ETV Bharat / bharat

Chandrayaan-3: ಚಂದ್ರಯಾನ-3 ರ ಉಡಾವಣಾ ನಿಯಂತ್ರಣ ಮುನ್ನಡೆಸಲಿರುವ ಅಸ್ಸೋಂನ ವಿಜ್ಞಾನಿ - ಯುಆರ್ ರಾವ್ ಉಪಗ್ರಹ ಕೇಂದ್ರ

ಚಯನ್ ದತ್ತಾ ಅವರು ಚಂದ್ರಯಾನ 3ರ ನಿರ್ದೇಶಕರಾಗಿ ಆನ್ ಬೋರ್ಡ್ ಕಮಾಂಡ್ ಟೆಲಿಮೆಟ್ರಿ, ಡೇಟಾ ಹ್ಯಾಂಡ್ಲಿಂಗ್ ಮತ್ತು ಸ್ಟೋರೇಜ್ ಸಿಸ್ಟಮ್, ಲ್ಯಾಂಡರ್ ಅನ್ನು ಮುನ್ನಡೆಸಲಿದ್ದಾರೆ.

Scientist Chayan Dutta from Assam
ಅಸ್ಸಾಂನ ವಿಜ್ಞಾನಿ ಚಯನ್ ದತ್ತಾ
author img

By

Published : Jul 13, 2023, 5:13 PM IST

ಗುವಾಹಟಿ( ಅಸ್ಸೋಂ) : ಇಸ್ರೋದಿಂದ ಚಂದ್ರಯಾನ - 3 ಉಡಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಶುಕ್ರವಾರ ಮಧ್ಯಾಹ್ನ 2.35ಕ್ಕೆ ನಭಕ್ಕೆ ಹಾರಲಿರುವ ಮೂರನೇ ಲೂನರ್​ ಮಿಷನ್​ ಚಂದ್ರಯಾನ- 3 ಉಡಾವಣೆ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ತೇಜ್‌ಪುರ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಪದವೀಧರ ಚಯನ್ ದತ್ತಾ ಅವರು ಕೂಡ ಒಬ್ಬರು. ಈ ಮೂಲಕ ಅಸ್ಸೋಂನ ವಿಜ್ಞಾನಿಯೊಬ್ಬರು ಭಾರತ ಮತ್ತು ಪ್ರಪಂಚದ ವೈಜ್ಞಾನಿಕ ಲೋಕಕ್ಕೆ ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಲಿದ್ದಾರೆ.

ದತ್ತಾ, ಪ್ರಸ್ತುತ ಯುಆರ್ ರಾವ್ ಉಪಗ್ರಹ ಕೇಂದ್ರ, ಬಾಹ್ಯಾಕಾಶ ಇಲಾಖೆಯಲ್ಲಿ ವಿಜ್ಞಾನಿ/ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಂದ್ರಯಾನ-3 ಗಾಗಿ ಉಪ ಯೋಜನಾ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಈ ಜವಾಬ್ದಾರಿಯಲ್ಲಿ ದತ್ತಾ ಅವರು ಕಾರ್ಯಾಚರಣೆಯ ನಿರ್ಣಾಯಕ ಅಂಶಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ನಿರ್ದಿಷ್ಟವಾಗಿ ಚಂದ್ರನ ಲ್ಯಾಂಡರ್‌ನ 'ಆನ್ ಬೋರ್ಡ್ ಕಮಾಂಡ್ ಟೆಲಿಮೆಟ್ರಿ, ಡೇಟಾ ಹ್ಯಾಂಡ್ಲಿಂಗ್ ಮತ್ತು ಸ್ಟೋರೇಜ್ ಸಿಸ್ಟಮ್' ಬಗ್ಗೆ ಮೇಲ್ವಿಚಾರಣೆ ಮಾಡುತ್ತಾರೆ. ಬಾಹ್ಯಾಕಾಶ ನೌಕೆಯ ಕಾರ್ಯಗಳನ್ನು ನಿಯಂತ್ರಿಸಲು ಈ ವ್ಯವಸ್ಥೆಯು ಅತ್ಯಗತ್ಯವಾಗಿದೆ. ಇದು ಕಕ್ಷೆಯ ಕೇಂದ್ರ ನರ್ವ್​ ಸಿಸ್ಟಮ್​ ಆಗಿ ಕಾರ್ಯನಿರ್ವಹಿಸುತ್ತದೆ.

ತೇಜ್‌ಪುರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಶಂಭುನಾಥ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ಈ ಮಿಷನ್‌ನ ಮಹತ್ವವನ್ನು ತಿಳಿಸಿದರು. ಬಾಹ್ಯಾಕಾಶ ಪರಿಶೋಧನೆಗೆ ಭಾರತದ ಬದ್ಧತೆಯನ್ನು ಪ್ರದರ್ಶಿಸುವುದು ಮಾತ್ರವಲ್ಲದೇ ದೇಶದೊಳಗಿನ ಅಸಾಧಾರಣ ಪ್ರತಿಭೆ ಮತ್ತು ಪರಿಣತಿಯನ್ನು ಕೂಡ ಎತ್ತಿ ತೋರಿಸಲಿದೆ. ಅಸ್ಸೋಂನ ಲಖಿಂಪುರ ಜಿಲ್ಲೆಯಲ್ಲಿ ಜನಿಸಿದ ದತ್ತಾ ಅವರು ಚಂದ್ರಯಾನ-3 ರ ಉಡಾವಣಾ ನಿಯಂತ್ರಣ ಕಾರ್ಯಾಚರಣೆಗಳ ಮುಖ್ಯಸ್ಥರಾಗಿ ನೇಮಕಗೊಂಡಿರುವುದು ಅಸ್ಸೋಂ ಮತ್ತು ತೇಜ್‌ಪುರ ವಿಶ್ವವಿದ್ಯಾಲಯದ ಜನರಿಗೆ ಮಾತ್ರವಲ್ಲದೇ ಇಡೀ ದೇಶಕ್ಕೆ ಅಪಾರ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದ್ದಾರೆ.

ಚಂದ್ರಯಾನ-3 ರ ಪ್ರಾಥಮಿಕ ಉದ್ದೇಶ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಅನ್ನು ಸಾಧಿಸುವುದು. ಹಿಂದಿನ ಸೋವಿಯತ್ ಒಕ್ಕೂಟ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ಮಾತ್ರ ಇದುವರೆಗೆ ಸಾಧಿಸಿದ ಸವಾಲಿನ ಸಾಧನೆ ಇದಾಗಿದೆ. ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಮೂಲಕ ಗಣ್ಯ ರಾಷ್ಟ್ರಗಳ ಗುಂಪಿನಲ್ಲಿ ಭಾರತವು ಒಂದಾಗಲಿದೆ.

ಚಂದ್ರಯಾನ- 3 ಉಡಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಎಲ್ಲರ ಕಣ್ಣುಗಳು ಚಯಾನ್ ದತ್ತಾ ಮತ್ತು ಅವರ ತಂಡದ ಮೇಲಿದೆ. ಚಂದ್ರಯಾನ-3 ರ ಉಡಾವಣೆಯು ಚಂದ್ರನ ಬಗ್ಗೆ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅದರ ಜೊತೆ ಜೊತೆಗೆ ಭಾರತದ ವೈಜ್ಞಾನಿಕ ಪ್ರಗತಿ ಮತ್ತು ಮಹತ್ವಾಕಾಂಕ್ಷೆಯ ಸಂಕೇತವೂ ಹೌದು. ಗಡಿಗಳನ್ನು ದಾಟಿ ಅಜ್ಞಾತವನ್ನು ಅನ್ವೇಷಿಸಲು ಮತ್ತು ನಮ್ಮ ದೇಶದ ಅಂಗಳದಲ್ಲಿ ಬೆಳೆದ ಪ್ರತಿಭೆಗಳನ್ನು ಪೋಷಿಸಲು, ಇದು ರಾಷ್ಟ್ರದ ಸಮರ್ಪಣೆಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: India Moon Mission: ಚಂದ್ರಯಾನ 3 ಉಡಾವಣೆ ಕ್ಷಣಗಣನೆ ಆರಂಭ.. ನಭಕ್ಕೆ ಜಿಗಿಯಲು ಸಜ್ಜಾದ ಉಪಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.