ನವದೆಹಲಿ: ಇರಾನ್‌ನ ಮಹಿಳಾ ಚೆಸ್ ಆಟಗಾರ್ತಿ ಅಂತಾರಾಷ್ಟ್ರೀಯ ಚೆಸ್ ಟೂರ್ನಮೆಂಟ್ನಲ್ಲಿ ಹಿಜಾಬ್ ಧರಿಸಿದೇ ಭಾಗವಹಿಸುವ ಮೂಲಕ ಹಿಜಾಬ್ ವಿರುದ್ಧ ಪ್ರತಿಭಟಿಸುತ್ತಿರುವವರಿಗೆ ಬೆಂಬಲ ಸೂಚಿಸಿದ್ದಾರೆ.
ಅಂತಾರಾಷ್ಟ್ರೀಯ ಚೆಸ್ ಆಟಗಾರ್ತಿ ಸಾರಾ ಖದೇಮ್ ಅವರು ಕಜಕಿಸ್ತಾನದ ಅಲ್ಮಾಟಿಯಲ್ಲಿ ನಡೆಯುತ್ತಿರುವ FIDE ವರ್ಲ್ಡ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ತಲೆಗೆ ಸ್ಕಾರ್ಫ್ ಮತ್ತು ಹಿಜಾಬ್ ಧರಿಸಿದೇ ಭಾಗವಹಿಸಿ ಪಂದ್ಯವನ್ನು ಆಡುವ ಮೂಲಕ ಹಿಜಾಬ್ಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಇರಾನ್ ಮಹಿಳೆಯರು ದೇಶ ಮತ್ತು ವಿದೇಶಗಳಲ್ಲಿ ನಡೆಯುವ ಯಾವುದೇ ಪಂದ್ಯಗಳಲ್ಲಿ ಭಾಗವಹಿಸಿದರೂ ಆ ಸಮಯದಲ್ಲಿ ಹಿಜಾಬ್ ಧರಿಸುವುದನ್ನು ಅಲ್ಲಿಯ ಸರ್ಕಾರ ಕಡ್ಡಾಯಗೊಳಿಸಿದೆ.
ಆದರೇ ಸೆಪ್ಟೆಂಬರ್ ತಿಂಗಳಿನಲ್ಲಿ ಇರಾನ್‌ನಲ್ಲಿ ಹಿಜಾಬ್ ವಿರೋಧಿಸಿ, ಮಹಿಳೆಯರು ರಸ್ತೆಗಿಳಿದು ಪ್ರತಿಭಟನೆಗಳನ್ನು ಪ್ರಾರಂಭಿಸಿದರು. ಇದಕ್ಕೆ ಬೆಂಬಲವಾಗಿ ಮಹಿಳಾ ಕ್ರೀಡಾಪಟುಗಳು ಹಿಜಾಬ್ ವಿರೋಧಿಗೆ ಸಾತ್ ನೀಡುತಿದ್ದಾರೆ. ಇನ್ನು ಸಾರಾ ಅವರು ಹಿಜಾಬ್ ಧರಿಸದೇ ಪಂದ್ಯದಲ್ಲಿ ಭಾಗವಹಿಸಿರುವ ಫೋಟೋವನ್ನು ಅಂತಾರಾಷ್ಟೀಯ ಚೆಸ್ ಒಕ್ಕೂಟ ಪೋಸ್ಟ್ ಮಾಡಿದೆ. ಪ್ರಸ್ತುತ ಸಾರಾ ಅವರು ವಿಶ್ವ ಚೆಸ್ ಶ್ರೇಯಾಂಕದಲ್ಲಿ 804ನೇ ಸ್ಥಾನದಲ್ಲಿದ್ದಾರೆ.
ಇದಕ್ಕೂ ಮೊದಲು ಅಕ್ಟೋಬರ್ ತಿಂಗಳಿನಲ್ಲಿ ಇರಾನಿನ ಪರ್ವತಾರೋಹಿ ಎಲ್ನಾಜ್ ರೆಕಾಬಿ ಎಂಬುವವರು ದಕ್ಷಿಣ ಕೊರಿಯಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಹೆಡ್ ಸ್ಕಾರ್ಫ್ ಧರಿಸದೇ ಭಾಗವಹಿಸಿದ್ದರು. ಬಳಿಕ ಈ ಬಗ್ಗೆ ಅವರಿಗೆ ಪ್ರಶ್ನಿಸಿದಾಗ ಉದ್ದೇಶ ಪೂರ್ವಕವಾಗಿಯೇ ಹಾಗೆ ಮಾಡಿದ್ದೇನೆ ಎಂಬ ಹೇಳಿಕೆ ನೀಡಿದ್ದರು. ಅಲ್ಲದೇ ಇರಾನ್‌ನ ಫುಟ್ಬಾಲ್ ತಂಡ ಇತ್ತೀಚೆಗೆ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ದೇಶದ ರಾಷ್ಟ್ರಗೀತೆ ಹಾಡದೇ ಮೌನವಾಗಿರುವ ಮೂಲಕ ಹಿಜಾಬ್ಗೆ ವಿರೋಧಿಸಿತ್ತು.
ಹಿಜಾಬ್ ಚಳವಳಿ ಎಂದರೇನು: ಇರಾನ್‌ನಲ್ಲಿ, 22 ವರ್ಷದ ಕುರ್ದಿಶ್ ಹುಡುಗಿ ಮಹ್ಸಾ ಅಮಿನಿ ಎಂಬುವವರು ಡ್ರೆಸ್ ಕೋಡ್ ಉಲ್ಲಂಘಿಸಿದ್ದಾರೆ ಎಂದು ಬಂಧಿಸಲಾಗಿತ್ತು. ಬಳಿಕ ಪೊಲೀಸ್ ಕಸ್ಟಡಿಯಲ್ಲಿ ನಿಗೂಡವಾಗಿ ಅವರು ಸಾವನ್ನಪ್ಪಿದರು. ಇದರಿಂದ ಆಕ್ರೋಶಗೊಂಡ ಮಹಿಳೆಯರು ದೇಶಾದ್ಯಂತ ರಸ್ತೆಗಿಳಿದು ಸರ್ಕಾರದ ವಿರುದ್ಧ ಪ್ರತಭಟಿಸಿ ಹಿಜಾಬ್ ಚಳವಳಿ ಆರಂಭಿಸಿದ್ದರು. ಇಂದಿಗೂ ಇರಾನ್‌ನಲ್ಲಿ ಹಿಜಾಬ್ ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸುತಿದ್ದಾರೆ.
ಇದನ್ನೂ ಓದಿ: ಇರಾನ್‌ನ ಹಿಜಾಬ್ ವಿರೋಧಿ ಪ್ರತಿಭಟನೆಗೆ ಕೋಯಿಕ್ಕೋಡ್ನಲ್ಲಿ ಸಾತ್..