ನವದೆಹಲಿ: ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಿದ್ಧಗೊಂಡಿರುವ ಕೊವ್ಯಾಕ್ಸಿನ್, ಕೊವಿಶೀಲ್ಡ್ ಖರೀದಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದೆ ಎಂದು ತಿಳಿದು ಬಂದಿದ್ದು, ಪ್ರತಿ ಡೋಸ್ಗೆ 200 ರೂ. ನಿಗದಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.
-
CORRECTION: The vaccine would be available at the price of Rs 200 per dose*: Serum Institute of India (SII) officials#COVID19 https://t.co/9NdDRYXrGj pic.twitter.com/E2j0Ogv045
— ANI (@ANI) January 11, 2021 " class="align-text-top noRightClick twitterSection" data="
">CORRECTION: The vaccine would be available at the price of Rs 200 per dose*: Serum Institute of India (SII) officials#COVID19 https://t.co/9NdDRYXrGj pic.twitter.com/E2j0Ogv045
— ANI (@ANI) January 11, 2021CORRECTION: The vaccine would be available at the price of Rs 200 per dose*: Serum Institute of India (SII) officials#COVID19 https://t.co/9NdDRYXrGj pic.twitter.com/E2j0Ogv045
— ANI (@ANI) January 11, 2021
ಸೆರಂ ಇನ್ಸ್ಟ್ಯೂಟ್ ಆಫ್ ಇಂಡಿಯಾದಿಂದ ತಯಾರುಗೊಂಡಿರುವ ಕೊವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ನಿಂದ ಕೊವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಗೊಂಡಿದ್ದು, ಸೆರಂನಿಂದ 1ಕೋಟಿ 1ಲಕ್ಷ ಡೋಸ್ ಖರೀದಿ ಮಾಡಲು ಕೇಂದ್ರ ಒಪ್ಪಂದ ಮಾಡಿಕೊಂಡಿದೆ ಎಂಬ ಮಾಹಿತಿ ಇದೆ.
ಇಂದು ರಾತ್ರಿ ಈ ಲಸಿಕೆಗಳು ಬೇರೆ ಬೇರೆ ರಾಜ್ಯಗಳಿಗೆ ರವಾನೆಯಾಗುವ ಸಾಧ್ಯತೆ ಇದೆ. ಕರ್ನಾಟಕಕ್ಕೂ ಪುಣೆ ಮೂಲಕ ಬೆಳಗಾವಿಗೆ ಆಗಮಿಸಲಿದೆ ಎನ್ನಲಾಗಿದೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಈ ಲಸಿಕೆ ಎಲ್ಲ ಜಿಲ್ಲೆಗಳಿಗೆ ಹಂಚಿಕೆಯಾಗಲಿದೆ. ಪ್ರತಿ ವಾರ ಕೆಲ ದಶಲಕ್ಷ ಡೋಸ್ಗಳು ರವಾನೆಯಾಗಲಿವೆ.
ಜನವರಿ 16ರಿಂದ ದೇಶಾದ್ಯಂತ ಈ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಆರಂಭದಲ್ಲಿ ಫ್ರಂಟ್ಲೈನ್ ವಾರಿಯರ್ಸ್ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಈ ಲಸಿಕೆ ನೀಡಲು ಉದ್ದೇಶಿಸಲಾಗಿದೆ.
ಕೋವಿಡ್ ಲಸಿಕೆ ಹಂಚಿಕೆ ವಿಚಾರವಾಗಿ ಇಂದು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಮಾತುಕತೆ ನಡೆಸಿದರು.