ETV Bharat / bharat

ನಿರ್ಗತಿಕ ಗೋವುಗಳಿಗೆ ಸಿಗುತ್ತಿದೆ ರಾಜಾತಿಥ್ಯ.. ಇದು ಕಾಮಧೇನುಗಳ ‘ಕೈಲಾಸ’! - ಬಿಡಾಡಿ ಹಸುಗಳ

ಹಸುವಿನ ಸಗಣಿಯಲ್ಲಿ ತಯಾರಿಸಿದ ಧೂಪವನ್ನು ವ್ಯಕ್ತಿಗಳು ಮೃತಪಟ್ಟಾಗ ಅವರ ಅಂತ್ಯ ಸಂಸ್ಕಾರದ ವೇಳೆ ಬಳಸಲಾಗುತ್ತದೆ ಅಂತ ಸಂಸ್ಥೆಯ ಅಧ್ಯಕ್ಷರು ಸಂತಸ ಹಂಚಿಕೊಂಡಿದ್ದಾರೆ. ಇತ್ತ ಹಸುಗಳಿಗಾಗಿಯೇ ಈ ಗೋಶಾಲೆಯಲ್ಲಿ ಅತ್ಯಾಧುನಿಕ ಆಸ್ಪತ್ರೆ ವ್ಯವಸ್ಥೆ ಸಹ ಇದೆ. ಐಸಿಯು, ಎಕ್ಸ್​ರೇ ರೂಮ್, ಟ್ರಾಮಾ ವಾರ್ಡ್​, ಆಪರೇಷನ್ ಥಿಯೇಟರ್ ಸೇರಿ ಒಪಿಡಿ ವ್ಯವಸ್ಥೆ ಮಾಡಲಾಗಿದೆ..

shri-balaji-gaushala-institute-of-salasar-an-exquisite-example-of-animal-protection
ಕಾಮಧೇನುಗಳ ‘ಕೈಲಾಸ’ ಈ ಬಾಲಾಜಿ ಗೋಶಾಲೆ
author img

By

Published : Apr 17, 2021, 6:06 AM IST

ಜೈಪುರ,(ರಾಜಸ್ಥಾನ) : ದೇಶದಲ್ಲಿ ಬಿಡಾಡಿ ಹಸುಗಳ ರಕ್ಷಣೆಗೆಂದು ನೂರಾರು ಸಂಘ-ಸಂಸ್ಥೆಗಳಿವೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಹಸುಗಳ ರಕ್ಷಣೆಗೆ ಮುಂದಾಗಿ ಮಾನವೀಯತೆ ಪಾಠ ಮಾಡಿವೆ. ಇಂಥ ಮಹಾನ್ ಕಾರ್ಯಕ್ಕೆ ಅತ್ಯುತ್ತಮ ಉದಾಹರಣೆ ಅಂದರೆ ರಾಜಸ್ಥಾನದ ಚುರುವಿನ ಸಾಲಸಾರ್​​​ನಲ್ಲಿನ ಶ್ರೀ ಬಾಲಾಜಿ ಗೋಶಾಲಾ ಸಂಸ್ಥೆ ಸಹ ಒಂದಾಗಿದೆ. ಈ ಗೋಶಾಲೆಯಲ್ಲಿ ಹಸುಗಳಿಗೆ ವಿಶೇಷ ಆಥಿತ್ಯ ನೀಡಲಾಗುತ್ತದೆ. ಅಲ್ಲದೇ ಇಲ್ಲಿನ ಹಸುಗಳಿಗೆ ಇಸ್ರೇಲ್ ಮಾದರಿಯ ಆಧುನಿಕ ತಂತ್ರಜ್ಞಾನದ ಮೂಲಕ ಸಾವಯವ ಆಹಾರ ನೀಡಲಾಗುತ್ತದೆ.

ನಿರ್ಗತಿಕ ಗೋವುಗಳಿಗೆ ಈ ಗೋಶಾಲೆ ನೀಡುತ್ತಿದೆ ರಾಜಾತಿಥ್ಯ

ಇದು ಮಾತ್ರವಲ್ಲ ಹಸುಗಳ ಹಸಿವು ನೀಗಿಸಲು 1 ಗಂಟೆಯಲ್ಲಿ ಸಾವಿರ ರೊಟ್ಟಿ ತಯಾರಿಸುವ ಯಂತ್ರ ಸಹ ಈ ಗೋಶಾಲೆಯಲ್ಲಿದೆ. ಈ ಗೋಶಾಲೆಯಲ್ಲಿ ಬರೋಬ್ಬರಿ 1,600 ಹಸುಗಳು ಆಶ್ರಯ ಪಡೆದಿವೆ. ಇವುಗಳಲ್ಲಿ ಹಲವು ಅಂಗವಿಕಲತೆಯಿಂದ ಅಥವಾ ವಾರಸುದಾರರಿಲ್ಲದೆ ಮರುಗುತ್ತಿದ್ದ ಹಸುಗಳಾಗಿವೆ. ಇವುಗಳಿಗೀಗ ಆಧುನಿಕ ರೀತಿಯ ಆರೈಕೆ ಸಿಗುತ್ತಿದೆ. ಜೊತೆಗೆ ಗೋಶಾಲೆಯಲ್ಲಿ ಗೋವಿನ ಸಗಣಿ ಬಳಸಿ ಧೂಪ ಮತ್ತು ಅಗರಭತ್ತಿಗಳನ್ನ ತಯಾರಿಸಲಾಗುತ್ತಿದೆ.

ಹಸುವಿನ ಸಗಣಿಯಲ್ಲಿ ತಯಾರಿಸಿದ ಧೂಪವನ್ನು ವ್ಯಕ್ತಿಗಳು ಮೃತಪಟ್ಟಾಗ ಅವರ ಅಂತ್ಯ ಸಂಸ್ಕಾರದ ವೇಳೆ ಬಳಸಲಾಗುತ್ತದೆ ಅಂತ ಸಂಸ್ಥೆಯ ಅಧ್ಯಕ್ಷರು ಸಂತಸ ಹಂಚಿಕೊಂಡಿದ್ದಾರೆ. ಇತ್ತ ಹಸುಗಳಿಗಾಗಿಯೇ ಈ ಗೋಶಾಲೆಯಲ್ಲಿ ಅತ್ಯಾಧುನಿಕ ಆಸ್ಪತ್ರೆ ವ್ಯವಸ್ಥೆ ಸಹ ಇದೆ. ಐಸಿಯು, ಎಕ್ಸ್​ರೇ ರೂಮ್, ಟ್ರಾಮಾ ವಾರ್ಡ್​, ಆಪರೇಷನ್ ಥಿಯೇಟರ್ ಸೇರಿ ಒಪಿಡಿ ವ್ಯವಸ್ಥೆ ಮಾಡಲಾಗಿದೆ.

ಈ ಗೋಶಾಲೆ ಕೇವಲ ಹಸುಗಳ ಆಶ್ರಯಕ್ಕೆ ಮಾತ್ರ ಸೀಮಿತವಾಗಿರದೇ ಪಕ್ಷಿಗಳಿಗೂ ಆಶ್ರಯತಾಣವಾಗಿದೆ. ಗೋಶಾಲೆ ಆವರಣದಲ್ಲಿ 1 ಸಾವಿರ ಪಕ್ಷಿಗಳು ನೆಲೆಸುವಷ್ಟು ದೊಡ್ಡ ಕೃತಕ ಗೂಡು ನಿರ್ಮಿಸಲಾಗಿದೆ. ಪಕ್ಷಿಗಳು ಗೋಶಾಲೆಯ ಬಹುಕಾಲದ ಅತಿಥಿಗಳಾಗಿವೆ. ಗೋಶಾಲೆ ನಡೆಸಲು ಸರ್ಕಾರದಿಂದ ಅನುದಾನ ಸಿಗುತ್ತಿದೆ. ಅಷ್ಟೇ ಅಲ್ಲ, ಪ್ರಾಣಿ ಪ್ರಿಯರು ಸ್ವ ಇಚ್ಛೆಯಿಂದ ಸಹಾಯ ಮಾಡುತ್ತಾ ಬಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.