡಿಸಿದ ಪ್ರಸ್ತಾವನೆ ಮೇರೆಗೆ ವಿಧಾನಸಭೆಯ ಸದನವನ್ನು ನ್ಯಾಯಾಲಯವನ್ನಾಗಿ ಪರಿವರ್ತಿಸಲಾಗಿತ್ತು.

ಇದನ್ನೂ ಓದಿ: ಅಂಬಾನಿ ಒಡೆತನದ ಮೃಗಾಲಯಕ್ಕೆ ವನ್ಯಜೀವಿಗಳ ಸ್ಥಳಾಂತರದ ಬಗ್ಗೆ ಹೇಳಿಕೆ: ವಿಧಾನಸಭೆಯಿಂದ ಕಾಂಗ್ರೆಸ್​ ಶಾಸಕ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.