ಲಾಚುಂಗ್ (ಸಿಕ್ಕಿಂ): ಉತ್ತರ ಸಿಕ್ಕಿಂನ ಲಾಚುಂಗ್‌ನಲ್ಲಿ ಹಿಮದಲ್ಲಿ ಸಿಲುಕಿದ್ದ 300 ಪ್ರವಾಸಿಗರನ್ನು ಭಾರತೀಯ ಸೇನೆ ಬುಧವಾರ ರಕ್ಷಿಸಿದೆ. ರಕ್ಷಿಸಲ್ಪಟ್ಟ ಎಲ್ಲಾ ಪ್ರವಾಸಿಗರಿಗೆ ವೈದ್ಯಕೀಯ ನೆರವು ಮತ್ತು ಬಿಸಿ ಊಟ ಒದಗಿಸಲಾಗಿದೆ.
ಪ್ರವಾಸಿಗರಿಗೆ ರಸ್ತೆ ತೆರೆಯುವಿಕೆ, ವೈದ್ಯಕೀಯ ನೆರವು ಮತ್ತು ಬಿಸಿ ಊಟದ ಮೂಲಕ ಸಹಾಯ ಮಾಡಲಾಯಿತು ಎಂದು ಭಾರತೀಯ ಸೇನೆಯ ಈಸ್ಟರ್ನ್ ಕಮಾಂಡ್ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದೆ.
ಕಳೆದ ಶನಿವಾರ ಭಾರಿ ಹಿಮದಿಂದ ಚೀನಾ ಗಡಿಯ ಬಳಿ ಪೂರ್ವ ಸಿಕ್ಕಿಂನ ಮೇಲ್ಭಾಗದಲ್ಲಿ ಸಿಲುಕಿಕೊಂಡಿದ್ದ ಸುಮಾರು 1,027 ಪ್ರವಾಸಿಗರನ್ನು ಸೇನೆ ರಕ್ಷಿಸಿತ್ತು.
ಶನಿವಾರ ಮಧ್ಯಾಹ್ನ ನಾಥು ಲಾ, ತ್ಸೋಮ್ಗೊ ಸರೋವರ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ತೀವ್ರ ಹಿಮಪಾತವಾಗಿದೆ. ತಾಪಮಾನ ಶೂನ್ಯ ಮಟ್ಟಕ್ಕೆ ಇಳಿದಿದೆ.
ಇದನ್ನೂ ಓದಿ: ಸಿಕ್ಕೀಂನಲ್ಲಿ ಹಿಮಪಾತ: ಸಾವಿರಕ್ಕೂ ಹೆಚ್ಚು ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ