ETV Bharat / bharat

ನಿದ್ರೆಗೆ ಜಾರಿದ ಆಂಬ್ಯುಲೆನ್ಸ್​ ಚಾಲಕ: ಭೀಕರ ರಸ್ತೆ ಅಪಘಾತದಲ್ಲಿ ರೋಗಿಸಮೇತ 7 ಜನ ಸಾವು

ಉತ್ತರ ಪ್ರದೇಶದ ಬರೇಲಿಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

road accident in Uttara Pradesh, Amulance hit mini tanker in Uttara Pradesh, Uttara Pradesh accident news, Injured and died in Barielly road accident, ಉತ್ತರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ, ಉತ್ತರಪ್ರದೇಶದಲ್ಲಿ ಮಿನಿ ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್​, ಉತ್ತರಪ್ರದೇಶ ಅಪರಾಧ ಸುದ್ದಿ, ಬರೇಲಿ ರಸ್ತೆ ಅಪಘಾತದಲ್ಲಿ ಸಾವು ನೋವು,
ನಿದ್ರೆಗೆ ಜಾರಿದ ಆಂಬ್ಯುಲೆನ್ಸ್​ ಚಾಲಕ
author img

By

Published : May 31, 2022, 9:45 AM IST

ಬರೇಲಿ: ಮಂಗಳವಾರ ಬೆಳಗ್ಗೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ದೆಹಲಿಯ ಪಹರ್‌ಗಂಜ್‌ನಿಂದ ಪಿಲಿಭಿತ್‌ಗೆ ಹೋಗುತ್ತಿದ್ದ ಆಂಬ್ಯುಲೆನ್ಸ್ ಡಿವೈಡರ್ ಡಿಕ್ಕಿಯಾಗಿದ್ದಲ್ಲದೇ ಎದುರಿನಿಂದ ಬರುತ್ತಿದ್ದ ಕ್ಯಾಂಟರ್​ಗೂ (ಮಿನಿ ಟ್ರಕ್) ಡಿಕ್ಕಿ ಹೊಡೆಯಿತು. ಪರಿಣಾಮ, ರೋಗಿ ಸೇರಿ ಆಂಬ್ಯುಲೆನ್ಸ್​ನಲ್ಲಿದ್ದ 7 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಪಿಲಿಭಿತ್ ನಿವಾಸಿಗಳೆಂದು ಗುರುತಿಸಲಾಗಿದೆ. ದಾರಿಹೋಕರ ಮಾಹಿತಿ ಮೇರೆಗೆ ಫತೇಗಂಜ್ ಪಶ್ಚಿಮ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದರು. ಆದರೆ, ಅವರೆಲ್ಲರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಇದನ್ನೂ ಓದಿ: ಪಾನಿಪುರಿ ತಳ್ಳುಗಾಡಿಗೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ: ಚಾಲಕ ಪರಾರಿ

ಮೃತದೇಹಗಳನ್ನು ಗುರುತಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಭೋಜಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಾಂಪುರ ಗ್ರಾಮದ ನಿವಾಸಿ ಮೆಹದಿ ಹಸನ್ ಆಂಬ್ಯುಲೆನ್ಸ್ ಚಾಲಕ ಎಂದು ಗುರುತಿಸಲಾಗಿದೆ. ಬೆಳಗ್ಗೆ ಚಾಲಕ ಏಕಾಏಕಿ ನಿದ್ರೆಗೆ ಜಾರಿದ ಕಾರಣ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಇದರಿಂದಾಗಿ ಆಂಬ್ಯುಲೆನ್ಸ್ ಡಿವೈಡರ್ ಮೇಲೆ ಹತ್ತಿ ಕ್ಯಾಂಟರ್​ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಮೃತಪಟ್ಟವರಿಗೆ ಸಿಎಂ ಯೋಗಿ ಆದಿತ್ಯನಾಥ್‌ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ಸಂಪೂರ್ಣ ನೆರವು ಹಾಗೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.