ಅಮೃತಸರ(ಪಂಜಾಬ್) : ಇಲ್ಲಿನ ಗುಜುರಿ ವ್ಯಾಪಾರಿಯೊಬ್ಬರಿಗೆ ಬ್ರಿಟಿಷರ ಕಾಲದ ಉಗಿ ಯಂತ್ರ ದೊರೆತಿದೆ. ಈ ಉಗಿ ಯಂತ್ರವು ಸುಮಾರು 120ವರ್ಷಗಳ ಹಿಂದಿನದ್ದು ಎನ್ನಲಾಗುತ್ತಿದೆ. ಈ ಯಂತ್ರವನ್ನು 1910ರಲ್ಲಿ ಇಂಗ್ಲೆಂಡ್ನಲ್ಲಿ ಮಾರ್ಷಲ್ ಆ್ಯಂಡ್ ಕಂಪನಿ ಸಿದ್ಧಪಡಿಸಿದೆ. ಗುಜುರಿ ವ್ಯಾಪಾರಿ ಎಂಜಿನ್ನ್ನು ವಸ್ತು ಸಂಗ್ರಹಾಲಯದಲ್ಲಿ ಇಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವ್ಯಾಪಾರಿ ಹೇಳುವಂತೆ, ಸ್ಟೀಮ್ ಬಾಯ್ಲರ್ ಇದಾಗಿದೆ. ಈ ರೀತಿಯ ಸ್ಟೀಮ್ ಬಾಯ್ಲರ್ಗಳಿಂದ ಹಿಂದಿನ ಕಾಲದ ರೈಲುಗಳು ಚಲಿಸುತ್ತಿದ್ದವು. ಉಗಿ ಯಂತ್ರ 120 ವರ್ಷ ಕಳೆದರೂ ಯಾವುದೇ ಸಮಸ್ಯೆ ಇಲ್ಲ. ಸಂಪೂರ್ಣವಾಗಿ ಸರಿ ಇದೆ. ಈ ಎಂಜಿನ್ಅನ್ನು ರಾಷ್ಟ್ರೀಯ ಪ್ರಾಚ್ಯ ವಸ್ತು ಸಂಗ್ರಾಹಾಲಯದಲ್ಲಿ ಇಡುವಂತಾಗಬೇಕು. ಮುಂದಿನ ಪೀಳಿಗೆಗೆ ಉಗಿ ಯಂತ್ರದ ಪರಿಚಯ ಇದರಿಂದ ಸಿಗುತ್ತದೆ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : Interesting Facts: ಭಾರತದ ರಾಷ್ಟ್ರಪತಿಗಳಿಗೆ ಇರುವ ಅಧಿಕಾರಗಳಿವು..