ನವದೆಹಲಿ: 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಬಳಿಕ ಹತ್ಯೆ ಪ್ರಕರಣದ ಅಪರಾಧಿಯ ಮರಣದಂಡನೆಯ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಜೀವಾವಧಿಗೆ ಪರಿವರ್ತಿಸಿದೆ. ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ಪೀಠವು ಛತ್ತೀಸ್‌ಗಢ ನಿವಾಸಿ, ಅಪರಾಧಿ ಲೋಚನ್ ಶ್ರೀವಾಸ್‌ನಲ್ಲಿನ ಸುಧಾರಣೆಯನ್ನು ಪರಿಗಣಿಸಿ ಈ ಆದೇಶ ನೀಡಿದೆ. ತ್ವರಿತ ವಿಚಾರಣೆ ಅಪೇಕ್ಷಣೀಯವಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಅಪರಾಧಿ ಲೋಚನ್ ಶ್ರೀವಾಸ್‌ಗೆ ವಿಚಾರಣಾ ನ್ಯಾಯಾಲಯವು ನೀಡಿದ ಮರಣದಂಡನೆ ವಿರುದ್ಧ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಪೀಠವು, ಛತ್ತೀಸ್‌ಗಢದ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. 2016ರ ಜೂನ್ 17 ರಂದು ವಿಚಾರಣಾ ನ್ಯಾಯಾಲಯವು ಲೋಚನ್ ಅಪರಾಧಿ ಎಂದು ತೀರ್ಪು ನೀಡಿ ಅದೇ ದಿನ ಮರಣದಂಡನೆಯನ್ನೂ ಪ್ರಕಟಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು.
'ಕೆಳ ನ್ಯಾಯಾಲಯ ಅಪರಾಧಿ ಹಿನ್ನೆಲೆ ಪರಿಗಣಿಸಿಲ್ಲ'..
ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಅಪರಾಧವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡಿದೆ. ಆದರೆ, ಅಪರಾಧಿಯ ಮನಸ್ಥಿತಿ, ಸಾಮಾಜಿಕ ಆರ್ಥಿಕ ಹಿನ್ನೆಲೆ ಇತ್ಯಾದಿಗಳನ್ನು ಪರಿಗಣಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರನ್ನೊಳಗೊಂಡ ಪೀಠ ಹೇಳಿದೆ.
ಜೈಲಿನಲ್ಲಿ ಅಪರಾಧಿಯ ನಡವಳಿಕೆ ತೃಪ್ತಿಕರವಾಗಿದೆ ಎಂದು ತಿಳಿದು ಬಂದಿದೆ. ಯಾವುದೇ ಕ್ರಿಮಿನಲ್ ಪೂರ್ವ ಸಿದ್ಧತೆಗಳಿಲ್ಲ. ಇದು ಮೇಲ್ಮನವಿದಾರ ಮಾಡಿದ ಮೊದಲ ಅಪರಾಧವಾಗಿದೆ. ನಿಸ್ಸಂದೇಹವಾಗಿ, ಹೇಯವಾದದ್ದು, ಅದು ಹೇಳಿದೆ. ಆರೋಪಿ ಪರ ವಾದ ಮಂಡಿಸುವ ವಕೀಲರಿಗೆ ವಾದ ಮಂಡಿಸಲು ಸಾಕಷ್ಟು ಸಮಯಾವಕಾಶ ನೀಡಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ಪ್ರಾಸಿಕ್ಯೂಷನ್ ಪ್ರಕಾರ, ಸಂತ್ರಸ್ತೆ ಮತ್ತು ಆಕೆಯ ಕುಟುಂಬವು ಅಪರಾಧಿ ಅದೇ ಕಟ್ಟಡದಲ್ಲಿ ವಾಸಿಸುತ್ತಿತ್ತು. 2016ರ ಫೆಬ್ರವರಿ 24 ರಂದು ಬಾಲಕಿ ಕಾಣೆಯಾಗಿದ್ದಳು. ಬಳಿಕ ರಸ್ತೆಯ ಪಕ್ಕದ ಪೊದೆಯಲ್ಲಿ ಗೋಣಿ ಚೀಲದೊಳದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದರಿಂದ ಅನುಮಾನಗೊಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ವಿಚಾರಣೆ ಲೋಚನ್ ಕೃತ್ಯದ ಬಗ್ಗೆ ಮಾಹಿತಿ ಸಿಕ್ಕಿತ್ತು.
ಇದನ್ನೂ ಓದಿ: ರಾಜ್ಯಸಭೆಗೆ ರಂಜನ್ ಗೊಗೋಯ್ ಗೈರು ವಿರುದ್ಧ ವಿಶೇಷಾಧಿಕಾರ ನಿರ್ಣಯ.. ಕಾನೂನು ಕೆಲಸ ಮಾಡುತ್ತೆ ಬಿಡಿ : ರಂಜನ್