ಹೈದರಾಬಾದ್: ಭಾರತದಲ್ಲಿ ಕೋವಿಡ್ -19 ಲಸಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಕೊರೊನಾ ಪ್ರಕರಣಗಳಲ್ಲಿಯೂ ಕೂಡ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಲಭ್ಯತೆಯಲ್ಲಿ ವಿಳಂಬವಾಗುತ್ತಿದೆ ಎಂದು ಲಸಿಕೆ ತಯಾರಿಕಾ ಸಂಸ್ಥೆಗಳು ಸ್ಪಷ್ಟಪಡಿಸಿವೆ.
ಈ ಮೊದಲು ಕೆಲವು ದೇಶಗಳಿಗೆ ಅಸ್ಟ್ರಾಜೆನೆಕಾ ಉತ್ಪಾದನಾ ಸಂಸ್ಥೆಯಿಂದ ಲಸಿಕೆಯ ಡೋಸ್‌ಗಳನ್ನು ಮಾರ್ಚ್ ವೇಳೆಗೆ ಒದಗಿಸಲಾಗುವುದು ಎಂದು ತಿಳಿಸಲಾಗಿತ್ತು. ಆದ್ರೆ ಬದಲಾದ ಪರಿಸ್ಥಿತಿಯ ಕಾರಣ ಏಪ್ರಿಲ್‌ನಲ್ಲಿ ನೀಡುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ: ತಾಜ್ ಹೋಟೆಲ್ನ 82 ಸಿಬ್ಬಂದಿಗೆ ಕೊರೊನಾ ಸೋಂಕು
ವಿಶ್ವ ಆರೋಗ್ಯ ಸಂಸ್ಥೆ ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಲಸಿಕೆಯನ್ನು ಸರಿಯಾದ ರೀತಿಯಲ್ಲಿ ವಿತರಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕ್ರಿಯಾ ಯೋಜನೆಯನ್ನು ರೂಪಿಸಿದೆ.
ಜಾಗತಿಕ ಯೋಜನೆಯಾದ ಕೋವಾಕ್ಸ್, ಭಾಗೀದಾರ ದೇಶಗಳಿಗೆ 2021ರ ಮೊದಲಾರ್ಧದಲ್ಲಿ ಮೊದಲ ಡೋಸ್ ನೀಡುವ ಗುರಿ ಹೊಂದಿದೆ. ಈ ಮೂಲಕ 50ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆಯನ್ನು ವಿತರಿಸಿದೆ.