ETV Bharat / bharat

ಜಮ್ಮು ಕಾಶ್ಮೀರದಲ್ಲಿ ಶಾಲಾ ದಾಖಲಾತಿ ದರ 2 ವರ್ಷದಲ್ಲಿ ಶೇ.14.5 ರಷ್ಟು ಹೆಚ್ಚಳ

ಜಮ್ಮು ಕಾಶ್ಮೀರದಲ್ಲಿ ಶಿಕ್ಷಣ ಕ್ಷೇತ್ರ ಸುಧಾರಣೆ ಕಾಣುತ್ತಿದೆ. ಕಳೆದ ಎರಡು ವರ್ಷದಲ್ಲಿ ಸರ್ಕಾರಗಳ ಕ್ರಮದಿಂದಾಗಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚುತ್ತಿದೆ.

author img

By

Published : Aug 21, 2022, 10:15 AM IST

jammu-kashmir
ಜಮ್ಮು ಕಾಶ್ಮೀರದಲ್ಲಿ ಶಾಲಾ ದಾಖಲಾತಿ ದರ

ಶ್ರೀನಗರ: ಬರೀ ಬಾಂಬ್​ಗಳ ಸದ್ದು, ಭಯೋತ್ಪಾದನೆ, ರಕ್ತಚರಿತ್ರೆಯಿಂದಲೇ ಸುದ್ದಿಯಾಗುತ್ತಿದ್ದ ಜಮ್ಮು- ಕಾಶ್ಮೀರ ನಿಧಾನವಾಗಿ ತನ್ನ ಮಗ್ಗಲು ಬದಲಿಸುತ್ತಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಕಳೆದ 2 ವರ್ಷಗಳಲ್ಲಿ ಇದರ ಪ್ರಮಾಣ ಶೇ.14.5 ರಷ್ಟು ಜಾಸ್ತಿಯಾಗಿದೆ.

ಈ ಬಗ್ಗೆ ಲೆಫ್ಟಿನೆಂಟ್​ ಗವರ್ನರ್​ ಮನೋಜ್​ ಸಿನ್ಹಾ ಮಾಹಿತಿ ನೀಡಿದ್ದಾರೆ. "2019 ರ ಬಳಿಕ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸ್ಸಿನಂತೆ ಮಕ್ಕಳ ಆರೈಕೆ ಮತ್ತು ಶಿಕ್ಷಣಕ್ಕಾಗಿ ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದರಿಂದ ಎರಡು ವರ್ಷಗಳಲ್ಲಿ ಶಾಲೆ ಸೇರುವ ಮಕ್ಕಳ ಸಂಖ್ಯೆ 14.5 ರಷ್ಟು ಹೆಚ್ಚಿದೆ" ಎಂದು ತಿಳಿಸಿದರು.

ಅನುದಾನ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಕೇಂದ್ರ ಸರ್ಕಾರ ನೀಡಿದ ಆದ್ಯತೆಯಿಂದಾಗಿ ಪರಿಸ್ಥಿತಿ ಸುಧಾರಿಸಿದೆ. ಶಾಲೆಯಿಂದ ವಿಮುಖವಾಗುವ ಮಕ್ಕಳನ್ನು ಮತ್ತೆ ಕರೆತರಲು ಬನ್ನಿ ಶಾಲೆಗೆ ಹೋಗೋಣ ಅಭಿಯಾನ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಇದರಡಿ 1 ವರ್ಷದಲ್ಲಿ 1.65 ಲಕ್ಷ ಮಕ್ಕಳನ್ನು ಶಾಲೆಗೆ ದಾಖಲಿಸಲಾಗಿದೆ. ಇದಲ್ಲದೇ ತಲಾಶ್​ ಆ್ಯಪ್​ ಮೂಲಕವೂ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸಿಕೊಳ್ಳಲಾಗುತ್ತಿದೆ.

ತಲಾಶ್​ ಆ್ಯಪ್​ ಮೂಲಕ ​ಇಲ್ಲಿಯವರೆಗೆ 86 ಸಾವಿರ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ದಾಖಲಿಸಿಕೊಳ್ಳಲಾಗಿದೆ. ಹಲವು ಆಕ್ಷೇಪಗಳ ನಡುವೆಯೂ 1.24 ಲಕ್ಷ ಮಕ್ಕಳು ಶಿಶುಪಾಲನಾ ಶಿಕ್ಷಣ ಕೇಂದ್ರಕ್ಕೆ ದಾಖಲಾಗಿದೆ. ಈ ವರ್ಷ 2 ಸಾವಿರ ಶಿಶುವಿಹಾರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ವರ್ಷ ಸರ್ಕಾರಿಂದಲೇ ಇಲ್ಲಿನ 14 ಸಾವಿರ ಯುವತಿಯರಿಗೆ ನೀಟ್ ತರಬೇತಿ ನೀಡಲು ನಿರ್ಧರಿಸಲಾಗಿದೆ. ಅದರ ವೆಚ್ಚವನ್ನು ಆಡಳಿತವೇ ಭರಿಸಲಿದೆ ಎಂದು ಸಿನ್ಹಾ ಮಾಹಿತಿ ನೀಡಿದರು.

ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ: ಸಚಿವ ಸಿಸೋಡಿಯಾ ಸೇರಿ 13 ಮಂದಿಗೆ ಸಿಬಿಐ ಲುಕ್ ಔಟ್ ನೋಟಿಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.