ಮುಂಬೈ: ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಹಿನ್ನೆಲೆ ಮುಂಬೈ ಷೇರುಪೇಟೆಯಲ್ಲಿ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 273.87 ಅಂಕಗಳ ಏರಿಕೆ ಕಂಡಿದೆ. ಆ ಮೂಲಕ 50,679 ರಲ್ಲಿ ವಹಿವಾಟು ನಡೆಸುತ್ತಿದ್ದು, ನಿಫ್ಟಿ ಕೂಡ 76.95 ಅಂಕಗಳ ಹೆಚ್ಚಳದೊಂದಿಗೆ ಒಟ್ಟು 15,015.05 ವಹಿವಾಟು ನಡೆಸುತ್ತಿದೆ.
ಒಎನ್‌ಜಿಸಿ, ಎನ್‌ಟಿಪಿಸಿ, ಆಕ್ಸಿಸ್ ಬ್ಯಾಂಕ್, ಎಂ ಅಂಡ್ ಎಂ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐ ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಶೇಕಡಾ 4.3 ರಷ್ಟು ಗಳಿಕೆ ಕಂಡಿವೆ.
ಈ ಮಧ್ಯೆ , ಜಾಗತಿಕ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 1.49 ರಷ್ಟು ಏರಿಕೆ ಕಂಡು 70.73 ಡಾಲರ್‌ಗೆ ತಲುಪಿದೆ.
ಕಳೆದ ವಾರದ ವಹಿವಾಟಿನ ಕೊನೆಯ ದಿನವಾದ ಶುಕ್ರವಾರ, ಸೆನ್ಸೆಕ್ಸ್ 440.76 ಅಂಕಗಳ ಅಥವಾ 0.87 ರಷ್ಟು ಕುಸಿತ ಕಂಡಿತ್ತು ಮತ್ತು ನಿಫ್ಟಿ 142.65 ಅಂಕಗಳ ನಷ್ಟ ಅನುಭವಿಸಿತ್ತು.
ವಿದೇಶಿ ಹೂಡಿಕೆದಾರರು ಶುಕ್ರವಾರ ಭಾರತೀಯ ಬಂಡವಾಳ ಮಾರುಕಟ್ಟೆಗಳಲ್ಲಿ ನಿವ್ವಳ ಆಧಾರದ ಮೇಲೆ 2,014.16 ಕೋಟಿ ರೂ.ಗಳ ಮೌಲ್ಯದ ಷೇರುಗಳನ್ನು ಆಫ್‌ಲೋಡ್ ಮಾಡಿದ್ದಾರೆ ಎಂದು ವಿನಿಮಯ ಅಂಕಿ ಅಂಶಗಳು ತಿಳಿಸಿವೆ.
ಇದನ್ನೂ ಓದಿ:‘ಪ್ರಧಾನಿ ಮೋದಿ ಹೋಷ್ ಮೇ ಆವೋ’- ರಾಜ್ಯಸಭೆಯಲ್ಲಿ ಬೆಲೆ ಏರಿಕೆ ವಿರುದ್ಧ ಕೈ ಸದಸ್ಯರ ಆಕ್ರೋಶ, ಕಲಾಪ ಮುಂದೂಡಿಕೆ