ETV Bharat / bharat

ವಿಶ್ಲೇಷಣೆ; ಮೀಸಲಾತಿ ಕಾಯ್ದೆಗಳ ಪುನರ್​ ಪರಿಶೀಲನೆಗೆ ಮುಂದಾದ ಸುಪ್ರೀಂ ಕೋರ್ಟ್​ - 102ನೇ ಸಂವಿಧಾನ ತಿದ್ದುಪಡಿ

ಆರ್ಟಿಕಲ್ 338 (ಬಿ) (9) ಪ್ರಕಾರ, ಯಾವುದೇ ನೀತಿ ನಿಯಮಾವಳಿ ರೂಪಿಸುವಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ರಾಷ್ಟ್ರೀಯ ಹಿಂದುಳಿದವರ ಆಯೋಗವನ್ನು ಸಂಪರ್ಕಿಸುವುದು ಕಡ್ಡಾಯ. ಇನ್ನು ಆರ್ಟಿಕಲ್ 342 ಎ ಪ್ರಕಾರ, ರಾಜ್ಯಪಾಲರೊಂದಿಗೆ ಚರ್ಚಿಸಿ ಭಾರತದ ರಾಷ್ಟ್ರಪತಿಗಳು ಯಾವುದೇ ನಿರ್ದಿಷ್ಟ ಸಮುದಾಯವನ್ನು ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದವರೆಂದು ಘೋಷಿಸಬಹುದು.

SC set to review the entire gamut of quota laws
ವಿಶ್ಲೇಷಣೆ; ಮೀಸಲಾತಿ ಕಾಯ್ದೆಗಳ ಪುನರ್​ ಪರಿಶೀಲನೆಗೆ ಮುಂದಾದ ಸುಪ್ರೀಂ ಕೋರ್ಟ್​
author img

By

Published : Mar 11, 2021, 2:11 PM IST

ಹೈದರಾಬಾದ್: ಸರ್ಕಾರಿ ನೌಕರಿ ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರವೇಶದಲ್ಲಿನ ಮೀಸಲಾತಿ ನಿಯಮಗಳ ಕುರಿತಾದ ಪ್ರಮುಖ ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್​ ಪುನರ್​ ಪರಿಶೀಲಿಸಲು ಮುಂದಾಗಿದೆ. ಕಳೆದ ವಾರ ಸುಪ್ರೀಂ ಕೋರ್ಟ್​ ಕೈಗೊಂಡ ಈ ನಿರ್ಧಾರದಿಂದ ಮೀಸಲಾತಿಯ ಕುರಿತು ಬಹು ದೂರಗಾಮಿ ಪರಿಣಾಮಗಳುಂಟಾಗುವ ಸಾಧ್ಯತೆಗಳಿವೆ. ಕಳೆದ ಮೂರು ದಶಕಗಳಿಂದ ದೇಶದಲ್ಲಿ ಜಾರಿಯಲ್ಲಿರುವ ಮೀಸಲಾತಿ ಕಾಯ್ದೆಗಳು ಬದಲಾಗಬಹುದು.

ಯಾವುದೇ ರಾಜ್ಯದಲ್ಲಿ ಒಟ್ಟಾರೆ ಮೀಸಲಾತಿ ಶೇ 50ರಷ್ಟು ಮೀರಕೂಡದು ಎಂದು ಸುಪ್ರೀಂ ಕೋರ್ಟ್​ ಮೂರು ದಶಕಗಳ ಹಿಂದೆ ಆದೇಶ ನೀಡಿತ್ತು. ಪ್ರಮುಖವಾಗಿ ತನ್ನ ಈ ಹಳೆಯ ಆದೇಶವನ್ನೇ ಸುಪ್ರೀಂ ಕೋರ್ಟ್​ ಮರುಪರಿಶೀಲಿಸಲು ಮುಂದಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ಮಾಡಿದ 102ನೇ ತಿದ್ದುಪಡಿಯಿಂದ, ಹಿಂದುಳಿದ ವರ್ಗದವರನ್ನು ಗುರುತಿಸುವ ರಾಜ್ಯಗಳ ಅಧಿಕಾರಕ್ಕೆ ಧಕ್ಕೆ ಬರುತ್ತಿದೆಯಾ ಎಂಬುದನ್ನು ಸಹ ಸುಪ್ರೀಂ ಕೋರ್ಟ್​ ಪರಿಶೀಲನೆ ಮಾಡಲಿದೆ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ತನ್ನ ರಾಜ್ಯದಲ್ಲಿ ಜಾರಿಗೊಳಿಸಿದ ಮರಾಠಾ ಮೀಸಲಾತಿಯು ಸಂವಿಧಾನ ಬದ್ಧವಾಗಿದೆಯೇ ಎಂಬುದರ ಕುರಿತು ಸುಪ್ರೀಂ ಕೋರ್ಟ್​ ಸ್ಪಷ್ಟ ನಿಲುವು ತಳೆಯಲಿದೆ.

ಮೇಲೆ ಪ್ರಸ್ತಾಪಿಸಲಾದ ಅಂಶಗಳನ್ನು ಹೊರತುಪಡಿಸಿ, 5 ಜನ ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್​ ಪೀಠ 103ನೇ ಸಂವಿಧಾನ ತಿದ್ದುಪಡಿಯ ಕುರಿತಾಗಿ ವಿಚಾರಣೆ ನಡೆಸಲಿದೆ. ಸಂವಿಧಾನದ 103ನೇ ತಿದ್ದುಪಡಿಯು, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ನೌಕರಿ ಹಾಗೂ ಶಿಕ್ಷಣದಲ್ಲಿ ಈಗಿರುವ ಮೀಸಲಾತಿ ಮೇಲೆ ಮತ್ತೆ ಶೇ 10 ರಷ್ಟು ಮೀಸಲಾತಿ ನೀಡುವ ಅಧಿಕಾರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೀಡುತ್ತದೆ. ಹೀಗೆ ಮೊದಲೇ ಇರುವ ಮೀಸಲಾತಿಯ ಮೇಲೆ ಇನ್ನೂ ಶೇ 10 ರಷ್ಟು ಮೀಸಲಾತಿ ನೀಡುವುದರಿಂದ ಇದು ಒಟ್ಟಾರೇ ಶೇ 50 ರಷ್ಟು ಮೀಸಲಾತಿ ಪ್ರಮಾಣವನ್ನು ಮೀರುವುದರಿಂದ ಇದರ ಬಗ್ಗೆಯೂ ಸುಪ್ರೀಂ ಕೋರ್ಟ್​ನ ಪ್ರತ್ಯೇಕ ಪೀಠವು ಪರಾಮರ್ಶೆ ನಡೆಸಲಿದೆ.

ಮೀಸಲಾತಿ ಪುನರ್​ ಪರಿಶೀಲನೆಗೆ ಕಾರಣವಾದ ಅಂಶಗಳು

ಮಹಾರಾಷ್ಟ್ರದಲ್ಲಿ ರಾಜಕೀಯವಾಗಿ ಪ್ರಭಾವಿಯಾಗಿರುವ ಮರಾಠಾ ಜನಾಂಗದವರಿಗೆ ನೌಕರಿ ಹಾಗೂ ಶಿಕ್ಷಣದಲ್ಲಿ ಶೇ 16 ರಷ್ಟು ಮೀಸಲಾತಿ ನೀಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಕೆಲ ವ್ಯಕ್ತಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್​, ರಾಜ್ಯ ಸರ್ಕಾರದ ಕಾನೂನನ್ನು ಮಾನ್ಯ ಮಾಡಿತ್ತಾದರೂ, ನೌಕರಿಯಲ್ಲಿನ ಮೀಸಲಾತಿಯನ್ನು ಶೇ 13ಕ್ಕೆ ಹಾಗೂ ಶಿಕ್ಷಣದಲ್ಲಿನ ಮೀಸಲಾತಿಯನ್ನು ಶೇ 12ಕ್ಕೆ ಇಳಿಸಿತ್ತು.

ಮಹಾರಾಷ್ಟ್ರ ರಾಜ್ಯ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರ ಮೀಸಲಾತಿ ಕಾಯ್ದೆ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸೀಟುಗಳ ಮೀಸಲಾತಿ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿನ ನೇಮಕಾತಿಯಲ್ಲಿನ ಮೀಸಲಾತಿ) 2018 ನ್ನು ಮಹಾರಾಷ್ಟ್ರ ಸರ್ಕಾರವು ನವೆಂಬರ್ 2018 ರಲ್ಲಿ ಜಾರಿಗೊಳಿಸಿತ್ತು.

ಇದನ್ನೂ ಓದಿ: ಶೇ 50 ಮೀಸಲಾತಿ ತೀರ್ಪು ಮರುಪರಿಶೀಲಿಸಲು ಸುಪ್ರೀಂ ಸಮ್ಮತಿ: ರಾಜ್ಯ ಸರ್ಕಾರಗಳಿಗೆ ನೋಟಿಸ್

ಮರಾಠಾ ಮೀಸಲಾತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೊರೆ

ಬಾಂಬೆ ಹೈಕೋರ್ಟಿನ ಆದೇಶದಿಂದ ಅಸಂತುಷ್ಟರಾಗಿದ್ದ ಕೆಲವರು ಜುಲೈ 2019 ರಲ್ಲಿ ಸುಪ್ರೀಂ ಕೋರ್ಟ್​ ಕದ ತಟ್ಟಿದ್ದರು. ಮರಾಠಾ ಮೀಸಲಾತಿ ಕಾಯ್ದೆಯು ಕೇವಲ ಒಂದು ಸಮುದಾಯಕ್ಕಾಗಿ ರೂಪಿಸಲಾದ ಕಾಯ್ದೆಯಾಗಿದ್ದು, ಇದರಿಂದ ಎಲ್ಲರಿಗೂ ಸಮಾನತೆಯನ್ನು ನೀಡುವ ಸಂವಿಧಾನದ ಆಶಯಕ್ಕೆ ಭಂಗ ಬಂದಿದೆ ಎಂದು ದೂರುದಾರರು ವಾದಿಸಿದ್ದರು.

ಸೆಪ್ಟೆಂಬರ್​ 2020ರಲ್ಲಿ ಮರಾಠಾ ಮೀಸಲಾತಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಲ್​. ನಾಗೇಶ್ವರ ರಾವ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಪೀಠ, ಕಾಯ್ದೆ ಜಾರಿಗೆ ತಡೆ ನೀಡಿತ್ತು.

ಸುಪ್ರೀಂ ಕೋರ್ಟ್​ ಮುಂದೆ ಪರಿಗಣನೆಗೆ ಬಂದ ವಿಷಯಗಳು

ಮರಾಠಾ ಮೀಸಲಾತಿ ಕಾಯ್ದೆಗೆ ತಡೆ ನೀಡಿದ ಸುಪ್ರೀಂ ಕೋರ್ಟ್​ ಆದೇಶವನ್ನು ತಿಳಿದುಕೊಳ್ಳಲು ಇಂದ್ರ ಸಾಹ್ನಿ ವರ್ಸಸ್ ಭಾರತ ಸರ್ಕಾರ ಪ್ರಕರಣದ ಬಗ್ಗೆ ಅರಿತುಕೊಳ್ಳುವುದು ಅಗತ್ಯ.

1992ರಲ್ಲಿ ಇಂದ್ರ ಸಾಹ್ನಿ ವರ್ಸಸ್ ಕೇಂದ್ರ ಸರ್ಕಾರ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​ ಪೀಠ ಐತಿಹಾಸಿಕ ಆದೇಶ ನೀಡಿತ್ತು. ಸರ್ಕಾರಿ ನೌಕರಿ ಮತ್ತು ಶೈಕ್ಷಣಿಕ ಸಂಸ್ಥೆಗಳ ಪ್ರವೇಶಾತಿಯಲ್ಲಿ ಗರಿಷ್ಠ ಶೇ 50 ರಷ್ಟು ಮೀಸಲಾತಿಯನ್ನು ನಿಗದಿಗೊಳಿಸಿ 9 ಜನರ ಸಾಂವಿಧಾನಿಕ ಪೀಠ ಈ ಪ್ರಕರಣದಲ್ಲಿ ಆದೇಶ ನೀಡಿತ್ತು. ಆದರೆ ಕೆಲ ವಿಶಿಷ್ಟ ಪರಿಸ್ಥಿತಿಗಳಲ್ಲಿ ಅಂದರೆ, ದೇಶದ ಮುಖ್ಯವಾಹಿನಿಯೊಂದಿಗೆ ಬೆರೆಯದೆ ಸಮಾಜದಿಂದ ದೂರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮೀಸಲಾತಿ ನೀಡಲು ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ ಎಂದು ಪೀಠ ತಿಳಿಸಿತ್ತು.

ಇಂದ್ರ ಸಾಹ್ನಿ ಪ್ರಕರಣ ವಿಚಾರಣೆಯ ತೀರ್ಪಿನಲ್ಲಿ ತಿಳಿಸಿದಂತೆ ಮರಾಠಾ ಸಮಾಜದವರು ಮುಖ್ಯವಾಹಿನಿಯಿಂದ ದೂರ ವಾಸಿಸುತ್ತಿಲ್ಲ. ಹೀಗಾಗಿ ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಿದ್ದು ಕಾನೂನು ಬದ್ಧವಲ್ಲ ಎಂದು ಸುಪ್ರೀಂ ಕೋರ್ಟ್​ 2020ರ ಸೆಪ್ಟೆಂಬರ್​ನಲ್ಲಿ ಆದೇಶ ನೀಡಿತ್ತು.

ಇದನ್ನೂ ಓದಿ: ಮೀಸಲಾತಿ ಬೇಡಿಕೆಗಳ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚನೆ: ಸಿಎಂ ಟ್ವೀಟ್

102ನೇ ಸಂವಿಧಾನ ತಿದ್ದುಪಡಿಯ ಮಾನ್ಯತೆ

2018 ಹಾಗೂ 2019 ರಲ್ಲಿ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ಮಾಡಿದ ಎರಡು ತಿದ್ದುಪಡಿಗಳ ವಿಷಯದ ವಿಚಾರಣೆಯು ಸುಪ್ರೀಂ ಕೋರ್ಟ್​ ಮುಂದಿದೆ.

ಮೊದಲನೆಯದಾಗಿ, ಸಂವಿಧಾನಕ್ಕೆ ಮಾಡಲಾದ 102ನೇ ತಿದ್ದುಪಡಿ. ಇದು ಆಗಸ್ಟ್​ 2018 ರಿಂದ ಜಾರಿಗೆ ಬಂದಿತ್ತು. ಈ ತಿದ್ದುಪಡಿಯು ರಾಷ್ಟ್ರೀಯ ಹಿಂದುಳಿದವರ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆಯನ್ನು ನೀಡಿತ್ತು. ಆರ್ಟಿಕಲ್​​ 338-ಬಿ ಮತ್ತು 342-ಎ ತಿದ್ದುಪಡಿಗಳನ್ನು ಸಂವಿಧಾನಕ್ಕೆ ಸೇರಿಸಲಾಗಿತ್ತು.

ಆರ್ಟಿಕಲ್ 338 (ಬಿ) (9) ಪ್ರಕಾರ, ಯಾವುದೇ ನೀತಿ ನಿಯಮಾವಳಿ ರೂಪಿಸುವಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ರಾಷ್ಟ್ರೀಯ ಹಿಂದುಳಿದವರ ಆಯೋಗವನ್ನು ಸಂಪರ್ಕಿಸುವುದು ಕಡ್ಡಾಯ. ಇನ್ನು ಆರ್ಟಿಕಲ್ 342 ಎ ಪ್ರಕಾರ, ರಾಜ್ಯಪಾಲರೊಂದಿಗೆ ಚರ್ಚಿಸಿ ಭಾರತದ ರಾಷ್ಟ್ರಪತಿಗಳು ಯಾವುದೇ ನಿರ್ದಿಷ್ಟ ಸಮುದಾಯವನ್ನು ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದವರೆಂದು ಘೋಷಿಸಬಹುದು.

ಆಗಸ್ಟ್​ 2018 ರಲ್ಲಿ 102ನೇ ಸಂವಿಧಾನ ತಿದ್ದುಪಡಿಯ ನಂತರ ಯಾವುದೇ ಸಮುದಾಯವನ್ನು ಸಾಮಾಜಿಕ ಅಥವಾ ಆರ್ಥಿಕ ಹಿಂದುಳಿದ ಪಟ್ಟಿಗೆ ಸೇರಿಸುವ ಅಧಿಕಾರವು ಕೇವಲ ರಾಷ್ಟ್ರಪತಿಗಳಿಗೆ ಇದೆ ಎಂದು ಮರಾಠಾ ಮೀಸಲಾತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದ ದೂರುದಾರರು ವಾದಿಸಿದ್ದರು.

ಸಂವಿಧಾನಕ್ಕೆ 102ನೇ ತಿದ್ದುಪಡಿ ಕಾಯ್ದೆ ಜಾರಿಯಾದ 2 ತಿಂಗಳ ನಂತರ ಮಹಾರಾಷ್ಟ್ರ ಸರ್ಕಾರವು ಮರಾಠಾ ಮೀಸಲಾತಿ ಕಾಯ್ದೆ ಜಾರಿ ಮಾಡಿರುವುದರಿಂದ ಆ ಕಾಯ್ದೆ ಅಸಿಂಧುವಾಗಿದೆ ಎಂದು ದೂರುದಾರರು ಆಕ್ಷೇಪಿಸಿದ್ದರು.

ಮುಂದಿನ ದಾರಿ ಏನು?

ಸುಮಾರು ಮೂರು ದಶಕಗಳ ಹಿಂದಿನ ಶೇ 50ರಷ್ಟು ಮೀಸಲಾತಿ ಪ್ರಮಾಣದ ಮಹತ್ವದ ತೀರ್ಪನ್ನು ಮರುಪರಿಶೀಲಿಸಲು ಒಪ್ಪಿಗೆ ನೀಡಿರುವ ಸುಪ್ರೀಂಕೋರ್ಟ್, ಈ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವಂತೆ ಎಲ್ಲಾ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್​ ನೀಡಿದೆ.

ಮಾರ್ಚ್​ 8 ರಂದು, ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ಮರಾಠ ಮೀಸಲಾತಿ ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿತು. ಅಸ್ತಿತ್ವದಲ್ಲಿರುವ ಶೇ 50 ಮೀಸಲಾತಿ ಕೋಟಾವನ್ನು ಏರಿಕೆ ಮಾಡಬೇಕೇ ಎಂದು ರಾಜ್ಯ ಸರ್ಕಾರಗಳಿಗೆ ಪ್ರಶ್ನಿಸಿದ್ದು, ಕೇಂದ್ರದ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (ಒಬಿಸಿ) ನೀಡುವ ಮೀಸಲಾತಿ ಪ್ರಮಾಣದ ತಿದ್ದುಪಡಿಯ ಬಗ್ಗೆ ಅಭಿಪ್ರಾಯ ತಿಳಿಸಲು ಕೋರಿದೆ.

1992 ರಲ್ಲಿ ಇಂದ್ರಾ ಸಾಹ್ನಿ ಪ್ರಕರಣದಲ್ಲಿ 9 ನ್ಯಾಯಾಧೀಶರ ಪೀಠವು ನೀಡಿದ್ದ ಶೇ 50 ಮೀಸಲಾತಿ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ. ಮರಾಠಾ ಮೀಸಲಾತಿ ಪ್ರಕರಣವು ಕೇವಲ ಒಂದು ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಇದರಲ್ಲಿ ದೇಶದ ಎಲ್ಲಾ ರಾಜ್ಯಗಳ ಅಭಿಪ್ರಾಯ ಬೇಕಿದೆ ಎಂದು ಹೇಳಿ ಮಾರ್ಚ್​ 15ಕ್ಕೆ ವಿಚಾರಣೆ ಮುಂದೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.