ETV Bharat / bharat

ದೃಷ್ಟಿ ಇಲ್ಲದಿದ್ದರೂ ಓದಬಹುದು ಹನುಮಾನ್​ ಚಾಲೀಸಾ.. ಬ್ರೈಲ್ ಲಿಪಿಯಲ್ಲಿ ಮುದ್ರಣ! - ಬ್ರೈಲ್ ಲಿಪಿಯಲ್ಲಿ ಹನುಮಾನ್​ ಚಾಲೀಸಾ

ಇತ್ತೀಚಿನ ದಿನಗಳಲ್ಲಿ ಹನುಮಾನ್​ ಚಾಲೀಸಾ ಹೆಚ್ಚು ಚರ್ಚೆಯಲ್ಲಿರುವ ವಿಷಯ. ಇದರ ಮಧ್ಯೆ 67 ವರ್ಷದ ಮಹಿಳೆಯೋರ್ವರು ಬ್ರೈಲ್​ ಲಿಪಿಯಲ್ಲಿ ಹನುಮಾನ್ ಚಾಲೀಸಾ ಮುದ್ರಣ ಮಾಡಿದ್ದಾರೆ.

Hanuman Chalisa printed in Braille script for blind

author img

By

Published : May 3, 2022, 8:38 PM IST

ರಾಯ್​ಪುರ್​(ಛತ್ತೀಸ್​ಗಢ): ರಾಮಾಯಣ, ಮಹಾಭಾರತ ಈಗಾಗಲೇ ಬ್ರೈಲ್​ ಲಿಪಿಯಲ್ಲಿ ಲಭ್ಯವಿದ್ದು, ಇದೀಗ ಹನುಮಾನ್ ಚಾಲೀಸಾ ಕೂಡ ಇದೇ ಭಾಷೆಯಲ್ಲಿ ಮುದ್ರಣಗೊಂಡಿದೆ. ಕೆಲ ದಿನಗಳಲ್ಲೇ ಈ ಪುಸ್ತಕ ಜನರ ಕೈ ಸೇರಲಿದೆ. ಛತ್ತೀಸ್​ಗಢದ ರಾಯ್​ಪುರದಲ್ಲಿರುವ ಹಿರಿಯ ಮಹಿಳೆಯೊಬ್ಬರು ಬ್ರೈಲ್ ಲಿಪಿಯಲ್ಲಿ ಹನುಮಾನ್​ ಚಾಲೀಸಾ ಮುದ್ರಿಸಿದ್ದಾರೆ.

ರಾಯ್​ಪುರದ ಶುಭಾಂಗಿ ಅಪ್ಟೆ(67) ಬ್ರೈಲ್​ ಲಿಪಿಯಲ್ಲಿ ಹನುಮಾನ್​ ಚಾಲೀಸಾ ಮುದ್ರಣ ಮಾಡಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ಈಟಿವಿ ಭಾರತ್ ಜೊತೆ ಸಂವಾದ ನಡೆಸಿದರು.

ದೃಷ್ಟಿ ಇಲ್ಲದಿದ್ದರೂ ಓದಬಹುದು ಹನುಮಾನ್​ ಚಾಲೀಸಾ...ಬ್ರೈಲ್ ಲಿಪಿಯಲ್ಲಿ ಮುದ್ರಣ!
  • ಹನುಮಾನ್ ಚಾಲೀಸಾ ಬ್ರೈಲ್ ಲಿಪಿಯಲ್ಲಿ ಮುದ್ರಿಸುವ ಆಲೋಚನೆ ನಿಮ್ಮಗೆ ಹೇಗೆ ಬಂತು?

ನಾವು ಪ್ರತಿದಿನ ಹನುಮಾನ್​ ಚಾಲೀಸಾ ಪಠಿಸುತ್ತೇವೆ. ಆದರೆ, ಇದು ಬ್ರೈಲ್ ಲಿಪಿಯಲ್ಲಿದೆಯೋ ಇಲ್ಲವೋ ಎಂಬುದು ನನ್ನ ಮನಸ್ಸಿಗೆ ಬಂತು. ನಾನು ಓದುತ್ತಿದ್ದ ಪುಸ್ತುಕ ನಾಗ್ಪುರದಲ್ಲಿ ಮುದ್ರಣಗೊಂಡಿದ್ದರಿಂದ ಅವರಿಗೆ ಫೋನ್ ಮಾಡಿ ಮಾತನಾಡಿದೆ. ಈ ವೇಳೆ ಬ್ರೈಲ್ ಲಿಪಿಯಲ್ಲಿ ಇಲ್ಲದಿರುವ ವಿಷಯ ಗೊತ್ತಾಗಿ, ನಾನು ಈ ನಿರ್ಧಾರ ಮಾಡಿದೆ.

  • ಈ ಪುಸ್ತಕ ವಿಶೇಷಚೇತನಿಗೆ ಹೇಗೆ ತಲುಪಿಸುತ್ತೀರಿ?

ಎಲ್ಲ ಅಂಧರ ಶಾಲೆಗಳಿಗೆ ಭೇಟಿ ನೀಡುವ ನಿರ್ಧಾರ ಮಾಡಿದ್ದೇನೆ. ವಿಶೇಷಚೇತನರಿಗೆ ಈ ಪುಸ್ತಕ ನೀಡುವ ನಿರ್ಧಾರ ಮಾಡಿದ್ದೇನೆ. ಇದರ ಜೊತೆಗೆ ಮುಂಬೈನಿಂದ ದೃಷ್ಟಿ ಪತ್ರಿಕೆ ಪ್ರಕಟವಾಗ್ತಿದ್ದು, ಅದರಲ್ಲಿ ನನ್ನ ಫೋನ್ ನಂಬರ್ ನೀಡಲಾಗಿದ್ದು, ಪುಸ್ತಕ ಬೇಕಾದವರು ನನ್ನನ್ನು ಸಂಪರ್ಕಿಸಬಹುದು. ನನ್ನ ಸಂಪರ್ಕಿಸುವ ಎಲ್ಲರಿಗೂ ಉಚಿತವಾಗಿ ನೀಡುತ್ತೇನೆ.

  • ಹನುಮಾನ್​ ಚಾಲೀಸಾ ಬ್ರೈಲ್ ಲಿಪಿಯಲ್ಲಿ ಮಾತ್ರ ಮುದ್ರಿಸುವ ಉದ್ದೇಶ?

ಕಳೆದ ನಾಲ್ಕೈದು ವರ್ಷಗಳಿಂದ ವಿಶೇಷಚೇತನರಿಗಾಗಿ ಕೆಲಸ ಮಾಡ್ತಿದ್ದೇನೆ. ಇದು ನನ್ನಲ್ಲಿ ತೃಪ್ತಿ ತಂದಿದೆ. ಇದೀಗ ಅಂಧರ ಶಾಲೆಗಳಿಗೆ ಭೇಟಿ ನೀಡಿ, ಅವರಿಗೆ ಹನುಮಾನ್ ಚಾಲೀಸಾ ಪುಸ್ತಕ ನೀಡಲು ಮುಂದಾಗಿದ್ದೇನೆ.

  • ವಿಶೇಷಚೇತನರ ಶ್ರೇಯೋಭಿವೃದ್ಧಿಗೆ ನಿಮ್ಮ ಕಡೆಯ ಕ್ರಮಗಳೇನು?

ನಾನು ಏನು ಅಂದುಕೊಳ್ಳುತ್ತೇನೂ ಅದನ್ನ ಮಾಡಲು ಪ್ರಯತ್ನಿಸುತ್ತೇನೆ. ವಿಶೇಷಚೇತನರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುವುದು ನನ್ನ ಉದ್ದೇಶ. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ನನ್ನಿಂದ ಇತರರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ.

  • ಪುಸ್ತಕ ಪ್ರಕಟಣೆಗೋಸ್ಕರ ನೀವೂ ಖರ್ಚು ಮಾಡಿರುವ ಹಣ ಎಷ್ಟು? ಕುಟುಂಬದಿಂದಲೂ ಸಹಾಯ ಪಡೆಯುತ್ತೀರಾ?

ಪುಸ್ತಕವನ್ನ ಸ್ವಂತ ಖರ್ಚಿನಲ್ಲೇ ಪ್ರಕಟಿಸಿದ್ದೇನೆ. ಇತರರ ಸಹಾಯದಿಂದ ಅದನ್ನ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ. ನನ್ನ ಕುಟುಂಬದಿಂದಲೂ ಉತ್ತಮ ಬೆಂಬಲ ಸಿಕ್ಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.