ETV Bharat / bharat

ಭಾರತದ ರಾಷ್ಟ್ರಗೀತೆ ಹಾಡಿದ ಬಳಿಕ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಅಮೆರಿಕ ಗಾಯಕಿ ಮೇರಿ ಮಿಲ್ಬೆನ್- ವಿಡಿಯೋ - India national anthem Jana Gana Mana

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಸಮಾರೋಪ ಸಮಾರಂಭದಲ್ಲಿ ಪ್ರಸಿದ್ಧ ಗಾಯಕಿ ಮೇರಿ ಮಿಲ್ಬೆನ್ ಅವರು ಭಾರತದ ರಾಷ್ಟ್ರಗೀತೆ ಹಾಡಿದರು.

American singer Mary Millben
ಅಮೆರಿಕ ಗಾಯಕಿ ಮೇರಿ ಮಿಲ್ಬೆನ್
author img

By

Published : Jun 25, 2023, 8:57 AM IST

ನವದೆಹಲಿ : ಅಮೆರಿಕ ಪ್ರವಾಸದ ಸಮಾರೋಪ ಸಮಾರಂಭದಲ್ಲಿ ಭಾರತದ ರಾಷ್ಟ್ರಗೀತೆ 'ಜನಗಣ ಮನ' ಹಾಡಿದ ಬಳಿಕ ಅಮೆರಿಕನ್ ಗಾಯಕಿ ಮೇರಿ ಮಿಲ್ಬೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದಿದ್ದು ವಿಶೇಷವಾಗಿ ಗಮನ ಸೆಳೆಯಿತು. 38 ವರ್ಷದ ಮೇರಿ ಮಿಲ್ಬೆನ್ ಅವರು ವಾಷಿಂಗ್ಟನ್ ಡಿಸಿಯಲ್ಲಿನ ರೊನಾಲ್ಡ್ ರೀಗನ್ ಬಿಲ್ಡಿಂಗ್​ ಮತ್ತು ಇಂಟರ್ನ್ಯಾಷನಲ್ ಟ್ರೇಡ್ ಸೆಂಟರ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಇಂಡಿಯನ್ ಕಮ್ಯುನಿಟಿ ಫೌಂಡೇಶನ್ (USICF) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ರಾಷ್ಟ್ರಗೀತೆ ಹಾಡಿದ ನಂತರ ಪ್ರಧಾನಿ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು. ಮೇರಿ ಅವರು ಪಾದಗಳನ್ನು ಮುಟ್ಟುತ್ತಿರುವುದನ್ನು ನೋಡಿದ ಪ್ರಧಾನಿ ಮೋದಿ ಕೂಡಲೇ ಅವರನ್ನು ತಡೆಯಲು ಮುಂದಾಗಿ, ಹಸ್ತಲಾಘವ ಮಾಡಿದರು.

  • A night I will treasure forever. Performing for His Excellency Prime Minister Narendra Modi for the concluding event of the PM’s Official State Arrival Visit to the United States. See last night’s post for the official performance airing from @DDNewslive.

    What I loved most… pic.twitter.com/RFUctGkh3l

    — Mary Millben (@MaryMillben) June 24, 2023 " class="align-text-top noRightClick twitterSection" data=" ">

ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದ ಪ್ರಮುಖ ಕ್ಷಣಗಳು.. Videoದಲ್ಲಿ ನೋಡಿ!

ಅಮೆರಿಕ ಪ್ರವಾಸದ ವೇಳೆ ರೊನಾಲ್ಡ್ ರೀಗನ್ ಸೆಂಟರ್‌ನಲ್ಲಿ ನರೇಂದ್ರ ಮೋದಿ ಅವರು ಅನಿವಾಸಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖ ಆಫ್ರಿಕನ್-ಅಮೆರಿಕನ್ ಹಾಲಿವುಡ್ ನಟಿ ಮತ್ತು ಗಾಯಕಿ ಮಿಲ್ಬೆನ್ ಅವರು ಭಾರತ ರಾಷ್ಟ್ರೀಯ ಗೀತೆ ಜನಗಣ ಮನ ಮತ್ತು ಓಂ ಜೈ ಜಗದೀಶ್ ಹರೇ ಹಾಡುಗಳನ್ನು ಹಾಡಿದ್ದು, ಭಾರತದಲ್ಲಿ ಇದೀಗ ಇನ್ನಷ್ಟು ಹೆಚ್ಚು ಜನಪ್ರಿಯರಾಗಿದ್ದಾರೆ.

ಇದನ್ನೂ ಓದಿ : ನನಗೆ ಮೋದಿಯವರ ಬಗ್ಗೆ ತುಂಬಾ ಹೆಮ್ಮೆ ಇದೆ : ​ಅಮೆರಿಕ ಸಂಸದ ಕನ್ನಡಿಗ ಶ್ರೀ ಥಾನೇದಾರ್ ಸಂತಸ.. ಯಾರೀ ಶ್ರೀ

"ಅಮೆರಿಕದ ರಾಷ್ಟ್ರಗೀತೆ ಮತ್ತು ದೇಶಭಕ್ತಿಯ ಹಾಡುಗಳನ್ನು ಯುಎಸ್ ಅಧ್ಯಕ್ಷರ ಮುಂದೆ ಹಾಡಿರುವ ನಾನು, ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಭಾರತ ಮತ್ತು ಅಮೆರಿಕಕ್ಕೆ ಗೌರವ ಸೂಚಿಸಲು ನನ್ನ ಕುಟುಂಬವನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ" ಎಂದು ಕಾರ್ಯದಲ್ಲಿ ಮೇರಿ ಮಿಲ್ಬೆನ್ ಹೇಳಿದರು.

ಇದನ್ನೂ ಓದಿ : ಭಾರತ ಮತ್ತು ಅಮೆರಿಕ ಸಂಬಂಧ ಆಕಾಶದಂತೆ ಮಿತಿಯೇ ಇಲ್ಲ : ಜಂಟಿ ಅಧಿವೇಶನದಲ್ಲಿ ಕವಿತೆ ಓದಿ ಮಂತ್ರ ಮುಗ್ದಗೊಳಿಸಿದ ಮೋದಿ

"ಅಮೆರಿಕನ್ ಮತ್ತು ಭಾರತೀಯ ಗೀತೆಗಳು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಆದರ್ಶಗಳನ್ನು ಹೇಳುತ್ತವೆ. ಇದು ಯುಎಸ್- ಭಾರತದ ಸಂಬಂಧದ ನಿಜವಾದ ಸಾರ. ಸ್ವತಂತ್ರ ರಾಷ್ಟ್ರವನ್ನು ಸ್ವತಂತ್ರ ಜನರಿಂದ ಮಾತ್ರ ವ್ಯಾಖ್ಯಾನಿಸಲಾಗುತ್ತದೆ" ಎಂದು ಅವರು ತಿಳಿಸಿದರು.

ಕಳೆದ ತಿಂಗಳು ನರೇಂದ್ರ ಮೋದಿ ಅವರು ಪಪುವಾ ನ್ಯೂಗಿನಿ ದೇಶಕ್ಕೆ ಭೇಟಿ ನೀಡಿದ್ದಾಗ ಪೋರ್ಟ್ ಮೊರೆಸ್ಬಿ ವಿಮಾನ ನಿಲ್ದಾಣದಲ್ಲಿ ಅಪರೂಪದ ದೃಶ್ಯವೊಂದು ಕಂಡುಬಂದಿತ್ತು. ಅಲ್ಲಿನ ಪ್ರಧಾನ ಮಂತ್ರಿ ಜೇಮ್ಸ್ ಮರಾಪೆ ಅವರು ನರೇಂದ್ರ ಮೋದಿಯವರ ಪಾದಗಳನ್ನು ಸ್ಪರ್ಶಿಸಿ, ಆಶೀರ್ವಾದ ಪಡೆಯುವ ಮೂಲಕ ಸರಳತೆ ಮೆರೆದಿದ್ದರು.

ಇದನ್ನೂ ಓದಿ : ಮೋದಿ ಕಾಲು ಮುಟ್ಟಿ ಆಶೀರ್ವಾದ ಪಡೆದ ಪಪುವಾ ನ್ಯೂಗಿನಿ ಪ್ರಧಾನಿ ಜೇಮ್ಸ್ ಮರಾಪೆ!- ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.