ಶೋಪಿಯಾನ್(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನ ಕಥೋಹಾಲನ್ ಪ್ರದೇಶದಲ್ಲಿ ಕಳೆದ ರಾತ್ರಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ನೊಂದಿಗೆ (ಟಿಆರ್‌ಎಫ್) ಸಂಬಂಧ ಹೊಂದಿದ್ದ ಓರ್ವ ಭಯೋತ್ಪಾದಕ ಸಾವನ್ನಪ್ಪಿದ್ದಾನೆ. ಕಾಶ್ಮೀರ ವಲಯ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
-
#ShopianEncounterUpdate: One (01) #terrorist affiliated with proscribed #terror outfit TRF neutralised. Incriminating materials including arms & ammunition recovered. Search going on. Further details shall follow.@JmuKmrPolice https://t.co/Eqq0TQi2wL
— Kashmir Zone Police (@KashmirPolice) November 8, 2023 " class="align-text-top noRightClick twitterSection" data="
">#ShopianEncounterUpdate: One (01) #terrorist affiliated with proscribed #terror outfit TRF neutralised. Incriminating materials including arms & ammunition recovered. Search going on. Further details shall follow.@JmuKmrPolice https://t.co/Eqq0TQi2wL
— Kashmir Zone Police (@KashmirPolice) November 8, 2023#ShopianEncounterUpdate: One (01) #terrorist affiliated with proscribed #terror outfit TRF neutralised. Incriminating materials including arms & ammunition recovered. Search going on. Further details shall follow.@JmuKmrPolice https://t.co/Eqq0TQi2wL
— Kashmir Zone Police (@KashmirPolice) November 8, 2023
ಹತ್ಯೆಯಾದ ಭಯೋತ್ಪಾದಕನಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಸೇರಿದಂತೆ ಇನ್ನಿತರ ಭಯೋತ್ಪಾದನೆ ನಡೆಸಲು ಸಂಚು ರೂಪಿಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂಬ ಮಾಹಿತಿಯನ್ನು ಅಧಿಕಾರಿ ನೀಡಿದ್ದಾರೆ.
ಬಿಎಸ್‌ಎಫ್ ಯೋಧ ಸಾವು: ಮತ್ತೊಂದೆಡೆ, ಸಾಂಬಾ ಜಿಲ್ಲೆಯ ರಾಮಗಢ ಮತ್ತು ಅರ್ನಿಯಾ ಸೆಕ್ಟರ್ ಗಡಿಯಲ್ಲಿ ಬುಧವಾರ ರಾತ್ರಿ ಪಾಕಿಸ್ತಾನಿ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಕದನ ವಿರಾಮ ಉಲ್ಲಂಘಿಸಿದ್ದಾರೆ. ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧನಿಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದಲು ಯೋಧನಿಗೆ ರಾಮಗಢದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಸೇನಾಸ್ಪತ್ರೆಗೆ ರವಾನಿಸಲಾಗಿತ್ತು.
ಇದನ್ನೂ ಓದಿ : ಮಾವೋವಾದಿಗಳ ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನ ಪತ್ತೆ ಹಚ್ಚಿದ ಬಿಎಸ್‌ಎಫ್ ಪಡೆ
-
#WATCH | J&K: A BSF official was injured in the cross-border firing in Ramgarh. Visuals from Community Health Centre Ramgarh
— ANI (@ANI) November 9, 2023 " class="align-text-top noRightClick twitterSection" data="
As per BSF, Pakistani Rangers resorted to unprovoked firing in the Ramgarh and Arnia sectors, late last night. https://t.co/Uchnox5Dz8 pic.twitter.com/F18oKUw1iR
">#WATCH | J&K: A BSF official was injured in the cross-border firing in Ramgarh. Visuals from Community Health Centre Ramgarh
— ANI (@ANI) November 9, 2023
As per BSF, Pakistani Rangers resorted to unprovoked firing in the Ramgarh and Arnia sectors, late last night. https://t.co/Uchnox5Dz8 pic.twitter.com/F18oKUw1iR#WATCH | J&K: A BSF official was injured in the cross-border firing in Ramgarh. Visuals from Community Health Centre Ramgarh
— ANI (@ANI) November 9, 2023
As per BSF, Pakistani Rangers resorted to unprovoked firing in the Ramgarh and Arnia sectors, late last night. https://t.co/Uchnox5Dz8 pic.twitter.com/F18oKUw1iR
"ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಗಾಯಗೊಂಡಿದ್ದ ಬಿಎಸ್ಎಫ್ ಯೋಧನನ್ನು ಇಲ್ಲಿಗೆ ಕರೆತರಲಾಗಿತ್ತು. ಮಾಹಿತಿ ಬಂದ ತಕ್ಷಣ ವೈದ್ಯರ ತಂಡ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ಅವರನ್ನು ಸೇನಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ರಾಮಗಢದ ಸಮುದಾಯ" ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಶಂಶಾದ್ ತಿಳಿಸಿದರು.
"ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನಿ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ಯೋಧರು ನೀಡಿದ್ದಾರೆ" ಎಂದು ಜಮ್ಮುವಿನಲ್ಲಿ ಸೇನಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದ್ದಾರೆ.
"ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಬಿಎಸ್‌ಎಫ್ ಯೋಧರು ಮತ್ತು ಪಾಕಿಸ್ತಾನಿ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಪಾಕಿಸ್ತಾನ ಪಡೆಗಳು ದಾಳಿ ನಡೆಸಿದ್ದರಿಂದ ಸ್ಥಳೀಯರು ಭಯಭೀತರಾಗಿ ಮನೆಯಿಂದ ಹೊರಬರಲಿಲ್ಲ. ಈ ಪ್ರದೇಶದಲ್ಲಿ 4-5 ವರ್ಷಗಳ ನಂತರ ಗುಂಡಿನ ದಾಳಿ ನಡೆದಿದೆ" ಎಂದು ಸ್ಥಳೀಯರೊಬ್ಬರು ತಿಳಿಸಿದರು.
ಇದನ್ನೂ ಓದಿ: ಈಶಾನ್ಯ ಭಾರತದಲ್ಲಿ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ, ಬಂಡಾಯ ಶೇ.65 ರಷ್ಟು ತಗ್ಗಿದೆ: ಅಮಿತ್ ಶಾ