ETV Bharat / bharat

ಶಿಕ್ಷಕರ ನೇಮಕಾತಿ ಹಗರಣ: ಹೊಸದಾಗಿ ನೇಮಕಕ್ಕೆ ಸೂಚಿಸಿದ್ದ ಕೋಲ್ಕತ್ತಾ ಹೈಕೋರ್ಟ್​ ಆದೇಶ ರದ್ದು ಮಾಡಿದ ಸುಪ್ರೀಂ - ಶಿಕ್ಷಕರ ನೇಮಕಾತಿ ಹಗರಣ

ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಹಗರಣ ಕುರಿತು ಕೋಲ್ಕತ್ತಾ ಹೈಕೋರ್ಟ್​ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್​ ರದ್ದು ಮಾಡಿದೆ. ಹೊಸ ಆದೇಶ ನೀಡಲೂ ಸೂಚಿಸಿದೆ.

ಶಿಕ್ಷಕರ ನೇಮಕಾತಿ ಹಗರಣ
ಶಿಕ್ಷಕರ ನೇಮಕಾತಿ ಹಗರಣ
author img

By

Published : Jul 7, 2023, 6:16 PM IST

ನವದೆಹಲಿ: ಪಶ್ಚಿಮಬಂಗಾಳದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಇಂದು ನಡೆದ ವಿಚಾರಣೆಯಲ್ಲಿ ಕೋಲ್ಕತ್ತಾ ಹೈಕೋರ್ಟ್​ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್​ ರದ್ದು ಮಾಡಿದೆ. ಅಲ್ಲದೇ, ಹೊಸ ನಿರ್ಧಾರವನ್ನು ಶೀಘ್ರವೇ ಕೈಗೊಳ್ಳುವಂತೆ ಸೂಚಿಸಿದೆ.

32,000 ಶಿಕ್ಷಕರ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಅದನ್ನು ರದ್ದುಪಡಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಮನವಿ ಸ್ವೀಕರಿಸಿದ್ದ ಕೋಲ್ಕತ್ತಾ ಹೈಕೋರ್ಟ್​, ಅಷ್ಟೂ ಹುದ್ದೆಗಳಿಗೆ ಹೊಸದಾಗಿ ಆಯ್ಕೆ ನಡೆಸುವಂತೆ ಮಧ್ಯಂತರ ಆದೇಶ ನೀಡಿ, ಪ್ರಾಥಮಿಕ ಶಿಕ್ಷಣ ಮಂಡಳಿಗೆ ಸೂಚಿಸಿತ್ತು. ಇದನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದು ಮಾಡಿದೆ.

ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಕೆ.ವಿ ವಿಶ್ವನಾಥನ್​ ಅವರನ್ನೊಳಗೊಂಡ ಪೀಠವು ಈ ನಿರ್ದೇಶನ ನೀಡಿದೆ. ಎಲ್ಲ ಹುದ್ದೆಗಳಿಗೆ ಹೊಸದಾಗಿ ಆಯ್ಕೆ ಪ್ರಕ್ರಯೆ ನಡೆಸಲು ನಿರ್ದೇಶಿಸುವ ಕೋಲ್ಕತ್ತಾ ನ್ಯಾಯಾಲಯದ ಮಧ್ಯಂತರ ಆದೇಶವನ್ನು ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾ. ವಿಶ್ವನಾಥನ್ ತೀರ್ಪು ಓದಿದರು. ಶಾಲಾ ಉದ್ಯೋಗಗಳಿಗೆ ಸಂಬಂಧಿಸಿದಂತೆ ಅರ್ಜಿಯ ಕುರಿತು ಕೋಲ್ಕತ್ತಾ ಹೈಕೋರ್ಟ್‌ಗೆ ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ಇದೇ ವೇಳೆ ಸೂಚಿಸಿತು.

ಆದೇಶದ ವಿರುದ್ಧ ಮೇಲ್ಮನವಿ: ಕೋಲ್ಕತ್ತಾ ಹೈಕೋರ್ಟ್​ ನೀಡಿದ ಮಧ್ಯಂತರ ಆದೇಶದ ವಿರುದ್ಧ ಪಶ್ಚಿಮಬಂಗಾಳ ಪ್ರಾಥಮಿಕ ಶಿಕ್ಷಣ ಮಂಡಳಿ ಮೇಲ್ಮನವಿ ಸಲ್ಲಿಸಿತ್ತು. 32,000 ಶಿಕ್ಷಕರ ಆಯ್ಕೆಗೆ ಸಂಬಂಧಿಸಿದಂತೆ ಹೊಸ ಆಯ್ಕೆ ಪ್ರಕ್ರಿಯೆ, ಸಂದರ್ಶನ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್​ ಮುಂದೆ ವಾದ ಮಂಡಿಸಿತು. ಅರ್ಜಿದಾರರ ಮನವಿಯನ್ನು ಆಲಿಸದೇ ಕೋಲ್ಕತ್ತಾ ಹೈಕೋರ್ಟ್‌ನ ಏಕ ಸದಸ್ಯ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿದೆ. ಇಡೀ ಪ್ರಕ್ರಿಯೆಯು ದುಬಾರಿಯಾಗಿದೆ ಎಂದು ವಾದಿಸಿತು. ಶಿಕ್ಷಣ ಮಂಡಳಿಯ ಈ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ನಟ, ನಟಿಯ ವಿಚಾರಣೆ: ಇನ್ನು, ಶಿಕ್ಷಕರ ನೇಮಕಾತಿ ಹಗರಣದ ಪ್ರಮುಖ ಆರೋಪಿ, ಟಿಎಂಸಿ ಉಚ್ಚಾಟಿತ ಯುವ ನಾಯಕ ಕುಂತಲ್ ಘೋಷ್ ಅವರಿಂದ ಐಷಾರಾಮಿ ಕಾರು ಪಡೆದ ಆರೋಪ ಎದುರಿಸುತ್ತಿರುವ ನಟ ಬೋನಿ ಸೆಂಗುಪ್ತಾ ಅವರ ಬಳಿಕ ಮತ್ತೊಬ್ಬ ನಟಿ ಕೂಡ ಕಾರು ಗಿಫ್ಟ್​ ಪಡೆದುಕೊಂಡಿರುವ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ) ನಟಿ, ಟಿಎಂಸಿ ನಾಯಕಿಯಾಗಿರುವ ಸಯೋನಿ ಘೋಷ್​ ಅವರನ್ನು 11 ಗಂಟೆಗಳ ಸುದೀರ್ಘ ವಿಚಾರಣೆ ನಡೆಸಿತ್ತು.

ನಟ ಬೋನಿ ಸೆಂಗುಪ್ತಾ ಎಕ್ಸ್​ಯುವಿ ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂದು ಈ ಮೊದಲು ಸುದ್ದಿಯಾಗಿತ್ತು. ಈ ಕುರಿತು ನಟ ವಿಚಾರಣೆಗೆ ಒಳಪಟ್ಟಿದ್ದರು. ಇದೀಗ ಆರೋಪಿ ಕುಂತಲ್ ಟಾಲಿವುಡ್ ನಟಿ ಸಯೋನಿ ಘೋಷ್‌ ಅವರಿಗೂ ಎಕ್ಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಹಗರಣ: ಅಭಿಷೇಕ್ ಬ್ಯಾನರ್ಜಿಗೆ 25 ಲಕ್ಷ ರೂ. ದಂಡ ವಿಧಿಸಿದ್ದ ಕೋಲ್ಕತ್ತಾ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.