ETV Bharat / bharat

Watch: ಚಹಾ ಮಾರಾಟಗಾರನಿಗೆ ಮೊಬೈಲ್​ ಕೊಂಡ ಖುಷಿ: ಬ್ಯಾಂಡ್​ ಬಾಜಾದೊಂದಿಗೆ ಮನೆಗೆ ಆಗಮನ! - ಬ್ಯಾಂಡ್​ ಬಜಾದೊಂದಿಗೆ ಮೊಬೈಲ್​ ತಂದ ಶಿವಪುರಿ ವ್ಯಕ್ತಿ

ಐದು ವರ್ಷದ ಮಗಳಿಗೆ ನೀಡಿದ ಮಾತಿನಂತೆ ಚಹಾ ಮಾರಾಟಗಾರನೊಬ್ಬ ಹಣ ಕೂಡಿಟ್ಟು 12,500 ರೂಪಾಯಿ ಮೌಲ್ಯದ VIVO Y21 ಮೊಬೈಲ್​ ಖರೀದಿಸಿ ಊರೇ ನೋಡುವ ಹಾಗೆ ಮೊಬೈಲ್ ಖರೀದಿಸಿ ತಂದಿದ್ದಾನೆ.

shivpuri tea seller bought vivo y21 mobile
ಚಹಾ ಮಾರಾಟಗಾರನಿಗೆ ಮೊಬೈಲ್​ ಕೊಂಡ ಖುಷಿ
author img

By

Published : Dec 21, 2021, 8:02 PM IST

ಶಿವಪುರಿ (ಮಧ್ಯಪ್ರದೇಶ): ನೀವೆಲ್ಲಾ ಮದುವೆ ಸಮಾರಂಭ, ರಾಜಕೀಯ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಡ್ರಮ್ ಬಾರಿಸುವುದು, ಪಟಾಕಿ ಸಿಡಿಸುವುದನ್ನು ನೋಡಿರುತ್ತೀರಿ. ಆದರೆ, ಇಲ್ಲೊಬ್ಬ ವ್ಯಕ್ತಿಗೆ ಮೊಬೈಲ್​ ಖರೀದಿಸಿದ ಖುಷಿಗೆ ಪಾರವೇ ಇರಲಿಲ್ಲ.

ಬ್ಯಾಂಡ್​ ಬಾಜಾದೊಂದಿಗೆ ಮೊಬೈಲ್​ ತಂದ ಶಿವಪುರಿ ಚಹಾ ಮಾರಾಟಗಾರ

ಮಧ್ಯಪ್ರದೇಶದ ಶಿವಪುರಿಯಲ್ಲಿ ಮುರಾರಿ ಎಂಬ ಚಹಾ ಮಾರಾಟಗಾರನೊಬ್ಬ ಹಣ ಕೂಡಿಟ್ಟು 12,500 ರೂಪಾಯಿ ಮೌಲ್ಯದ VIVO Y21 ಮೊಬೈಲ್​ ಖರೀದಿಸಿದ್ದಾರೆ. ಮೊಬೈಲ್​ ಅಂಗಡಿಯಿಂದ ತಮ್ಮ ಮನೆಯವರೆಗೂ ಸಾರೋಟು ಮೇಲೆ ತಮ್ಮ ಮಗಳನ್ನು ಕೂರಿಸಿ, ಅವಳ ಕೈಯ್ಯಲ್ಲಿ ಮೊಬೈಲ್​ ಕೊಟ್ಟು, ಡೋಲು ಬಾರಿಸುತ್ತಾ, ಪಟಾಕಿ ಸಿಡಿಸುತ್ತಾ, ಹಾಡುತ್ತ, ಕುಣಿಯುತ್ತಾ ಬ್ಯಾಂಡ್​ ಬಾಜಾದೊಂದಿಗೆ ಬಂದಿದ್ದಾರೆ.

ಇದನ್ನೂ ಓದಿ: ಸಣ್ಣಗಿದ್ರೂ ಮಾತಾಡ್ತಾರೆ, ದಪ್ಪ ಇದ್ರೂ ಟೀಕಿಸ್ತಾರೆ.. ಬಾಡಿ ಶೇಮಿಂಗ್​ ಬಗ್ಗೆ ನಟಿ ಆಥಿಯಾ ಶೆಟ್ಟಿ ಗರಂ

ಊರೇ ನೋಡುವ ಹಾಗೆ ಮೊಬೈಲ್ ತರುವುದಾಗಿ ಮಗಳಿಗೆ ಮಾತು

ತಮ್ಮ ಐದು ವರ್ಷದ ಮಗಳು ಕಳೆದೆರಡು ವರ್ಷಗಳಿಂದ ಅಪ್ಪನಿಗೆ ಒಳ್ಳೆಯ ಮೊಬೈಲ್​ ಕೊಳ್ಳುವಂತೆ ಒತ್ತಾಯಿಸುತ್ತಿದ್ದಳಂತೆ. ಇಡೀ ಊರೇ ನೋಡುವ ಹಾಗೆ ಮೊಬೈಲ್ ತರುವುದಾಗಿ ಮುರಾರಿ ಮಾತು ಕೊಟ್ಟಿದ್ದನಂತೆ. ಅದರಂತೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾನೆ. ಇದನ್ನು ನೋಡಲು ಊರಿನ ಜನರೆಲ್ಲಾ ಸೇರಿದ್ದು ಇನ್ನೂ ವಿಶೇಷವಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.