ETV Bharat / bharat

ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ಜೋಧಪುರಕ್ಕೆ ಆಗಮಿಸಿದ ಸಚಿವೆ ಇರಾನಿ - ಈಟಿವಿ ಭಾರತ ಕನ್ನಡ

ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಹಿರಿಯ ಮಗಳು ಶನೆಲ್​ ಅವರ ವಿವಾಹ ಸಮಾರಂಭ ಇಂದು ಮತ್ತು ನಾಳೆ ಜೋಧ್‌ಪುರ ಬಳಿಯ ಖಿನ್ವಸರ್​ನಲ್ಲಿ ನಡೆಯಲಿದೆ. ವಿವಾಹ ಸಮಾರಂಭದಲ್ಲಿ ಭಾಗಿಯಾಗಲು ಸಚಿವೆ ಇರಾನಿ ಜೋಧಪುರಕ್ಕೆ ಆಗಮಿಸಿದ್ದಾರೆ.

Union Minister Smriti Irani
Union Minister Smriti Irani
author img

By

Published : Feb 8, 2023, 1:26 PM IST

ಜೋಧಪುರ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ಹಿರಿಯ ಮಗಳು ಶನೆಲ್ ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಬುಧವಾರ ಬೆಳಗ್ಗೆ ಜೋಧ್‌ಪುರ ತಲುಪಿದ್ದಾರೆ. ಇಲ್ಲಿಂದ ನೇರವಾಗಿ ಖಿನ್ವಸರ್ ಗೆ ಪ್ರಯಾಣ ಬೆಳೆಸಿದ್ದಾರೆ. ಮಾಜಿ ಸಚಿವ ಗಜೇಂದ್ರ ಸಿಂಗ್ ವಿಮಾನ ನಿಲ್ದಾಣಕ್ಕೆ ತೆರಳಿ ಸ್ಮೃತಿ ಇರಾನಿ ಅವರನ್ನು ಬರಮಾಡಿಕೊಂಡರು ಮತ್ತು ಅವರೊಂದಿಗೆ ಖಿನ್ವಸರ್‌ಗೆ ತೆರಳಿದರು. ಮಾಜಿ ಸಚಿವ ಗಜೇಂದ್ರ ಸಿಂಗ್ ಅವರೇ ಈ ಮದುವೆ ಸಮಾರಂಭದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಿವಾಹ ಖಿನ್ವಸರ್ ಕೋಟೆಯಲ್ಲಿ ನಡೆಯಲಿದೆ. ಈ ಕೋಟೆ 500 ವರ್ಷಗಳಷ್ಟು ಹಳೆಯದು. ಈ ಕೋಟೆಯ ಮೇಲಿಂದ ಸೂರ್ಯೋದಯ ಮತ್ತು ಸೂರ್ಯಾಸ್ತ ಎರಡೂ ದೃಶ್ಯಗಳು ಅದ್ಭುತವಾಗಿ ಕಾಣಿಸುತ್ತವೆ ಎಂದು ಹೇಳಲಾಗುತ್ತದೆ. ಮುಂದಿನ ಎರಡು ದಿನಗಳ ಕಾಲ (ಇಂದು ಮತ್ತು ನಾಳೆ) ಈ ಐತಿಹಾಸಿಕ ಕೋಟೆಯಲ್ಲಿ 50 ಕ್ಕೂ ಹೆಚ್ಚು ವಿವಿಐಪಿ ಅತಿಥಿಗಳು ಜಮಾಯಿಸಲಿದ್ದಾರೆ. ಇದರಲ್ಲಿ ಹಲವು ರಾಜಕೀಯ ವ್ಯಕ್ತಿಗಳೂ ಭಾಗಿಯಾಗಲಿದ್ದಾರೆ. ಇಂದಿನಿಂದ ಮದುವೆ ಕಾರ್ಯಕ್ರಮಗಳು ಆರಂಭವಾಗಲಿವೆ.

ಪಾರ್ಸಿ ಮತ್ತು ಪಂಜಾಬಿ ಎರಡೂ ರೀತಿಯಲ್ಲಿ ವಿವಾಹ ಸಂಪ್ರದಾಯಗಳು ನಡೆಯಲಿವೆ ಎಂದು ಹೇಳಲಾಗಿದೆ. ಶನೆಲ್ aವರ ವಿವಾಹ ಭಾರತೀಯ ಮೂಲದ ಕೆನಡಾದಲ್ಲಿ ನೆಲೆಸಿರುವ ಅರ್ಜುನ್ ಭಲ್ಲಾ ಅವರೊಂದಿಗೆ ನೆರವೇರುತ್ತಿದೆ. ವರನ ಕುಟುಂಬದವರು ಸಹ ಖಿನ್ವಸರ್​ಗೆ ಆಗಮಿಸುತ್ತಿದ್ದಾರೆ. ಶೈಲೆನ್ ಅವರ ತಂದೆ ಜುಬಿನ್ ಇರಾನಿ ಅವರು ವಿವಾಹಕ್ಕಾಗಿ ಮಂಗಳವಾರವೇ ಜೋಧ್‌ಪುರಕ್ಕೆ ಆಗಮಿಸಿದ್ದಾರೆ.

ಈ ಮದುವೆಗಾಗಿ ಖಿನ್ವಸರ್ ಕೋಟೆಯನ್ನು ವಧುವಿನಂತೆ ಅಲಂಕರಿಸಲಾಗಿದೆ. ಕೋಟೆಯ ಸಮೀಪದಲ್ಲಿರುವ ಮರಳಿನ ತೀರಗಳು ಇದರ ವಿಶೇಷ ಆಕರ್ಷಣೆಯಾಗಿದೆ. ಇದೇ ಜಾಗದಲ್ಲಿ ಅರ್ಜುನ್ ಉಂಗುರ ತೊಡಿಸಿ ಶೈಲನ್​ಗೆ ಪ್ರಪೋಸ್ ಮಾಡಿದ್ದರು. ಶೈಲೆನ್ ಸ್ಮೃತಿ ಇರಾನಿ ಅವರ ಪತಿ ಜುಬಿನ್ ಅವರ ಮೊದಲ ಪತ್ನಿ ಮೋನಾ ಅವರ ಮಗಳು. ಈಕೆ ಎಲ್​ಎಲ್​ಬಿ ಮಾಡಿದ್ದು ವೃತ್ತಿಯಲ್ಲಿ ವಕೀಲೆ. ಆಕೆಯ ಗೆಳೆಯ ಅರ್ಜುನ್ ಕೂಡ ವಕೀಲ. ಇಬ್ಬರೂ 2021 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.