ಸೊಲ್ಲಾಪುರ (ಮಹಾರಾಷ್ಟ್ರ): 16 ತಿಂಗಳ ಮಗುವಿನ ಮೇಲೆ ದೌರ್ಜನ್ಯ ಎಸಗಿದ ತಂದೆ ಮತ್ತು ತಾಯಿಗೆ ಸೊಲ್ಲಾಪುರ ಜಿಲ್ಲಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಜನವರಿ 3ರಂದು ಈ ಘಟನೆ ನಡೆದಿದ್ದು, ಮಗುವನ್ನು ಕೊಂದ ಬಳಿಕ ಪೋಷಕರು ಸಿಕಂದರಾಬಾದ್ ರಾಜ್ ಕೋಟ್ ಎಕ್ಸ್ ಪ್ರೆಸ್ ಮೂಲಕ ಪರಾರಿಯಾಗಿದ್ದರು. ಪ್ರಯಾಣದ ವೇಳೆ ಸೊಲ್ಲಾಪುರ ರೈಲ್ವೆ ಪೊಲೀಸರು ಈ ಅಪರಾಧವನ್ನು ಬಯಲಿಗೆಳೆದಿದ್ದರು.
ಧೋಲಾರಾಮ್ ಅರ್ಜುನ್ರಾಮ್ ಬಿಷ್ಣೋಯ್ (26), ಪುನಿಕುಮಾರಿ ಧೋಲಾರಾಮ್ ಬಿಷ್ಣೋಯಿ (20) ಇಬ್ಬರೂ ರಾಜಸ್ಥಾನ ಮೂಲದವರಾಗಿದ್ದಾರೆ. ಇಬ್ಬರಿಗೂ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಮಗುವನ್ನು ಬಟ್ಟೆಯ ಸಹಾಯದಿಂದ ಕತ್ತು ಹಿಸುಕಿ ಸಾಯಿಸಲಾಗಿತ್ತು. ಆರೋಪಿಗಳಾದ ಧೋಲಾರಾಮ್ ಮತ್ತು ಪುನಿಕುಮಾರಿ ಬಿಷ್ಣೋಯಿ ಕೆಲಸಕ್ಕಾಗಿ ರಾಜಸ್ಥಾನದಿಂದ ಹೈದರಾಬಾದ್‌ಗೆ ಹೋಗಿದ್ದರು. ಜನವರಿ 3 ರಂದು ಧೋಲಾರಾಮ್ ಬಿಷ್ಣೋಯ್ ತನ್ನ ಮಗುವಿಗೆ ಮದ್ಯ ನೀಡಿದ್ದಾನೆ. ಆಗ ಮಗು ಜೋರಾಗಿ ಅಳಲು ಪ್ರಾರಂಭಿಸಿದೆ. ನಿರಂತರವಾಗಿ ಮಗು ಅಳುತ್ತಿದ್ದರಿಂದ ಬಟ್ಟೆಯಿಂದ ಕತ್ತು ಹಿಸುಕಿದ್ದಾನೆ.
ಬಳಿಕ ಮೃತ ಮಗುವಿನ ದೇಹವನ್ನು ವಿಲೇವಾರಿ ಮಾಡಲು ಪತಿ ಮತ್ತು ಪತ್ನಿ ಹೈದರಾಬಾದ್‌ನಿಂದ ತಮ್ಮ ಊರಿಗೆ ಸಿಕಂದರಾಬಾದ್ ರಾಜ್‌ಕೋಟ್ ಎಕ್ಸ್‌ಪ್ರೆಸ್‌ನಲ್ಲಿ ಹೋಗುತ್ತಿದ್ದರು. ಪ್ರಯಾಣಿಕರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಧೋಲಾರಾಮ್ ಬಿಷ್ಣೋಯ್ ಮತ್ತು ಪುನಿಕುಮಾರಿ ಬಿಷ್ಣೋಯ್ 16 ವರ್ಷದ ಮಗುವಿನ ಶವವನ್ನು ಹೊತ್ತು ರೈಲಿನಲ್ಲಿ ಹೈದರಾಬಾದ್‌ನಿಂದ ಹೊರಟಿದ್ದರು.
ಆದರೆ, ಮಗು ಅಳುತ್ತಿರಲಿಲ್ಲ ಅಥವಾ ಅಲುಗಾಡುತ್ತಿರಲಿಲ್ಲ ಇದರಿಂದ ಅನುಮಾನಗೊಂಡ ಹೈದರಾಬಾದ್‌ನಿಂದ ಬಂದ ಪ್ರಯಾಣಿಕರು ತಕ್ಷಣ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ರೈಲ್ವೆ ಪೊಲೀಸರು 2022 ರ ಜನವರಿ 4 ರಂದು ರಾತ್ರಿ 9 ಗಂಟೆ ಸುಮಾರಿಗೆ ಸೊಲ್ಲಾಪುರ ರೈಲು ನಿಲ್ದಾಣದಲ್ಲಿ ಇಬ್ಬರನ್ನು ಬಂಧಿಸಿ ತನಿಖೆ ಆರಂಭಿಸಿದರು. ಮಗುವನ್ನು ಪರೀಕ್ಷೆಗೆ ಒಳಪಡಿಸಿದಾಗ 16 ತಿಂಗಳ ಮಗು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಅಂಡಾಣು ದಾನ ಮಾಡುವಂತೆ 13ರ ಬಾಲಕಿಗೆ ತಾಯಿಯ ಕಿರುಕುಳ : ಮೂವರ ಬಂಧನ
ಮರಣೋತ್ತರ ಪರೀಕ್ಷೆಯಲ್ಲಿ ಮಗು ಲೈಂಗಿಕ ಕಿರುಕುಳಕ್ಕೆ ಒಳಗಾಗಿ ಮೃತಪಟ್ಟಿದೆ ಎಂದು ವೈದ್ಯರು ವರದಿ ಮಾಡಿದ್ದರು. ವರದಿಯ ಪ್ರಕಾರ, ಧೋಲಾರಾಮ್ ಬಿಷ್ಣೋಯ್ ಮತ್ತು ಪುನಿಕುಮಾರಿ ಬಿಷ್ಣೋಯ್ ವಿರುದ್ಧ ಲೋಹ್ಮಾರ್ಗ್ ಪೊಲೀಸ್ ಠಾಣೆಯಲ್ಲಿ ಕೊಲೆ, ಲೈಂಗಿಕ ದೌರ್ಜನ್ಯ (ಅತ್ಯಾಚಾರ) ಮತ್ತು ಪೊಸ್ಕೋ ಅಡಿ ಪ್ರಕರಣದ ಆರೋಪ ಹೊರಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಸಾಂದರ್ಭಿಕ ಸಾಕ್ಷ್ಯಗಳು, ವೈದ್ಯಕೀಯ ಪುರಾವೆ ಮತ್ತು ಡಿಎನ್ಎ ವರದಿಯ ಆಧಾರದ ಮೇಲೆ ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಸಿಂಗ್ ರಜಪೂತ್ ವಾದ ಮಂಡಿಸಿದ್ದರು. ನ್ಯಾಯಾಲಯವು ಆರೋಪಿಗಳಿಬ್ಬರ ಹೇಳಿಕೆಗಳನ್ನು ದಾಖಲಿಸಿಕೊಂಡು ಅಪರಾಧಿಗಳೆಂದು ತೀರ್ಪು ನೀಡಿದೆ.
ತ್ವರಿತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಏಪ್ರಿಲ್ 26, 2022 ರಂದು ಪ್ರಾರಂಭವಾಯಿತು ಮತ್ತು ಮೇ. 6 ರಂದು ಕೊನೆಗೊಂಡಿತು. ಆರೋಪಿಗಳಾದ ಧೋಲಾರಾಮ್ ಬಿಷ್ಣೋಯ್ ಮತ್ತು ಪುನಿಕುಮಾರಿ ಬಿಷ್ಣೋಯಿ ಅವರಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಯುಎಲ್ ಜೋಶಿ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ. ಇದರಲ್ಲಿ ಸರ್ಕಾರದ ಪರವಾಗಿ ವಕೀಲ ಪ್ರದೀಪ್ ಸಿಂಗ್ ರಜಪೂತ್, ಆರೋಪಿಗಳ ಪರವಾಗಿ ವಕೀಲ ಸಂದೀಪ್ ಶಿಂಧೆ ವಾದ ಮಾಡಿದ್ದರು.