ETV Bharat / bharat

ಬಸ್​ ಕಾಲುವೆಗೆ ಬಿದ್ದು ಪ್ರಯಾಣಿಕರ ಸಾವು ಪ್ರಕರಣ: ಒಂದೇ ಚಿತೆಯಲ್ಲಿ ಸತಿ-ಪತಿ ಅಂತ್ಯಕ್ರಿಯೆ! - ಕಾಲುವೆಗೆ ಬಿದ್ದ ಬಸ್​

ಬಸ್​ವೊಂದು ಕಾಲುವೆಗೆ ಮುಗುಚಿ ಬಿದ್ದು 51 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದಿದ್ದು, ಇದೀಗ ಘಟನೆಯಲ್ಲಿ ಸಾವನ್ನಪ್ಪಿರುವ ನವ ಜೋಡಿಯ ಅಂತ್ಯಕ್ರಿಯೆ ಒಟ್ಟಿಗೆ ನಡೆಸಲಾಗಿದೆ.

Sidhi bus accident
Sidhi bus accident
author img

By

Published : Feb 18, 2021, 3:07 PM IST

ಸಿಧಿ(ಮಧ್ಯಪ್ರದೇಶ): ಬಸ್​ವೊಂದು ಕಾಲುವೆಗೆ ಉರುಳಿ ಬಿದ್ದು 51 ಜನರು ದುರ್ಮರಣಕ್ಕೀಡಾಗಿರುವ ಘಟನೆ ಮಧ್ಯಪ್ರದೇಶದ ಸಿಧಿಯಲ್ಲಿ ಕಳೆದ ಮಂಗಳವಾರ ನಡೆದಿದ್ದು, ಘಟನೆಯಲ್ಲಿ ಸಾವನ್ನಪ್ಪಿರುವ ದಂಪತಿಗಳಿಬ್ಬರ ಅಂತ್ಯಕ್ರಿಯನ್ನ ಒಂದೇ ಚಿತೆಯಲ್ಲಿ ಒಟ್ಟಿಗೆ ನಡೆಸಲಾಯಿತು.

ಒಂದೇ ಚಿತೆಯಲ್ಲಿ ಸತಿ-ಪತಿ ಅಂತ್ಯಕ್ರಿಯೆ

ಸಿಧಿ ಅಪಘಾತದಲ್ಲಿ ದೇವರಿ ಗ್ರಾಮದ ರಾಹುಲ್ ಹಾಗೂ ಆತನ ಪತ್ನಿ ತಪಸ್ವಿ ಸಾವನ್ನಪ್ಪಿದ್ದರು. ಇವರಿಬ್ಬರ ಅಂತ್ಯಕ್ರಿಯೆಯನ್ನ ಇಂದು ಗ್ರಾಮಸ್ಥರೆಲ್ಲರೂ ಸೇರಿ ಒಂದೇ ಚಿತೆಯಲ್ಲಿ ನಡೆಸಲಾಯಿತು. ಈ ವೇಳೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಓದಿ: ತಮ್ಮ ವಿರುದ್ಧದ ದೂರನ್ನು ತಪ್ಪಾಗಿ ಅನುವಾದಿಸಿದ ಪುದುಚೆರಿ ಸಿಎಂ!

ರಾಹುಲ್​ ತನ್ನ ಪತ್ನಿ ಜತೆ ಪರೀಕ್ಷೆ ಬರೆಯುವ ಉದ್ದೇಶದಿಂದ ಸತಾರಾಗೆ ತೆರಳಿದ್ದರು. ಅಲ್ಲಿಂದ ವಾಪಸ್​ ಬರುತ್ತಿದ್ದ ವೇಳೆ ಈ ದುರ್ಘಟನೆಯಲ್ಲಿ ಸಾವಿಗೀಡಾಗಿದ್ದರು. ಕಳೆದ ಎಂಟು ತಿಂಗಳ ಹಿಂದೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. 25 ವರ್ಷದ ರಾಹುಲ್ ಹಾಗೂ ಆತನ ಪತ್ನಿ ತಪಸ್ವಿ ಕಮಲಾ ಕಾಲೇಜ್​ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ​ ನಿನ್ನೆ ತಡರಾತ್ರಿ ಇಬ್ಬರ ಮೃತದೇಹ ಗ್ರಾಮಕ್ಕೆ ಬಂದಿದ್ದು, ಇಂದು ಅಂತ್ಯಕ್ರಿಯೆ ನಡೆಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.