ನವದೆಹಲಿ: ಒಂದು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಎಂದು ಘೋಷಿಸಿಕೊಂಡ ವ್ಯಕ್ತಿ ಮತ್ತೊಂದು ರಾಜ್ಯಕ್ಕೆ ವಲಸೆ ಹೋದ ನಂತರ ಶಿಕ್ಷಣ, ಭೂಮಿ ಮಂಜೂರು ಅಥವಾ ಉದ್ಯೋಗದ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿತ್ತಿದೆ.
ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಎ.ಎಸ್.ಬೋಪಣ್ಣ ಅವರಿದ್ದ ಪೀಠ ಈ ತೀರ್ಪು ನೀಡಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯು ತನ್ನ ಮೂಲ ರಾಜ್ಯಕ್ಕೆ ಸಂಬಂಧಿಸಿದಂತೆ ಖಾಯಂ ಅಥವಾ ಸಾಮಾನ್ಯ ನಿವಾಸಿಯಾಗಿದ್ದು, ಯಾವುದೇ ಉದ್ದೇಶಕ್ಕಾಗಿ ಆ ರಾಜ್ಯದಿಂದ ಬೇರೆ ರಾಜ್ಯಕ್ಕೆ ವಲಸೆ ಹೋದ ಮೇಲೆ ಮೂಲ ರಾಜ್ಯದಲ್ಲಿ ನೀಡಲಾಗುವ ಸೌಲಭ್ಯ ನೀಡಲಾಗುವುದಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ: 'ಇನ್ನೂ ಮಕ್ಕಳಾಗಿಲ್ವೇ...?' ನೆರೆಹೊರೆಯವರ ಮಾತಿನಿಂದ ನೊಂದ ಮಹಿಳೆ ಮಾಡಿದ್ದೇನು ಗೊತ್ತಾ?
ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಜಾತಿ ಪ್ರಮಾಣಪತ್ರ ನೀಡುವ ಕ್ರಿಯಾ ಸಮಿತಿ (1994)ರಂತೆ ಸುಪ್ರೀಂಕೋರ್ಟ್‌ನ ತೀರ್ಪು ಪ್ರಸ್ತುತ ಪ್ರಕರಣದಲ್ಲಿ ಪೂರ್ಣ ಬಲದೊಂದಿಗೆ ಅನ್ವಯಿಸುತ್ತದೆ ಎಂದು ಅದು ಹೇಳಿದೆ.
ಪ್ರಕರಣದ ವಿವರ:
ಮೂಲ ಪ್ರತಿವಾದಿಯು ಪಂಜಾಬ್‌ಗೆ ಸೇರಿದ ಎಸ್‌ಸಿ ಸಮುದಾಯದವನಾಗಿದ್ದು, ರಾಜ್ಯದ ಸಾಮಾನ್ಯ ಮತ್ತು ಖಾಯಂ ನಿವಾಸಿಯಾಗಿದ್ದಾನೆ. ಎಸ್‌ಸಿ ವ್ಯಕ್ತಿಗೆ ಸೇರಿದ ಭೂಮಿಯನ್ನು ಖರೀದಿಸುವ ಉದ್ದೇಶಕ್ಕಾಗಿ ರಾಜಸ್ಥಾನದ ಎಸ್‌ಸಿಯ ಸಮುದಾಯಕ್ಕೆ ನೀಡಿದ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಗಮನಿಸಿದೆ. ಆದ್ದರಿಂದ, ಮೂಲ ಪ್ರತಿವಾದಿಯ ಮಾರಾಟ ವ್ಯವಹಾರವು ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗೆಯೇ ರಾಜಸ್ಥಾನ ಟೆನೆನ್ಸಿ ಆಕ್ಟ್, 1955 ರ ಸೆಕ್ಷನ್ 42 ರ ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ಏಪ್ರಿಲ್ 7, 2011ರ ರಾಜಸ್ಥಾನ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವನ್ನು ಪ್ರಶ್ನಿಸಿ ಭದರ್ ರಾಮ್ ಅವರು ತಮ್ಮ ಕಾನೂನು ಪ್ರತಿನಿಧಿಯ ಮೂಲಕ ಸಲ್ಲಿಸಿದ ಮೇಲ್ಮನವಿಯನ್ನು ಈ ಮೂಲಕ ವಜಾಗೊಳಿಸಲಾಗಿದೆ.