ETV Bharat / bharat

ಸಿಂಘು ಗಡಿ ಭೀಕರ ಹತ್ಯೆಯ ತಪ್ಪೊಪ್ಪಿಕೊಂಡ ನಿಹಾಂಗರು: ಉನ್ನತ ತನಿಖೆಗೆ ಲಖ್ಬಿರ್ ಕುಟುಂಬಸ್ಥರ ಆಗ್ರಹ - Singhu border murder news

ಇದು ಅತ್ಯಂತ ಕ್ರೂರ ಕೃತ್ಯ. ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ 40 ಮಂದಿ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಹರಿಯಾಣ ಡಿಸಿಎಂ ಹಾಗೂ ಜೆಜೆಪಿ ನಾಯಕ ದುಶ್ಯಂತ್ ಚೌಟಾಲಾ ಪ್ರತಿಕ್ರಿಯೆ ನೀಡಿದ್ದಾರೆ.

singhu-border-lynching-two-more-surrender: victims-family-demands-high-level-probe
ಸಿಂಘು ಗಡಿಯಲ್ಲಿ ಕೊಲೆ ಪ್ರಕರಣದಲ್ಲಿ ಈವರೆಗೆ ನಾಲ್ವರ ಬಂಧನ: ಉನ್ನತ ಮಟ್ಟದ ತನಿಖೆಗೆ ಲಖ್ಬಿರ್ ಕುಟುಂಬಸ್ಥರ ಆಗ್ರಹ
author img

By

Published : Oct 17, 2021, 10:50 AM IST

ಸೋನಿಪತ್(ಪಂಜಾಬ್): ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಿಂಘು ಗಡಿಯಲ್ಲಿ ದಲಿತ ಕಾರ್ಮಿಕನ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ನಿಹಾಂಗ್ ಸದಸ್ಯನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಇದಕ್ಕೂ ಮೊದಲು ಇಬ್ಬರು ಸಿಖ್ಖ್ ನಿಹಾಂಗ್ ಸದಸ್ಯರು, ಸೋನಿಪತ್ ಪೊಲೀಸರ ಮುಂದೆ ಹಾಜರಾಗಿ, ತಾವೇ ಹತ್ಯೆ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಹತ್ಯೆಗೊಳಗಾದ ಲಖ್ಬೀರ್ ಸಿಂಗ್ ಕುಟುಂಬಸ್ಥರು ಉನ್ನತ ಮಟ್ಟದ ತನಿಖೆಗೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಲಖ್ಬೀರ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದ ಗ್ರಾಮಸ್ಥರು!

ಮತ್ತೊಂದೆಡೆ, ಲಖ್ಬೀರ್ ಸಿಂಗ್ ಮೃತದೇಹವನ್ನು ಪಂಜಾಬ್​ನ ತಾರ್ನ್ ತರನ್​ ಜಿಲ್ಲೆಯಲ್ಲಿರುವ ಚೀಮಾ ಗ್ರಾಮಕ್ಕೆ ತರಲಾಗಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಅಂತ್ಯಸಂಸ್ಕಾರದ ವೇಳೆ ಬಿಗಿ ಭದ್ರತೆ ನೀಡಲಾಗಿದೆ.

ಆದರೆ ಅಂತ್ಯಕ್ರಿಯೆಯಲ್ಲಿ ಚೀಮಾ ಗ್ರಾಮಸ್ಥರು ಪಾಲ್ಗೊಂಡಿಲ್ಲ. ಅಂತ್ಯಸಂಸ್ಕಾರ ನಡೆಸಿಕೊಡುವ ಸಿಖ್ಖ್ ಧಾರ್ಮಿಕ ವ್ಯಕ್ತಿಯಾದ 'ಅರ್ದಾಸ್' ಕೂಡಾ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿರಲಿಲ್ಲ.

ಶರಣಾಗುವುದಕ್ಕೂ ಮುನ್ನ..

ಲಖ್ಬೀರ್ ಸಿಂಗ್ ಹತ್ಯೆಗೆ ಸಂಬಂಧಿಸಿದಂತೆ ಶುಕ್ರವಾರ ಸಿಖ್ಖ್ ನಿಹಾಂಗ್ ಸದಸ್ಯನಾದ ಸರಬ್ಜಿತ್ ಸಿಂಗ್ ಎಂಬಾತ ಪೊಲೀಸರಿಗೆ ಶರಣಾಗಿದ್ದನು. ಆತನನ್ನು ಬಂಧಿಸಿ ಸೋನಿಪತ್ ಕೋರ್ಟ್​ಗೆ ಹಾಜರುಪಡಿಸಿ, ನಂತರ ಏಳು ದಿನಗಳ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಯಿತು. ಈತ ಶರಣಾಗುವುದಕ್ಕೂ ಮುನ್ನ ಸಿಂಘು ಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದನು.

ಸರಬ್ಜಿತ್ ನಂತರ ಕೆಲವೇ ಗಂಟೆಗಳಲ್ಲಿ ಸಿಖ್ಖ್ ನಿಹಾಂಗ್​​ನ ಮತ್ತೊಬ್ಬ ಸದಸ್ಯನಾದ ನರೈನ್ ಸಿಂಗ್ ಎಂಬಾತನನ್ನು ಅಮೃತಸರ ಪೊಲೀಸರು, ಅಮರ್​ಕೋಟ್ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಸಿಂಘು ಗಡಿಯಲ್ಲಿ ಹತ್ಯೆ: ತನಿಖೆಗೆ ಆದೇಶಿಸಿದ ಹರಿಯಾಣ ಸಿಎಂ, ಆರೋಪಿ ಶರಣು

ಸಿಖ್ಖರ ಪವಿತ್ರ ಗ್ರಂಥವನ್ನು ಅವಮಾನಿಸಿದ ಕಾರಣಕ್ಕಾಗಿ ಆತನಿಗೆ 'ಶಿಕ್ಷೆ' ನೀಡಲಾಗಿದೆ ಎಂದು ಸರಬ್ಜಿತ್ ಸಿಂಘು ಗಡಿಯಲ್ಲಿ ಹೇಳಿದ್ದ. ಇದಾದ ನಂತರ ಶನಿವಾರ ಸಂಜೆ ಮತ್ತೋರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.

ಲಖ್ಬೀರ್ ಕುಟುಂಬಸ್ಥರ ಪ್ರತಿಕ್ರಿಯೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಲಖ್ಬೀರ್ ಪತ್ನಿ ಜಸ್ಪ್ರೀತ್ ಕೌರ್ ಮತ್ತು ಸಹೋದರಿ ರಾಜ್ ಕೌರ್ ಪ್ರತಿಕ್ರಿಯೆ ನೀಡಿದ್ದು, ಸಿಖ್ಖ್​ರ ಪವಿತ್ರ ಗ್ರಂಥ ಗುರುಗ್ರಂಥ ಸಾಹೀಬ್ ಬಗ್ಗೆ ಲಖ್ಬೀರ್​ಗೆ ಗೌರವ ಇತ್ತು. ಆತ ದೇವರಿಗೆ ಭಯಪಡುವ ವ್ಯಕ್ತಿ. ಗುರುಗ್ರಂಥ ಸಾಹೀಬ್​ಗೆ ಅಗೌರವ ತೋರಿಸಲು ಸಾಧ್ಯವೇ ಇಲ್ಲ. ಆತ ಗುರುದ್ವಾರಕ್ಕೆ ಪ್ರಾರ್ಥನೆಗೆ ತೆರಳಿದಾಗ ಕುಟುಂಬ ಮತ್ತು ಸಮಾಜದ ಒಳಿತಿಗಾಗಿ ಪ್ರಾರ್ಥಿಸುತ್ತಿದ್ದನು ಎಂದಿದ್ದಾರೆ.

ಯಾರೊಂದಿಗೂ ಕೆಟ್ಟದಾಗಿ ಲಖ್ಬೀರ್ ವರ್ತಿಸಿಲ್ಲ. ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದು ಲಖ್ಬೀರ್ ಕುಟುಂಬಸ್ಥರು ಹೇಳಿದ್ದಾರೆ. ಇದರ ಜೊತೆಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

'ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ '

ಇದು ಅತ್ಯಂತ ಕ್ರೂರ ಕೃತ್ಯ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ 40 ಮಂದಿ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಹರಿಯಾಣ ಡಿಸಿಎಂ ಹಾಗೂ ಜೆಜೆಪಿ ನಾಯಕ ದುಶ್ಯಂತ್ ಚೌಟಾಲಾ ಪ್ರತಿಕ್ರಿಯೆ ನೀಡಿದ್ದಾರೆ.

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾದ ವಿಜಯ್ ಸಂಪ್ಲ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಪ್ರತಿಭಟನಾ ನಿರತ ರೈತರು ಈ ವಿಚಾರದಲ್ಲಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ರೈತರೂ ಕೂಡಾ ಅಪರಾಧಿಗಳಿಗೆ ಸಮ ಎಂದಿದ್ದಾರೆ. ಇದರ ಜೊತೆಗೆ ಹರಿಯಾಣ ಸರ್ಕಾರದಿಂದ ವರದಿಯನ್ನು ಕೂಡಾ ಕೇಳಿದ್ದಾರೆ.

ಇದನ್ನೂ ಓದಿ: ಯುವಕನ ಕೈ ಕತ್ತರಿಸಿ ದೇಹ ಬ್ಯಾರಿಕೇಡ್‌ಗೆ ನೇತುಹಾಕಿ ದುಷ್ಕೃತ್ಯ: ನಿಹಾಂಗ್ ತೀವ್ರವಾದಿಗಳ ಕೃತ್ಯ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.