ETV Bharat / bharat

ಮಲೇಷ್ಯಾ ಓಪನ್: 2ನೇ ಸುತ್ತಿಗೆ ಸಿಂಧು, ಸೈನಾಗೆ ಸೋಲು - ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್

ವಿಶ್ವ ಚಾಂಪಿಯನ್ ಆಗಿದ್ದ ಪಿವಿ ಸಿಂಧು, ಥಾಯ್ಲೆಂಡ್​​​​​​​ನ 10ನೇ ವಿಶ್ವ ರ್ಯಾಂಕಿಂಗ್ ಆಟಗಾರ್ತಿ ಪೊರ್ನಪಾವೀ ಚೊಚೊವೊಂಗ್ ಅವರನ್ನು 21-13 21-17 ಸೆಟ್​ಗಳಲ್ಲಿ ಸೋಲಿಸಿ ಎರಡನೇ ಸುತ್ತಿಗೆ ಮುನ್ನಡೆದರು.

Sindhu wins, Saina loses in Malaysia Open

author img

By

Published : Jun 29, 2022, 1:34 PM IST

ಕೌಲಾಲಂಪುರ: ಮಲೇಷ್ಯಾ ಓಪನ್ ಸೂಪರ್ 750 ಟೂರ್ನಮೆಂಟ್​ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಸಿಹಿ ಮತ್ತು ಕಹಿ ಫಲಿತಾಂಶಗಳನ್ನು ಪಡೆದಿದ್ದಾರೆ. ಪಿವಿ ಸಿಂಧು ಎರಡನೇ ರೌಂಡಿಗೆ ಮುನ್ನುಗ್ಗಿದರೆ, ಸೈನಾ ನೆಹ್ವಾಲ್ ಪ್ರಥಮ ಸುತ್ತಿನಲ್ಲೇ ಸೋಲನುಭವಿಸಿದರು.

ವಿಶ್ವ ಚಾಂಪಿಯನ್ ಆಗಿದ್ದ ಪಿವಿ ಸಿಂಧು, ಥಾಯ್ಲೆಂಡ್​​ನ 10ನೇ ವಿಶ್ವ ರ್ಯಾಂಕಿಂಗ್ ಆಟಗಾರ್ತಿ ಪೊರ್ನಪಾವೀ ಚೊಚೊವೊಂಗ್ ಅವರನ್ನು 21-13 21-17 ಸೆಟ್​ಗಳಲ್ಲಿ ಸೋಲಿಸಿ ಎರಡನೇ ಸುತ್ತಿಗೆ ಮುನ್ನಡೆದರು. ಲಂಡನ್ ಒಲಿಂಪಿಕ್ಸ್​ನಲ್ಲಿ ರಜತ ಪದಕ ವಿಜೇತೆ ಸೈನಾ ನೆಹ್ವಾಲ್, ವಿಶ್ವದ 33ನೇ ರ್ಯಾಂಕ್ ಆಟಗಾರ್ತಿ ಅಮೆರಿಕದ ಐರಿಸ್ ವಾಂಗ್ ಎದುರು 37 ನಿಮಿಷ ಆಟವಾಡಿ 11-21 17-21 ಸೆಟ್​ಗಳಲ್ಲಿ ಸೋತು ನಿರ್ಗಮಿಸಿದರು.

ಡಬಲ್ಸ್​ನಲ್ಲಿ ಭಾರತದ ಬಿ ಸುಮೀತ್ ರೆಡ್ಡಿ ಮತ್ತು ಆಶ್ವಿನಿ ಪೊನ್ನಪ್ಪ ಜೋಡಿಯು ನೆದರ್ಲೆಂಡ್​ನ ರಾಬಿನ್ ಟಾಬೆಲಿಂಗ್ ಮತ್ತು ಸೆಲೆನಾ ಪೀಯೆಕ್ ಅವರ ಜೋಡಿಯ ವಿರುದ್ಧ 15-21 21-19 17-21 ಸೆಟ್​ಗಳಲ್ಲಿ ಪರಾಭವಗೊಂಡಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.