ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಶೂಟೌಟ್ ನಡೆದಿದ್ದು, ಗ್ಯಾಂಗ್ಸ್ಟರ್ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಕೀಲರ ಉಡುಪಿನಲ್ಲಿ ಬಂದಿರುವ ಗ್ಯಾಂಗ್ಸ್ಟರ್ಗಳು ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿದು ಬಂದಿದೆ.
ಈ ದಾಳಿಯಲ್ಲಿ ಗ್ಯಾಂಗ್ಸ್ಟರ್ ಜಿತೇಂದ್ರ ಗೊಗಿ ಸೇರಿದಂತೆ ಮೂವರು ಆರೋಪಿಗಳು ಸಾವನ್ನಪ್ಪಿದ್ದು, ಗೊಗಿ ನಟೋರಿಯಸ್ ಗ್ಯಾಂಗ್ಸ್ಟರ್ ಆಗಿದ್ದ. ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನನ್ನು ಪೊಲೀಸರು ಕೋರ್ಟ್ಗೆ ಹಾಜರುಪಡಿಸುತ್ತಿದ್ದ ಸಂದರ್ಭದಲ್ಲಿ ಅವರನ್ನೇ ಗುರಿಯಾಗಿಸಿಕೊಂಡು ಇನ್ನೊಂದು ಗ್ಯಾಂಗ್ಸ್ಟರ್ ಗುಂಪು ಗುಂಡಿನ ದಾಳಿ ನಡೆಸಿತು. ಕೋರ್ಟ್ ಆವರಣದಲ್ಲೇ ಗುಂಡಿನ ದಾಳಿ ನಡೆಸಿದ್ದ ಆರೋಪಿಗಳ ಮೇಲೆ ಪೊಲೀಸರು ಪ್ರತಿದಾಳಿ ನಡೆಸಿರುವ ಪರಿಣಾಮ ವಕೀಲರ ಉಡುಪಿನಲ್ಲಿದ್ದ ಮೂವರು ದಾಳಿಕೋರರು ಸಾವನ್ನಪ್ಪಿದ್ದಾರೆಂದು ದೆಹಲಿ ಪೊಲೀಸ್ ವಿಶೇಷ ವಿಭಾಗ ತಿಳಿಸಿದೆ.
ಕಳೆದ 25 ವರ್ಷಗಳಿಂದ ಗ್ಯಾಂಗ್ಸ್ಟರ್ ಜಿತೇಂದ್ರ ಗೊಗಿ ಹಾಗೂ ಇನ್ನೊಂದು ಗುಂಪಿನ ಮಧ್ಯೆ ವೈರತ್ವವಿತ್ತು. ಮೇಲಿಂದ ಮೇಲೆ ಹಲ್ಲೆಯಂತಹ ಘಟನೆಗಳು ನಡೆಯುತ್ತಿದ್ದವು. ಇದೀಗ ಜಿತೇಂದ್ರ ಗೊಗಿಗೆ ಕೋರ್ಟ್ಗೆ ಕರೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಹಲ್ಲೆ ನಡೆಸಲಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ದೆಹಲಿ ಪೊಲೀಸರಿಂದ ಗ್ಯಾಂಗ್ಸ್ಟರ್ ಜಿತೇಂದ್ರ ಬಂಧನವಾಗಿತ್ತು.
-
#UPDATE | The assailants opened fire at gangster Jitender Mann 'Gogi' when he was brought to Delhi's Rohini court by police for a hearing. In retaliation, two attackers were killed. Gogi has been shifted to a hospital: DCP, Rohini
— ANI (@ANI) September 24, 2021 " class="align-text-top noRightClick twitterSection" data="
(Visuals from the court) pic.twitter.com/vRUuSfmSwy
">#UPDATE | The assailants opened fire at gangster Jitender Mann 'Gogi' when he was brought to Delhi's Rohini court by police for a hearing. In retaliation, two attackers were killed. Gogi has been shifted to a hospital: DCP, Rohini
— ANI (@ANI) September 24, 2021
(Visuals from the court) pic.twitter.com/vRUuSfmSwy#UPDATE | The assailants opened fire at gangster Jitender Mann 'Gogi' when he was brought to Delhi's Rohini court by police for a hearing. In retaliation, two attackers were killed. Gogi has been shifted to a hospital: DCP, Rohini
— ANI (@ANI) September 24, 2021
(Visuals from the court) pic.twitter.com/vRUuSfmSwy
ಇದನ್ನೂ ಓದಿ: RSS ಕೈಗೊಂಬೆಯಂತೆ ಸಿಎಂ, ಸರ್ಕಾರದ ತಾಳದಂತೆ ಸ್ಪೀಕರ್ ಕೆಲಸ: ಸಿದ್ದು ವಾಗ್ದಾಳಿ