ETV Bharat / bharat

ಮತದಾರ ಪಾಠ ಕಲಿಸಿದ್ದಾನೆ: ತೈಲ ದರ ಇಳಿಸಿದ ಬಿಜೆಪಿ ವಿರುದ್ಧ ಶಿವಸೇನೆ ಟೀಕೆ - ತೈಲ ದರ ಇಳಿಕೆಗೆ ಬಿಜೆಪಿ ವಿರುದ್ಧ ಶಿವಸೇನೆ ಟೀಕೆ

ದೀಪಾವಳಿಗೆ ತೈಲ ದರ ಇಳಿಸಿದ ಬಿಜೆಪಿ ನಿರ್ಧಾರವನ್ನ ಶಿವಸೇನೆ ಟೀಕಿಸಿದೆ. ಉಪಚುನಾವಣೆಯ ಸೋಲು ಬಿಜೆಪಿಯ ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದಿದೆ.

shiv-sena-has-taken-a-jibe-in-its-mouthpiece-saamana-on-oil-price-reduce
ಮತದಾರ ಪಾಠ ಕಲಿಸಿದ್ದಾನೆ: ತೈಲ ದರ ಇಳಿಕೆಗೆ ಬಿಜೆಪಿ ವಿರುದ್ಧ ಶಿವಸೇನೆ ಟೀಕೆ
author img

By

Published : Nov 5, 2021, 2:08 PM IST

ಮುಂಬೈ: ದೀಪಾವಳಿ ಹಬ್ಬದಂದು ಕೇಂದ್ರ ಸರ್ಕಾರ ತೈಲ ಬೆಲೆ ಇಳಿಕೆ ಮಾಡಿದ್ದು, ಜನತೆಗೆ ದೀಪಾವಳಿ ಗೀಫ್ಟ್ ಎಂದೇ ಬಣ್ಣಿಸಲಾಗುತ್ತಿದೆ. ಆದರೆ ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆಯು ಬಿಜೆಪಿ ವಿರುದ್ಧ ಹರಿಹಾಯ್ದಿದೆ.

ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬಿಜೆಪಿ ನೀತಿಯನ್ನು ಶಿವಸೇನೆ ಟೀಕಿಸಿದ್ದು, ಉಪಚುನಾವಣೆ ಆಘಾತದಿಂದ ಎಚ್ಚೆತ್ತುಕೊಂಡು ಸರ್ಕಾರ ತೈಲ ದರ ಇಳಿಸುವ ನಾಟಕವಾಡಿದರೇ ಕಡಿಮೆಯೇನಲ್ಲ ಎಂದಿದೆ.

13 ರಾಜ್ಯಗಳ ಉಪಚುನಾವಣೆಯಲ್ಲಿ ಮತದಾರರು ಬಿಜೆಪಿಯ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ಈ ಆಘಾತದಿಂದ ಬಿಜೆಪಿ ಎಚ್ಚೆತ್ತುಕೊಂಡಿದೆ. ಮುಂಬರುವ 5 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ‘ಮತ’ ಬದಲಾವಣೆಯಾಗಲಿದೆ ಎಂದಿದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಕೊನೆಗೂ ನಿರ್ಧರಿಸಿದೆ. ಇದು ಮೋದಿ ಸರ್ಕಾರದಿಂದ ಜನ ಸಾಮಾನ್ಯರಿಗೆ 'ದೀಪಾವಳಿ ಉಡುಗೊರೆ'.. ಇತ್ಯಾದಿ. ಅಂತಹ ಡೋಲು ಈಗ ಆಡಳಿತ ಪಕ್ಷದವರೇ ಬಾರಿಸುತ್ತಿದ್ದಾರೆ. 13 ರಾಜ್ಯಗಳ ಲೋಕಸಭೆ-ವಿಧಾನಸಭಾ ಉಪಚುನಾವಣೆಯಲ್ಲಿ ಮತದಾರರು ಭಾರತೀಯ ಜನತಾ ಪಕ್ಷದ ಡೋಲು ಒಡೆದಿರಬಹುದು ಎಂದು ಟೀಕಿಸಿದೆ.

ಈ ಉಪಚುನಾವಣೆಯಲ್ಲಿನ ಸೋಲು ಕೇಂದ್ರ ಸರ್ಕಾರಕ್ಕೆ ಈ ‘ಬುದ್ಧಿ’ಯನ್ನು ನೀಡಿದೆ ಎಂಬುದು ಸತ್ಯ. ದೀಪಾವಳಿಗೆ ಅಗ್ಗದ ಇಂಧನ ಉಡುಗೊರೆ ನೀಡಲು ಸರ್ಕಾರ ಬಯಸಿದರೆ, ದೀಪಾವಳಿಯ ಮೊದಲು ಈ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಿಲ್ಲ? ಉಪಚುನಾವಣೆ ಸೋಲಿನ ಏಟಿನಿಂದ ಸರ್ಕಾರ ಎಚ್ಚೆತ್ತುಕೊಂಡಿದೆ. ಮತದಾರ ಪಾಠ ಕಲಿಸಿದ್ದಾನೆ ಎಂದಿದೆ.

ಇದನ್ನೂ ಓದಿ: ಬೈಕ್​​ನಲ್ಲಿ ಪಟಾಕಿ ಸಾಗಿಸುವಾಗ ಸಿಡಿದ ಕ್ರ್ಯಾಕರ್ಸ್​.. ತಂದೆ-ಮಗ ಸಜೀವದಹನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.