ಬೀಡ್ (ಮಹಾರಾಷ್ಟ್ರ): ಕಾರು ಮತ್ತು ಟೆಂಪೋ ನಡುವೆ ಭೀಕರ ರಸ್ತೆ ಸಂಭವಿಸಿ, ಒಂದು ಮಗು ಸೇರಿದಂತೆ 6 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಸಂಭವಿಸಿದೆ. ಕಾರಿನಲ್ಲಿ ಸಂಬಂಧಿಕರ ಮದುವೆಗೆ ಹೋಗುತ್ತಿದ್ದಾಗ ಈ ದುರಂತ ನಡೆದಿದೆ.
ಮೃತರನ್ನು ಕೇಜ್ ತಾಲೂಕಿನ ಜಿವಾಚಿವಾಡಿ ಗ್ರಾಮದವರು ಎಂದು ಗುರುತಿಸಲಾಗಿದೆ. ಮದುವೆ ಸಮಾರಂಭದಲ್ಲಿ ಭಾಗವಹಿಸಲೆಂದು ಪುಣೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಬೆಳಗಿನ ಜಾವ ಮಂಜರ್ಸುಂಬ-ಪಟೋಡಾ ಹೆದ್ದಾರಿಯಲ್ಲಿ ಕಾರು ಮತ್ತು ಟೆಂಪೋ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೋ ಮತ್ತು ರಸ್ತೆ ಡಿವೈಡರ್ ನಡುವೆ ಕಾರು ಸಿಲುಕಿಕೊಂಡಿದೆ. ಕ್ರೇನ್ ಸಹಾಯದಿಂದ ಕಾರನ್ನು ಹೊರ ತೆಗೆಯಲಾಗಿದೆ. ಮೃತಪಟ್ಟ ಆರು ಜನರಲ್ಲಿ ಐವರು ಒಂದೇ ಕುಟುಂಬಕ್ಕೆ ಸೇರಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: ಬೆಂಗಳೂರಿನ ತಾಯಿ-ಮಗ ಸಾವು, ತಂದೆ-ಮಗಳ ಸ್ಥಿತಿ ಗಂಭೀರ