ETV Bharat / bharat

ಜೋಡಿ ಕೊಲೆ ಪ್ರಕರಣ: ಆರ್‌ಜೆಡಿ ಮಾಜಿ ಸಂಸದ ಪ್ರಭುನಾಥ್ ಸಿಂಗ್​ಗೆ ಜೀವಾವಧಿ ಶಿಕ್ಷೆ ವಿಧಿಸಿದ ಸುಪ್ರೀಂ

ಬಿಹಾರದ ರಾಷ್ಟ್ರೀಯ ಜನತಾ ದಳದ ಮಾಜಿ ಸಂಸದ ಪ್ರಭುನಾಥ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

sc sentence life term ex rjd mp prabhunath singh double murder case

author img

By ETV Bharat Karnataka Team

Published : Sep 1, 2023, 1:37 PM IST

Updated : Sep 1, 2023, 3:38 PM IST

ನವದೆಹಲಿ: 1995ರಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ರಾಜಕಾರಣಿ ಹಾಗೂ ಮಾಜಿ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಸಂಸದ ಪ್ರಭುನಾಥ್ ಸಿಂಗ್‌ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಪ್ರಕರಣದಲ್ಲಿ ಅವರನ್ನು ಖುಲಾಸೆಗೊಳಿಸಿ ಪಾಟ್ನಾದ ಹೈಕೋರ್ಟ್ 2008ರಲ್ಲಿ ನೀಡಿದ್ದ ತೀರ್ಪನ್ನು ಇದೇ ಆಗಸ್ಟ್ 18ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.

ಆಗಸ್ಟ್ 23, 1995 ರಂದು, ವಿಧಾನಸಭಾ ಚುನಾವಣೆ ವೇಳೆ ಇಬ್ಬರ ಕೊಲೆ ನಡೆದಿತ್ತು. ಪ್ರಭುನಾಥ್ ಸಿಂಗ್‌ ಅವರ ಅಣತಿಯಂತೆ ರಾಜೇಂದ್ರ ರೈ ಮತ್ತು ದರೋಗಾ ರೈ ಎಂಬುವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಪ್ರಭುನಾಥ್ ಸಿಂಗ್‌ ತಪ್ಪಿತಸ್ಥ ಎಂದು ಹೇಳಿದ್ದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎ.ಎಸ್. ಓಕಾ, ವಿಕ್ರಮ್ ನಾಥ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ, ಸಿಂಗ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಅಪರಾಧಿಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಈ ಎರಡು ಆಯ್ಕೆಗಳಿವೆ ಎಂದು ತಿಳಿಸಿರುವ ಪೀಠ, ಮೃತರ ಕುಟುಂಬಸ್ಥರಿಗೆ ಹಾಗೂ ಗಾಯಗೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಂತೆಯೂ ರಾಜ್ಯ ಸರ್ಕಾರಕ್ಕೆ ಸೂಚಿಸಿ ಆದೇಶ ಕೊಟ್ಟಿದೆ. 307 ಸೆಕ್ಷನ್​ಗಾಗಿ ಪ್ರಭುನಾಥ್ ಸಿಂಗ್‌ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದ ನ್ಯಾಯಮೂರ್ತಿ ನಾಥ್, 'ಇಂತಹ ಪ್ರಕರಣವನ್ನು ನಾನು ನೋಡಿಲ್ಲ' ಎಂದು ಆದೇಶ ನೀಡುವ ವೇಳೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

1995ರ ಮಾರ್ಚ್‌ನಲ್ಲಿ ರಾಜೇಂದ್ರ ರೈ (18) ಮತ್ತು ದರೋಗಾ ರೈ (47) ಅವರನ್ನು ಛಾಪ್ರಾದ ಮತಗಟ್ಟೆಯೊಂದರ ಬಳಿ ಕೊಂದಿದ್ದಾರೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಹೇಳಿದ್ದ ನ್ಯಾಯಪೀಠ, ಆ. 18ರಂದು ಸಿಂಗ್ ಅವರನ್ನು ದೋಷಿ ಎಂದು ಹೇಳಿತ್ತು. ಸೆಪ್ಟಂಬರ್​ 1ಕ್ಕೆ ತೀರ್ಪು ಕಾಯ್ದಿರಿಸಿತ್ತು.

ಡಿಸೆಂಬರ್ 2008 ರಲ್ಲಿ ಪಾಟ್ನಾ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಸಿಂಗ್ ಅವರನ್ನು ಖುಲಾಸೆಗೊಳಿಸಿತ್ತು. 2012 ರಲ್ಲಿ ಪಾಟ್ನಾ ಹೈಕೋರ್ಟ್ ಅವರ ಖುಲಾಸೆಯನ್ನು ಎತ್ತಿ ಹಿಡಿದಿತ್ತು. ಇದೀಗ ಹೈಕೋರ್ಟ್​ನ ಈ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಸಿಂಗ್ ಅವರನ್ನು ಖುಲಾಸೆಗೊಳಿಸಿರುವ ಹೈಕೋರ್ಟ್​ನ ಆದೇಶ ಪ್ರಶ್ನಿಸಿ ಕೊಲೆಗೀಡಾದ ರಾಜೇಂದ್ರ ರೈ ಅವರ ಸಹೋದರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಸಿಂಗ್ ಅವರನ್ನು ದೋಷಿ ಎಂದು ತೀರ್ಪು ನೀಡುವ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು, ತನ್ನ ತೀರ್ಪಿನಲ್ಲಿ ಮುಖ್ಯ ಅಪರಾಧಿಯಾಗಿದ್ದ ಅಂದಿನ ಸಂಸದ ಪ್ರಭುನಾಥ್ ಸಿಂಗ್ ಅವರಿಗೆ ಆಡಳಿತ ಮತ್ತು ತನಿಖಾ ಸಂಸ್ಥೆಯ ಸಂಪೂರ್ಣ ಬೆಂಬಲವಿರುವುದರಿಂದ ಎಲ್ಲವೂ ಅವರ ಯೋಜನೆ ಮತ್ತು ಆಶಯದಂತೆ ನಡೆಯುತ್ತಿದೆ ಎಂದು ಹೇಳಿತ್ತು.

ಅಲ್ಲದೇ ತೀರ್ಪಿನಲ್ಲಿ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿರುವ ಸಂಗತಿಗಳನ್ನು ಸೇರಿಸಿರುವ ನ್ಯಾಯಾಲಯವು, ಸಿಂಗ್ ಅವರು ತಮ್ಮ ವಿರುದ್ಧದ ಸಾಕ್ಷ್ಯ ನಾಶ ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಹ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ದ್ವೇಷ ಭಾಷಣ ಕೇಸ್​: ಎಸ್​ಪಿ ನಾಯಕ ಆಜಂ​ ಖಾನ್​ ಧ್ವನಿ ಮಾದರಿ ನೀಡುವ ಆದೇಶಕ್ಕೆ ಸುಪ್ರೀಂ ಮಧ್ಯಂತರ ತಡೆ

Last Updated : Sep 1, 2023, 3:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.